India vs Australia: 144 ವರ್ಷಗಳ ಇತಿಹಾಸಕ್ಕೆ ಬ್ರೇಕ್: ಮೈದಾನಕ್ಕಿಳಿದ ಲೇಡಿ ಅಂಪೈರ್..!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್​ ಪಂದ್ಯ ಮಳೆಯ ನಡುವೆ ಮೊದಲ ದಿನದಾಟ ಅಂತ್ಯಗೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆತಿಥೇಯರು ಆರಂಭದಲ್ಲೇ 1 ವಿಕೆಟ್ ಕಳೆದುಕೊಂಡಿತಾದರೂ ಬಳಿಕ ಅದ್ಭುತ ಪ್ರದರ್ಶನ ತೋರಿತು.

Claire Polosak

Claire Polosak

  • Share this:
    ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶುರುವಾಗಿರುವ ಆಸ್ಟ್ರೇಲಿಯಾ-ಭಾರತ ನಡುವಣ ಮೂರನೇ ಟೆಸ್ಟ್​ ಪಂದ್ಯದ ವೇಳೆ ಎಲ್ಲರ ಗಮನ ಸೆಳೆದಿದ್ದು ಲೇಡಿ ಅಂಪೈರ್ ಆಗಮನ. ಹೌದು, ಇದೇ ಮೊದಲ ಬಾರಿ ಟೆಸ್ಟ್ ಕ್ರಿಕೆಟ್​ನಲ್ಲಿ ಮಹಿಳಾ ಅಂಪೈರ್​ ಒಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ. 144 ವರ್ಷಗಳ ಇತಿಹಾಸ ಹೊಂದಿರುವ ಟೆಸ್ಟ್​ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯದ ಕ್ಲೇರ್ ಪೊಲೊಸಾಕ್ ನಾಲ್ಕನೇ ಅಂಪೈರ್ ಅಥವಾ ರಿಸರ್ವ್​ ಪಾತ್ರವನ್ನು ನಿರ್ವಹಿಸಲಿದ್ದಾರೆ.

    ಇದರೊಂದಿಗೆ ಪುರುಷರ ಟೆಸ್ಟ್ ಪಂದ್ಯದಲ್ಲಿ ಇದೇ ಮೊದಲ ಬಾರಿ ಮಹಿಳಾ ಅಂಪೈರೊಬ್ಬರು ಕಣಕ್ಕಿಳಿದ್ದಂತಾಗಿದೆ. ಈ ಹಿಂದೆ ವಿಂಡ್‌ಹೋಕ್‌ನಲ್ಲಿ ನಡೆದ ನಮೀಬಿಯಾ ಮತ್ತು ಒಮಾನ್ ತಂಡಗಳ ನಡುವಿನ ಐಸಿಸಿಯ ಡಿವಿಷನ್ 2 ಲೀಗ್‌ನಲ್ಲಿ ಪುರುಷರ ಏಕದಿನ ಪಂದ್ಯದಲ್ಲಿ 32 ಹರೆಯದ ಪೊಲೊಸಾಕ್ ಆನ್-ಫೀಲ್ಡ್ ಅಂಪೈರ್ ಆಗಿ ಸಹ ಕಾರ್ಯನಿರ್ವಹಿಸಿದ್ದರು.

    Claire Polosak


    2017 ರಲ್ಲಿ ಆಸ್ಟ್ರೇಲಿಯಾದ ಪುರುಷರ ದೇಶೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಕ್ಲೇರ್ ಪೊಲೊಸಾಕ್ ಪಾತ್ರರಾಗಿದ್ದಾರೆ. ಇನ್ನು 2016 ರಲ್ಲಿ, ನ್ಯೂಜಿಲೆಂಡ್‌ನ ಕ್ಯಾಥಿ ಕ್ರಾಸ್ ಮತ್ತು ಪೊಲೊಸಾಕ್ ಅವರು ಮಹಿಳಾ ಟಿ 20 ವಿಶ್ವಕಪ್‌ನಲ್ಲಿ ಕಾರ್ಯ ನಿರ್ವಹಿಸಿದ ಮೊದಲ ಮಹಿಳಾ ಅಂಪೈರ್‌ಗಳಾಗಿದ್ದರು.

    ಪೊಲೊಸಾಕ್ 17 ಮಹಿಳಾ ಏಕದಿನ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಹೆಚ್ಚುವರಿಯಾಗಿ 8 ಪಂದ್ಯಗಳಲ್ಲಿ ಮೂರನೇ ಅಂಪೈರ್, ಮತ್ತು 33 ಅಂತರಾಷ್ಟ್ರೀಯ ಮಹಿಳಾ ಟಿ20 ಪಂದ್ಯಗಳಲ್ಲಿ ತೀರ್ಪುಗಾರ್ತಿಯ ಜವಾಬ್ದಾರಿವಹಿಸಿದ್ದರು. ಇದೀಗ ಪುರುಷರ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ಜವಾಬ್ದಾರಿವಹಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

    ಇನ್ನು ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್​ ಪಂದ್ಯ ಮಳೆಯ ನಡುವೆ ಮೊದಲ ದಿನದಾಟ ಅಂತ್ಯಗೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆತಿಥೇಯರು ಆರಂಭದಲ್ಲೇ 1 ವಿಕೆಟ್ ಕಳೆದುಕೊಂಡಿತಾದರೂ ಬಳಿಕ ಅದ್ಭುತ ಪ್ರದರ್ಶನ ತೋರಿತು. ಪದಾರ್ಪಣೆ ಪಂದ್ಯದಲ್ಲೇ ವಿಲ್​ ಪುಕೋವ್​ಸ್ಕಿ ಭರ್ಜರಿ ಅರ್ಧಶತಕ ಸಿಡಿಸಿದರೆ, ಮಾರ್ನಸ್ ಲಾಬುಶೇನ್ ಆಟ ತಂಡಕ್ಕೆ ನೆರವಾಯಿತು. ಪರಿಣಾಮ ಆಸ್ಟ್ರೇಲಿಯಾ ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿದೆ.
    Published by:zahir
    First published: