China Open: ಪ್ರಿ ಕ್ವಾರ್ಟರ್​​ನಲ್ಲಿ ಸೋತ ಸಿಂಧು; ಟೂರ್ನಿಯಿಂದಲೇ ಔಟ್

ಬಿಡಬ್ಲ್ಯುಎಫ್ ಚಾಂಪಿಯನ್​ ಪಟ್ಟ ಅಲಂಕರಿಸಿದ ಸಿಂಧು ಅವರು ಪ್ರತಿಷ್ಠಿತ ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಮೆಂಟ್​ನಿಂದ ಹೊರ ಬಿದ್ದಿರುವುದು ಅಚ್ಚರಿ ಮೂಡಿಸಿದೆ.

Vinay Bhat | news18-kannada
Updated:September 19, 2019, 3:49 PM IST
China Open: ಪ್ರಿ ಕ್ವಾರ್ಟರ್​​ನಲ್ಲಿ ಸೋತ ಸಿಂಧು; ಟೂರ್ನಿಯಿಂದಲೇ ಔಟ್
ಪಿ ವಿ ಸಿಂಧು
  • Share this:
ಬೆಂಗಳೂರು (ಸೆ. 19) ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಇತ್ತೀಚೆಗಷ್ಟೆ ಬಿಡಬ್ಲ್ಯುಎಫ್ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದರು.

ಆದರೀಗ ಸಿಂಧು ಅವರು ಪ್ರತಿಷ್ಠಿತ ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಮೆಂಟ್‌ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಂಡಿದ್ದಾರೆ. ಅಲ್ಲದೆ ಕೂಟದಿಂದಲೇ ಹೊರಬಿದ್ದು ಆಘಾತ ಅನುಭವಿಸಿದ್ದಾರೆ.

ಇಂದು ನಡೆದ ಮಹಿಳಾ ಸಿಂಗಲ್ಸ್​ನ ಪ್ರಿ ಕ್ವಾರ್ಟರ್ ಹಣಾಹಣಿಯಲ್ಲಿ ಸಿಂಧು ಅವರು ಥಾಯ್ಲೆಂಡ್‌ನ ಪಾರ್ನ್‌ಪಾವೇ ಚೊಚೊವಾಂಗ್ ವಿರುದ್ಧ 12-21, 21-13, 21-19  ಅಂತರದಿಂದ ಸೋತು ಟೂರ್ನಿಯಿಂದ ಹೊರ ನಡೆದರು.

ರೋಹಿತ್ ಹಿಂದಿಕ್ಕಿ ದಾಖಲೆ ಬರೆದ ಕೊಹ್ಲಿಗೆ ಈ ಒಂದು ವಿಚಾರದಲ್ಲಿ ಹಿಟ್​ಮ್ಯಾನ್ ಹತ್ತಿರವೂ ಸುಳಿಯಲಾಗಿಲ್ಲ

ಆರಂಭದ ಸೆಟ್​ನಲ್ಲಿ ಸುಲಭ ಜಯ ಸಾಧಿಸಿದ್ದ ಸಿಂಧು, ಬಳಿಕ ಎರಡನೇ ಹಾಗೂ ಮೂರನೇ ಸೆಟ್‌ಗಳಲ್ಲಿ ಹಿನ್ನಡೆ ಅನುಭವಿಸಬೇಕಾಗಿ ಬಂತು.

ಬಿಡಬ್ಲ್ಯುಎಫ್ ಚಾಂಪಿಯನ್​ ಪಟ್ಟ ಅಲಂಕರಿಸಿದ ಭಾರತ ಮೊದಲ ತಾರೆ ಎಂಬ ದಾಖಲೆ ಬರೆದು ಇತಿಹಾಸದ ಪುಟ ಸೇರಿದ್ದ ಸಿಂಧು ಅವರು ಪ್ರತಿಷ್ಠಿತ ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಮೆಂಟ್​ನಿಂದ ಹೊರ ಬಿದ್ದಿರುವುದು ಅಚ್ಚರಿ ಮೂಡಿಸಿದೆ.

First published:September 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading