• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Chetan Sharma: ಇಂಜೆಕ್ಷನ್ ಪಡೆದು ಫಿಟ್ನೆಸ್ ಕಾಪಾಡ್ತಿದ್ದಾರೆ ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್ಸ್​: ಚೇತನ್ ಶರ್ಮಾ ಸ್ಫೋಟಕ ಹೇಳಿಕೆ

Chetan Sharma: ಇಂಜೆಕ್ಷನ್ ಪಡೆದು ಫಿಟ್ನೆಸ್ ಕಾಪಾಡ್ತಿದ್ದಾರೆ ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್ಸ್​: ಚೇತನ್ ಶರ್ಮಾ ಸ್ಫೋಟಕ ಹೇಳಿಕೆ

ಚೇತನ್ ಶರ್ಮಾ

ಚೇತನ್ ಶರ್ಮಾ

Chetan Sharma: ಭಾರತ ತಂಡದ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಅವರ ಕುಟುಕು ಕಾರ್ಯಾಚರಣೆಯೊಂದು ಮುನ್ನೆಲೆಗೆ ಬಂದಿದೆ. ಚೇತನ್ ಶರ್ಮಾ ಈ ಸ್ಟಿಂಗ್‌ನಲ್ಲಿ ಹಲವು ದೊಡ್ಡ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

  • Share this:

ಭಾರತ ತಂಡದ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ (Chetan Sharma) ಅವರ ಕುಟುಕು ಕಾರ್ಯಾಚರಣೆಯೊಂದು ಮುನ್ನೆಲೆಗೆ ಬಂದಿದೆ. ಚೇತನ್ ಶರ್ಮಾ ಈ ಸ್ಟಿಂಗ್‌ನಲ್ಲಿ ಹಲವು ದೊಡ್ಡ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಟೀಂ ಇಂಡಿಯಾದ (Team India) ಆಟಗಾರರು ನಿಷೇಧಿತ ಚುಚ್ಚುಮದ್ದು ತೆಗೆದುಕೊಳ್ಳುವ ಮೂಲಕ ತಮ್ಮನ್ನು ತಾವು ಫಿಟ್ ಎಂದು ಸಾಬೀತುಪಡಿಸಿಕೊಳ್ಳುತ್ತಾರೆ ಎಂಬ ದೊಡ್ಡ ವಿಷಯವನ್ನು ಬಹಿರಂಗಪಡಿಸಿತ್ತಾರೆ. ಭಾರತ ತಂಡದ ಕ್ರಿಕೆಟಿಗರು ತೆಗೆದುಕೊಳ್ಳುತ್ತಿರುವ ಚುಚ್ಚುಮದ್ದು ಡೋಪ್ ಪರೀಕ್ಷೆಯಲ್ಲೂ ಸಿಕ್ಕಿಬೀಳುವುದಿಲ್ಲ ಎಂದು ಹೇಳಿದ್ದಾರೆ.


ಸ್ಪೋಟಕ ವಿಷಯ ಬಹಿರಂಗ:


WION news ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಈ ವಿಚಾರಗಳನ್ನು ಚೇತನ್ ಶರ್ಮಾ ಅವರು ಬಹಿರಂಗಪಡಿಸಿದ್ದಾರೆ. ಕುಟುಕು ಕಾರ್ಯಾಚರಣೆಯಲ್ಲಿ, ಅನೇಕ ಆಟಗಾರರು ಶೇಕಡಾ 80ರಷ್ಟು ಫಿಟ್ ಆಗಿರುವಾಗ ಚುಚ್ಚುಮದ್ದಿನ ಮೂಲಕ 100 ಪ್ರತಿಶತ ಫಿಟ್ ಎಂದು ಸಾಬೀತುಪಡಿಸುತ್ತಾರೆ ಎಂದು ಚೇತನ್ ಶರ್ಮಾ ಹೇಳಿಕೊಂಡಿದ್ದಾರೆ. ಈ ಚುಚ್ಚುಮದ್ದು ನೋವು ನಿವಾರಕವಲ್ಲ. ಈ ಚುಚ್ಚುಮದ್ದುಗಳು ಡೋಪ್ ಪರೀಕ್ಷೆಯಲ್ಲೂ ಸಿಕ್ಕಿಬೀಳದಂತಹ ಔಷಧವಾಗಿದೆ ಎಂದಿದ್ದಾರೆ. ಬಿಸಿಸಿಐ ವೈದ್ಯರನ್ನು ಹೊರತುಪಡಿಸಿ ಈ ಕ್ರಿಕೆಟಿಗರು ತಮ್ಮದೇ ಆದ ವೈದ್ಯರನ್ನು ಹೊಂದಿದ್ದಾರೆ ಎಂದು ಚೇತನ್ ಶರ್ಮಾ ಹೇಳಿದ್ದಾರೆ. ಈ ಮೂಲಕ ಆಟಗಾರರು ಪ್ರಮುಖ ಪಂದ್ಯಾವಳಿಯ ಮೊದಲು ಫಿಟ್ ಎಂದು ಪರಿಗಣಿಸಬಹುದು ಎಂದು ಹೇಳಿದ್ದಾರೆ.


ಬುಮ್ರಾ ಸುತ್ತ ಹೊಸ ವಿವಾದ:


ಜಸ್ಪ್ರೀತ್ ಬುಮ್ರಾ ಅವರು ಗಾಯದ ಕಾರಣ 2022ರ ಟಿ 20 ವಿಶ್ವಕಪ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದಿಂದ ಅವರು ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದರು. ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯಲ್ಲಿ ಎರಡು ಪಂದ್ಯಗಳನ್ನು ಆಡಿದ ಬಳಿಕ ಮತ್ತೊಮ್ಮೆ ಗಾಯಗೊಂಡಿದ್ದರು. ಇದರಿಂದಾಗಿ ದಕ್ಷಿಣ ಆಫ್ರಿಕಾಯಲ್ಲಿ ಅವರು ಕಣಕ್ಕಿಳಿಯಲಿಲ್ಲ. ಚೇತನ್ ಶರ್ಮಾ ಅವರ ಸ್ಟಿಂಗ್‌ನಲ್ಲಿ ಬುಮ್ರಾ ಹೆಸರನ್ನು ನೇರವಾಗಿ ತೆಗೆದುಕೊಳ್ಳಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರಿಗೆ ಬಲವಂತವಾಗಿ ಸ್ಥಾನ ನೀಡಲಾಯಿತು ಎಂದಿದ್ದಾರೆ. ಅವರ ಗಾಯ ಎಷ್ಟು ಗಂಭೀರವಾಗಿದೆ ಎಂದರೆ ಅವರು ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ನಲ್ಲಿ ಆಡಿದ್ದರೆ ಕನಿಷ್ಠ ಒಂದು ವರ್ಷ ತಂಡದಿಂದ ಹೊರಗುಳಿಯುತ್ತಿದ್ದರು ಎಂದಿದ್ದಾರೆ.


ಇದನ್ನೂ ಓದಿ: WPL 2023 Schedule: ಮಹಿಳಾ ಐಪಿಎಲ್​ ವೇಳಾಪಟ್ಟಿ ಪ್ರಕಟ, RCB ಪಂದ್ಯಗಳು ಯಾವಾಗ? ಇಲ್ಲಿದೆ ಮಾಹಿತಿ


NCA ಕುರಿತು ಪ್ರಶ್ನೆ:


ಚೇತನ್ ಶರ್ಮಾ ಅವರ ಕುಟುಕು ಕಾರ್ಯಾಚರಣೆಯಲ್ಲಿ ಹೇಳಿರುವ ವಿಚಾರಗಳ ಕಾರಣ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮೇಲೂ ಪ್ರಶ್ನೆಗಳು ಎದ್ದಿವೆ. ವಿವಿಎಸ್ ಲಕ್ಷ್ಮಣ್ ಪ್ರಸ್ತುತ ಎನ್‌ಸಿಎ ಅಧ್ಯಕ್ಷರಾಗಿದ್ದಾರೆ. ಟೀಂ ಇಂಡಿಯಾದಲ್ಲಿ ಕೆಲವು ಸ್ಟಾರ್ ಆಟಗಾರರಿದ್ದಾರೆ, ಅವರು ಫಿಟ್ ಇಲ್ಲದಿದ್ದರೂ ಬಲವಂತವಾಗಿ ಫಿಟ್ ಎಂದು ಘೋಷಿಸುತ್ತಾರೆ ಎನ್ನುವ ಮೂಲಕ ಹೊಸ ವಿವಾದ ಹುಟ್ಟಿಹಾಕಿದ್ದಾರೆ.




ರೋಹಿತ್ ಶರ್ಮಾ ನಾಯಕತ್ವದಿಂದ ದೂರ:


ಇನ್ನು, ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚಗೆ ಕಾರಣವಾದ ನಂತರ, ಚೇತನ್‌ ಶರ್ಮಾ ಅವರ ಭವಿಷ್ಯವನ್ನು ಬಿಸಿಸಿಐ ಕಾರ್ಯದರ್ಶಿ ಜಯ ಶಾ ನಿರ್ಧಾರ ಮಾಡುವ ಸಾಧ್ಯತೆ ಹೆಚ್ಚಿದೆ. ಇದರ ನಡುವೆ , ಮುಂದಿನ ದಿನಗಳಲ್ಲಿ ಭಾರತ ತಂಡದ 3 ಸ್ಟಾರ್​ ಆಟಗಾರರು ಟಿ20 ಕ್ರಿಕೆಟ್​ನಿಂದ ಹೊರಗುಳಿಯಲಿದ್ದಾರೆ. ಅಲ್ಲದೇ ಟಿ20 ತಂಡದ ನಾಯಕನಾಗಿ ಹಾರ್ದಿಕ್‌ ಪಾಂಡ್ಯ ಮುಂದುವರೆಯಲಿದ್ದಾರೆ ಎನ್ನುವ ಮೂಲಕ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ದೂರ ಸರಿಯಲಿದ್ದಾರೆ ಎನ್ನುವ ಮಾತುಗಳನ್ನು ಚೇತನ್ ಶರ್ಮಾ ಹೇಳಿದ್ದಾರೆ. ಇವುಗಳಲ್ಲದೇ ಶರ್ಮಾ ಹೇಳಿರುವ ಇನ್ನೂ ಅನೇಕ ವಿಚಾರಗಳು ಕ್ರಿಕೆಟ್​ ಲೋಕದಲ್ಲಿ ಹೊಸ ಸಂಚಲನವ್ನನೇ ಮೂಡಿಸಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು