ಭಾರತ ತಂಡದ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ (Chetan Sharma) ಅವರ ಸ್ಟಿಂಗ್ ಆಪರೇಷನ್ ಕ್ರಿಕೆಟ್ (Cricket) ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಖಾಸಗಿ ಸುದ್ದಿ ವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಸುಳ್ಳು ಹೇಳಿದ್ದಾರೆ. ಅವರು ಸುಳ್ಳುಗಾರ ಎಂಬರ್ಥದಲ್ಲಿ ಹೇಳಿದ್ದಾರೆ. ವಿರಾಟ್ ನಂತರ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾಗೆ (Rohit Sharma) ನಾಯಕತ್ವವನ್ನು ಹಸ್ತಾಂತರಿಸುವುದರಿಂದ, ವಿರಾಟ್ ಕೊಹ್ಲಿ ಮತ್ತು ಆಗಿನ ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ ನಡುವಿನ ವಿವಾದದ ಬಗ್ಗೆ ಮಾತನಾಡಿದ್ದಾರೆ. ಸೌರವ್ ಗಂಗೂಲಿ ಕುರಿತು ವಿರಾಟ್ ಕೊಹ್ಲಿ ಹೇಳಿರುವುದು ಸುಲ್ಳು ಎಂದು ಶರ್ಮಾ ಹೇಳಿದ್ದಾರೆ.
ಹೊಸ ಬಾಂಬ್ ಸಿಡಿಸಿದ ಶರ್ಮಾ:
ಭಾರತ ತಂಡದ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಕುಟುಕು ಕಾರ್ಯಾಚರಣೆಯಲ್ಲಿ ಮಾತನಾಡಿದ್ದು, ಆಟಗಾರ ಮತ್ತು ಬಿಸಿಸಿಐ ನಡುವಿನ ಯಾವುದೇ ವಿವಾದ ಅಪಾಯಕಾರಿ ಆಗಿರುತ್ತದೆ. ಏಕೆಂದರೆ ಅದು ಆಟಗಾರ ಮತ್ತು ಬಿಸಿಸಿಐ ಪರಿಸ್ಥಿತಿಯನ್ನು ಹದಗೆಡಿಸುತ್ತದೆ. ಇಡೀ ವಿಷಯದಲ್ಲಿ ಯಾರು ತಪ್ಪು ಎಂದು ನಂತರ ಚರ್ಚಿಸಲಾಗುವುದು. ಇದು ಬಿಸಿಸಿಐ ಮೇಲೆ ನೇರ ದಾಳಿಯಾದಂತಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಷ್ಟವಾಗುವುದು ಕ್ರಿಕೆಟಿಗರಿಗೆ ಮಾತ್ರ ಎಂದು ಹೇಳಿದ್ದಾರೆ.
ಇದರ ನಡುವೆ ಬಿಸಿಸಿಐ ಅಧ್ಯಕ್ಷರಿಂದಾಗಿ ತಮ್ಮ ನಾಯಕತ್ವ ಹೋಯಿತು ಎಂದು ವಿರಾಟ್ ಕೊಹ್ಲಿ ಭಾವಿಸಿದ್ದಾರೆ. ಆದರೆ ಕೊಹ್ಲಿ ನಾಯಕತ್ವ ತೊರೆಯುವ ಮುನ್ನ ಆಯ್ಕೆ ಸಮಿತಿಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಒಟ್ಟು 9 ಮಂದಿ ಸದಸ್ಯರಿದ್ದರು. ನಾಯಕತ್ವ ತೊರೆಯುವ ಮುನ್ನ ಒಮ್ಮೆ ಯೋಚಿಸಿ ಎಂದು ಸೌರವ್ ಗಂಗೂಲಿ ಅವರು ಕೊಹ್ಲಿಗೆ ಸ್ಪಷ್ಟವಾಗಿ ಹೇಳಿದ್ದರು. ಅವರು ಅದರ ಬಗ್ಗೆ ಗಮನ ಹರಿಸಲಿಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಹೊರತಾಗಿ 9 ಮಂದಿ ಸಭೆಯಲ್ಲಿದ್ದರು. ಇವರೆಲ್ಲರೂ ಆಯ್ಕೆಗಾರರು ಮತ್ತು ಬಿಸಿಸಿಐಗೆ ಸಂಬಂಧಿಸಿದ ವ್ಯಕ್ತಿಗಳು ಎಂದಿದ್ದಾರೆ.
ಕೊಹ್ಲಿ ಸುಳ್ಳು ಹೇಳಿದ್ದಾರೆ:
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೊರಡುವ ಮೊದಲು ಪತ್ರಿಕಾಗೋಷ್ಠಿಯು ತಂಡದ ಬಗ್ಗೆ ನಡೆಸಬೇಕಿತ್ತು. ಆದರೆ ವಿರಾಟ್ ನಾಯಕತ್ವದ ವಿಚಾರವನ್ನು ಅವರು ಏಕೆ ಪ್ರಸ್ತಾಪಿಸಿದರು ಎಂಬುದು ನನಗೆ ತಿಳಿದಿಲ್ಲ. ಬಹುಶಃ ಅವರು ಇದನ್ನು ಉದ್ದೇಶಪೂರ್ವಕವಾಗಿ ಮಾಡಿರಬಹುದು. ನಿಜ ಹೇಳಬೇಕೆಂದರೆ ಕೊಹ್ಲಿ ಹೇಳಿದ್ದು ಸುಳ್ಳು. ಅದರ ಬಗ್ಗೆ ಯೋಚಿಸುವಂತೆ ಗಂಗೂಲಿ ಅವರಿಗೆ ಹೇಳಿದ್ದರು. ವಿರಾಟ್ ಯಾಕೆ ಸುಳ್ಳು ಹೇಳಿದರೋ ಗೊತ್ತಿಲ್ಲ. ಇದು ವಿವಾದವಾಯಿತು. ಇದನ್ನು ಬೋರ್ಡ್ ಗಂಭೀರವಾಗಿ ತೆಗೆದುಕೊಂಡಿತು.
ಅವರು ಯಾಕೆ ಈ ಸುಳ್ಳು ಹೇಳಿದರು? ವೈಟ್ ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ನಾಯಕತ್ವದ ಹಿಂದೆ ಸೌರವ್ ಗಂಗೂಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಭಾವಿಸುತ್ತಿದ್ದರು ಎಂದಿದ್ದಾರೆ. ಆಯ್ಕೆಗಾರರು ರೋಹಿತ್ ಶರ್ಮಾ ಅವರನ್ನು ಬೆಂಬಲಿಸಿದರು ಎಂದು ಹೇಳಲು ಸಾಧ್ಯವಿಲ್ಲ. ಜೊತೆಗೆ ಸೌರವ್ ಗಂಗೂಲಿ ರೋಹಿತ್ಗೆ ಬೆಂಬಲ ನೀಡಿದ್ದಾರೆ ಎಂದು ಹೇಳಬೇಡಿ ಎಂದಿದ್ದಾರೆ.
ವಿವಾದಾತ್ಮಕ ಮಾಹಿತಿ ಬಿಚ್ಚಿಟ್ಟ ಚೇತನ್ ಶರ್ಮಾ:
ಅನೇಕ ಆಟಗಾರರು ಶೇಕಡಾ 80ರಷ್ಟು ಫಿಟ್ ಆಗಿರುವಾಗ ಚುಚ್ಚುಮದ್ದಿನ ಮೂಲಕ 100 ಪ್ರತಿಶತ ಫಿಟ್ ಎಂದು ಸಾಬೀತುಪಡಿಸುತ್ತಾರೆ ಎಂದು ಚೇತನ್ ಶರ್ಮಾ ಹೇಳಿಕೊಂಡಿದ್ದಾರೆ. ಈ ಚುಚ್ಚುಮದ್ದು ನೋವು ನಿವಾರಕವಲ್ಲ. ಈ ಚುಚ್ಚುಮದ್ದುಗಳು ಡೋಪ್ ಪರೀಕ್ಷೆಯಲ್ಲೂ ಸಿಕ್ಕಿಬೀಳದಂತಹ ಔಷಧದಿಂದ ಕೂಡಿರುತ್ತದೆ. ಬಿಸಿಸಿಐ ವೈದ್ಯರನ್ನು ಹೊರತುಪಡಿಸಿ ಈ ಕ್ರಿಕೆಟಿಗರು ತಮ್ಮದೇ ಆದ ವೈದ್ಯರನ್ನು ಹೊಂದಿದ್ದಾರೆ ಎಂದು ಚೇತನ್ ಶರ್ಮಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ