Ambati Rayudu: ಐಪಿಎಲ್ನಿಂದ ನಿವೃತ್ತಿ ಘೋಷಿಸಿದ ರಾಯಡು, ಕೆಲವೇ ನಿಮಿಷದಲ್ಲಿ ಟ್ವೀಟ್ ಡಿಲೀಟ್
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಅಂಬಟಿ ರಾಯುಡು (Ambati Rayudu) ಶನಿವಾರ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ (IPL) ನಿವೃತ್ತಿ ಘೋಷಿಸಿದ್ದಾರೆ. ಆದರೆ, ರಾಯುಡು ನಂತರ ತಮ್ಮ ಟ್ವೀಟ್ (Tweet) ಅನ್ನು ಡಿಲೀಟ್ ಮಾಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಿಡ್ಫೀಲ್ಡರ್ ಅಂಬಟಿ ರಾಯುಡು (Ambati Rayudu) ಶನಿವಾರ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ (IPL) ನಿವೃತ್ತಿ ಘೋಷಿಸಿದ್ದಾರೆ. ಈ ದಿಢೀರ್ ನಿರ್ಧಾರದಿಂದ ಅಂಬಟಿ ರಾಯುಡು ಅಭಿಮಾನಿಗಳೂ ಶಾಕ್ ಆಗಿದ್ದಾರೆ. ಆದರೆ, ರಾಯುಡು ನಂತರ ತಮ್ಮ ಟ್ವೀಟ್ (Tweet) ಅನ್ನು ಡಿಲೀಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಅವರು ರಾಯುಡು ಐಪಿಎಲ್ನಿಂದ ನಿವೃತ್ತಿ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇನ್ನು, ಈಗಾಗಲೇ ಅಂಬಟಿ ರಾಯಡು ಅವರು ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೇ ಈ ಬಾರಿ ಇದು ತನ್ನ ಕೊನೆಯ ಐಪಿಎಲ್ ಎಂದು ಟ್ವೀಟ್ ಮಾಡಿ ನಂತರ ಡಿಲೀಟ್ ಮಾಡಿದ್ದಾರೆ. ಅವರು ಟ್ವೀಟ್ ಮಾಡುತ್ತಿದ್ದಂತೆ ಟ್ವೀಟ್ ಎಲ್ಲಡೆ ವೈರಲ್ ಆಗಿದೆ. ಆದರೆ ನಂತರ ಏಕೆ ಡಿಲೀಟ್ ಮಾಡಿದ್ದಾರೆ ಎಂಬುದರ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ.
ಅಂಬಟಿ ರಾಯಡು ಟ್ವೀಟ್:
ಐಪಿಎಲ್ ನಿವೃತ್ತಿಯ ಕುರಿತು ಟ್ವೀಟ್ ಮಾಡಿದ್ದು, ನಂತರದಲ್ಲಿ ಡಿಲೀಟ್ ಮಾಡಿದ್ದಾರೆ. ಅಂಬಟಿ ರಾಯುಡು ಟ್ವೀಟ್ ಮಾಡಿದ್ದು, ‘ಇದು (ಐಪಿಎಲ್-2022) ನನ್ನ ಕೊನೆಯ ಐಪಿಎಲ್ ಸೀಸನ್ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಕಳೆದ 13 ವರ್ಷಗಳಲ್ಲಿ ನಾನು 2 ಶ್ರೇಷ್ಠ ತಂಡಗಳೊಂದಿಗೆ ಆಟವಾಡಿದ್ದೇನೆ. ಈ ಅದ್ಭುತ ಪ್ರಯಾಣಕ್ಕಾಗಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ಗೆ ಧನ್ಯವಾದಗಳು‘ ಎಂದು ಅವರು ಟ್ವೀಟ್ ಮಾಡಿದ್ದರು. ನಂತರ ಅದನ್ನು ಅಳಿಸಿದ್ದಾರೆ. ಈ ಬಗ್ಗೆ ರಾಯುಡು ಇದುವರೆಗೂ ಏನನ್ನೂ ಹೇಳಿಲ್ಲ. ಆದರೆ, ತಂಡದ ಕಳಪೆ ಪ್ರದರ್ಶನದಿಂದ ಕ್ರಿಕೆಟಿಗ ನಿರಾಸೆ ಮೂಡಿಸಿದ್ದಾರೆ ಎಂದು ಚೆನ್ನೈ ತಂಡದ ಸಿಇಒ ಹೇಳಿದ್ದಾರೆ.
ರಾಯಡು ಟ್ವೀಟ್ ಕುರಿತು ಚೆನ್ನೈ ತಂಡದ ಸಿಇಒ ಸ್ಪಷ್ಟನೆ:
ಕಾಶಿ ವಿಶ್ವನಾಥನ್ ಅಂಬಟಿ ರಾಯಡು ಟ್ವೀಟ್ ಕುರಿತು ಪ್ರತಿಕ್ರೀಯಿಸಿದ್ದು, 'ನಾನು ಅವರೊಂದಿಗೆ (ಅಂಬಾಟಿ) ಮಾತನಾಡಿದ್ದೇನೆ ಮತ್ತು ಅವರು ನಿವೃತ್ತಿಯಾಗುತ್ತಿಲ್ಲ. ಅವರು ತಮ್ಮ ಪ್ರದರ್ಶನದಿಂದ ನಿರಾಶೆಗೊಂಡರು ಮತ್ತು ಅವರು ಅದನ್ನು ಟ್ವೀಟ್ ಮಾಡಿದ್ದಾರೆ. ಆದರೆ, ಅದನ್ನು ಡಿಲೀಟ್ ಮಾಡಿದ್ದಾರೆ. ಈ ಋತುವಿನ ನಂತರ ಅವರು ಖಂಡಿತವಾಗಿಯೂ ನಿವೃತ್ತಿಯಾಗುವುದಿಲ್ಲ‘ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು, ಅಂಬಟಿ ರಾಯಡು ಈ ರೀತಿ ನಿವೃತ್ತಿ ಘೋಷಿಸಿ ನಂತರ ಹಿಂತೆಗೆದು ಕೊಳ್ಳುತ್ತಿರುವುದು ಇದೇ ಮೊದಲಲ್ಲ. ಅವರು 2019ರ ಏಕದಿನ ವಿಶ್ವಕಪ್ಗೆ ತಂಡದ ಭಾಗವಾಗದಿದ್ದರೂ ಅವರು ನಿವೃತ್ತಿ ಘೋಷಿಸಿದ್ದರು. ಆದರೆ, ನಂತರ ಅದನ್ನು ಬದಲಾಯಿಸಿದರು ಮತ್ತು ಐಪಿಎಲ್ನಲ್ಲಿ ಮತ್ತೆ ಕಾಣಿಸಿಕೊಂಡರು.
36ರ ಹರೆಯದ ರಾಯುಡು ಐಪಿಎಲ್ನಲ್ಲಿ ಇದುವರೆಗೆ ಒಟ್ಟು 187 ಪಂದ್ಯಗಳನ್ನು ಆಡಿದ್ದು, 1 ಶತಕ, 22 ಅರ್ಧಶತಕಗಳ ನೆರವಿನಿಂದ 4187 ರನ್ ಗಳಿಸಿದ್ದಾರೆ. ಅವರು ಭಾರತಕ್ಕಾಗಿ 55 ODI ಮತ್ತು 6 T20I ಪಂದ್ಯಗಳನ್ನು ಆಡಿದ್ದಾರೆ. ಅವರು ODI ಗಳಲ್ಲಿ 3 ಶತಕ ಮತ್ತು 10 ಅರ್ಧಶತಕಗಳೊಂದಿಗೆ ಒಟ್ಟು 1694 ರನ್ ಗಳಿಸಿದ್ದಾರೆ, ಆದರೆ ಅವರು ತಮ್ಮ T20 ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಕೇವಲ 42 ರನ್ ಗಳಿಸಿದ್ದಾರೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ