ಐಪಿಎಲ್ 2023 ಮಾರ್ಚ್ 31 ರಿಂದ ಆರಂಭವಾಗಲಿದೆ. ಈ ವರ್ಷದ ಐಪಿಎಲ್ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (CSK vs GT) ನಡುವೆ ನಡೆಯಲಿದೆ. ಆದರೆ ಚೆನ್ನೈ ಸೂಪರ್‌ಕಿಂಗ್ಸ್ (CSK) ತಂಡದಿಂದ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ತರಬೇತಿ ವೇಳೆ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಗಾಯಗೊಂಡಿದ್ದಾರೆ. ಹಾಗಾಗಿ ಐಪಿಎಲ್ ಗೂ ಮುನ್ನ ಚೆನ್ನೈ ತಂಡದ ತಲೆನೋವು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ ಐಪಿಎಲ್ ಆರಂಭಕ್ಕೆ ಇನ್ನೇನು ಒಂದು ದಿನ ಮಾತ್ರ ಬಾಕಿ ಉಳಿದಿದೆ. ಈ ವೇಳೆ ಧೋನಿ ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ.
ಗಾಯಗೊಂಡ ಎಂಎಸ್ ಧೋನಿ:
ಐಪಿಎಲ್ 2023 ಗಾಗಿ ಮಹೇಂದ್ರ ಸಿಂಗ್ ಧೋನಿ ಕಳೆದ ಹಲವು ತಿಂಗಳಿಂದ ತವರು ನೆಲದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಅಭ್ಯಾಸದ ಸಮಯದಲ್ಲಿ, ಧೋನಿಯ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದರಿಂದಾಗಿ ಅಭಿಮಾನಿಗಳು ಧೋನಿಯನ್ನು ಮತ್ತೊಮ್ಮೆ ಕ್ರಿಕೆಟ್ ಮೈದಾನದಲ್ಲಿ ನೋಡಲು ಕಾತುರರಾಗಿದ್ದರು. ಈ ನಡುವೆ ಧೋನಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ಸಾಕಷ್ಟು ದೊಡ್ಡ ಸಮಸ್ಯೆಗೆ ಕಾರಣವಾಗಿದೆ.
Hussey's reaction at the end sums up the 🎥💛#ThalaDharisanam #WhistlePodu 🦁 pic.twitter.com/PcpsCceGiH
— Chennai Super Kings (@ChennaiIPL) March 28, 2023
ಇದನ್ನೂ ಓದಿ: IPL 2023: ಐಪಿಎಲ್ ಆರಂಭಕ್ಕೂ ಮುನ್ನ ಬಿಗ್ ಶಾಕ್, ಟೂರ್ನಿಯಿಂದ ಕೊಹ್ಲಿ-ರೋಹಿತ್ ಸೇರಿ 10 ಮಂದಿ ಔಟ್?
ಧೋನಿ ನೋಡಲು ಮುಗಿಬಿದ್ದ ಫ್ಯಾನ್ಸ್:
ಇನ್ನು, ಕಳೆದ 2 ದಿನಗಳ ಹಿಂದೆ ಚೆನ್ನೈನ ಚೆಪಾಕ್ ಮೈದಾನದಲ್ಲಿ ಚೆನ್ನೈ ತಂಡ ಅಭ್ಯಾಸ ಮಾಡುವುದನ್ನು ನೋಡಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿತ್ತು. ಅಭ್ಯಾಸದ ವೇಳೆ ಧೋನಿ ಪ್ರವೇಶದ ವಿಡಿಯೋವನ್ನು ಸಿಎಸ್‌ಕೆ ಹಂಚಿಕೊಂಡಿದೆ. ಇದರಲ್ಲಿ ಧೋನಿ ಪ್ರವೇಶಿಸಿದ ತಕ್ಷಣ ಧೋನಿ-ಧೋನಿ ಎಂಬ ಘೋಷಣೆಗಳು ಎಲ್ಲೆಡೆ ಕೇಳಿಬರುತ್ತಿತ್ತು. ಐಪಿಎಲ್‌ನ ಆರಂಭಿಕ ಪಂದ್ಯವನ್ನು ಧೋನಿ ತಂಡ ಆಡಲಿದೆ. ನಾಯಕನಾಗಿ ಗೆಲುವಿನೊಂದಿಗೆ ಈ ಋತುವನ್ನು ಆರಂಭಿಸಲು ಧೋನಿ ಕಾಯುತ್ತಿದ್ದಾರೆ. ನೆಟ್ಸ್‌ನಲ್ಲಿ ಮಹಿ ಬ್ಯಾಟಿಂಗ್ ಮಾಡುವ ಕೆಲವು ವೀಡಿಯೊಗಳನ್ನು ಸಿಎಸ್‌ಕೆ ಹಂಚಿಕೊಂಡಿದೆ, ಅದರಲ್ಲಿ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡುವುದನ್ನು ನೋಡಬಹುದು.
ಚೆನ್ನೈ ಸೂಪರ್ ಕಿಂಗ್ಸ್ ತಂಡ:
ಮಹೇಂದ್ರ ಸಿಂಗ್ ಧೋನಿ (ನಾಯಕ), ಡೆವೊನ್ ಕಾನ್ವೇ, ರಿತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹ್ಯಾಂಗರ್‌ಗೆಕರ್, ಡ್ವೇನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಹರ್ಡೇಜಾ, ರವೀಂದ್ರ ಜಹರ್ಡೇಜಾ ದೇಶಪಾಂಡೆ, ಮುಖೇಶ್ ಚೌಧರಿ, ಮತಿಶಾ ಪತಿರಾನ, ಸಿಮರ್‌ಜಿತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತಿಕಷ್ಣ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಖ್ ರಶೀದ್, ನಿಶಾಂತ್ ಸಿಂಧು, ಕೈಲ್ ಜೇಮಿಸನ್, ಅಜಯ್ ಮಂಡಲ್, ಭಗತ್ ವರ್ಮಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ