• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL 2023: ಸಿಎಸ್‌ಕೆ ಅಭಿಮಾನಿಯ ಡ್ಯಾನ್ಸ್ ಸ್ಟೆಪ್ಸ್ ಕಾಪಿ ಮಾಡಿದ ಚಿಯರ್ ಗರ್ಲ್ಸ್​! ವೈರಲ್ ಆಯ್ತು ವಿಡಿಯೋ

IPL 2023: ಸಿಎಸ್‌ಕೆ ಅಭಿಮಾನಿಯ ಡ್ಯಾನ್ಸ್ ಸ್ಟೆಪ್ಸ್ ಕಾಪಿ ಮಾಡಿದ ಚಿಯರ್ ಗರ್ಲ್ಸ್​! ವೈರಲ್ ಆಯ್ತು ವಿಡಿಯೋ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IPL 2023: ಈ ವೀಡಿಯೋ ಪೋಸ್ಟ್ ಈಗಾಗಲೇ 14.9 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸಾಕಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಅಭಿಮಾನಿಯ ಡ್ಯಾನ್ಸ್ ನೋಡಿ ಜನರು ತುಂಬಾನೇ ಸಂತೋಷಪಟ್ಟರು.

  • Share this:

ಚೆನ್ನೈ ನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಣ ಪಂದ್ಯ ಅನೇಕ ಮರೆಯಲಾಗದ ಕ್ಷಣಗಳಿಗೆ ಸಾಕ್ಷಿಯಾಯ್ತು. ಏಕೆಂದರೆ ಭಾರತದ ಕ್ರಿಕೆಟ್ ಐಕಾನ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ಭಾನುವಾರ ಪಂದ್ಯದ ನಂತರ ಇಡೀ ಕ್ರೀಡಾಂಗಣದ ಒಳಗೆ ತಮ್ಮ ತಂಡದ ಆಟಗಾರರೊಂದಿಗೆ ಓಡಾಡಿ ಕ್ರೀಡಾಂಗಣದಲ್ಲಿ ಕುಳಿತ ಅಭಿಮಾನಿಗಳತ್ತ ಕೈ ಬೀಸುತ್ತಾ ಒಂದು ರೀತಿಯಲ್ಲಿ ಧೋನಿ ಅವರ ಕೊನೆಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅನ್ನೋ ರೀತಿಯಲ್ಲಿ ವಿದಾಯ ಹೇಳಿದರು.


ಡ್ಯಾನ್ಸ್ ಸ್ಟೆಪ್ ಫಾಲೋ ಮಾಡಿದ ಚಿಯರ್ ಲೀಡರ್ಸ್:


ಸಿಎಸ್‌ಕೆ ಆಡಿದ ಪವರ್ ಪ್ಯಾಕ್ಡ್ ಪಂದ್ಯದ ಸಮಯದಲ್ಲಿ ತೆಗೆದ ವೀಡಿಯೋ ಈಗ ವೈರಲ್ ಆಗಿದೆ ನೋಡಿ. ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಕ್ಲಿಪ್ ನಲ್ಲಿ ಸಿಎಸ್‌ಕೆ ಅಭಿಮಾನಿಯೊಬ್ಬರು ಸ್ಟ್ಯಾಂಡ್ ನಲ್ಲಿ ತುಂಬಾನೇ ಸಂತೋಷದಿಂದ ಡ್ಯಾನ್ಸ್ ಮಾಡುತ್ತಿರುವುದು ಕಂಡು ಬಂದಿದೆ. ಕ್ಲಿಪ್ ಮುಂದುವರಿಯುತ್ತಿದ್ದಂತೆ, ಸಿಎಸ್‌ಕೆ ಚಿಯರ್ ಲೀಡರ್ಸ್ ಸಹ ಆ ಅಭಿಮಾನಿಯ ಡ್ಯಾನ್ಸ್ ಸ್ಟೆಪ್ ಗಳನ್ನು ಫಾಲೋ ಮಾಡುತ್ತಿರುವುದು ಕಂಡು ಬಂದಿದೆ. ಇದು ಖಂಡಿತವಾಗಿಯೂ ಐಪಿಎಲ್ ನ ಅತ್ಯಂತ ಮನರಂಜನಾ ವೀಡಿಯೋಗಳಲ್ಲಿ ಒಂದಾಗಿದೆ.




ಈ ವೀಡಿಯೋ ಪೋಸ್ಟ್ ಈಗಾಗಲೇ 14.9 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸಾಕಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಅಭಿಮಾನಿಯ ಡ್ಯಾನ್ಸ್ ನೋಡಿ ಜನರು ತುಂಬಾನೇ ಸಂತೋಷಪಟ್ಟರು. ಅಂತಹ ಉತ್ಸಾಹಿ ಅಭಿಮಾನಿಗಳು ಐಪಿಎಲ್ ನ ಉತ್ಸಾಹವನ್ನು ಹೇಗೆ ಜೀವಂತವಾಗಿರಿಸುತ್ತಾರೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.


ಮಾಜಿ ಕ್ರಿಕೆಟಿಗ ಗವಾಸ್ಕರ್ ಅಂಗಿಯ ಮೇಲೆ ಆಟೋಗ್ರಾಫ್:


ನಿನ್ನೆ ನಡೆದ ಪಂದ್ಯದ ನಂತರ ಭಾರತದ ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್ ಸಹ ವಿಶ್ವಕಪ್ ವಿಜೇತ ನಾಯಕ ಎಂಎಸ್ ಧೋನಿ ಅವರ ಮುಂದೆ ಬಂದು ನಿಂತು ತಮ್ಮ ಶರ್ಟ್ ಮೇಲೆ ಅವರ ಆಟೋಗ್ರಾಫ್ ಅನ್ನು ಕೇಳಿದರು. ಆಗ ಕ್ಯಾಪ್ಟನ್ ಕೂಲ್ ಅವರು ಸುನಿಲ್ ಗವಾಸ್ಕರ್ ಅವರ ವಿನಂತಿಯ ಪ್ರಕಾರ ಅವರ ಅಂಗಿಯ ಮೇಲೆ ತಮ್ಮ ಆಟೋಗ್ರಾಫ್ ಅನ್ನು ನೀಡಿದರು ಮತ್ತು ಗವಾಸ್ಕರ್ ಅವರನ್ನು ಧೋನಿ ಅವರು ತಬ್ಬಿಕೊಂಡು ಆತ್ಮೀಯ ಅಪ್ಪುಗೆಯನ್ನು ಸಹ ನೀಡಿದರು.


ಇದನ್ನೂ ಓದಿ: IPL 2023 Records: ಐಪಿಎಲ್​ನಲ್ಲಿ ಹೊಸ ದಾಖಲೆ ನಿರ್ಮಿಸಿದ ಗಿಲ್​; ಅಪಾಯದಲ್ಲಿ ಕೊಹ್ಲಿ, ರೋಹಿತ್​ ರೆಕಾರ್ಡ್​!


ಆದರೆ ಈ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಕೆಕೆಆರ್ ತಂಡವು ಆರು ವಿಕೆಟ್ ಗಳಿಂದ ಜಯ ಗಳಿಸಿತು. ಈ ಸೋಲಿನೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಸಿಎಸ್‌ಕೆ ತಂಡ 15 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿಯೇ ಭದ್ರವಾಗಿದ್ದರೆ, ಇನ್ನೂ ಪಂದ್ಯದಲ್ಲಿ ಗೆದ್ದ ಕೆಕೆಆರ್ ತಂಡವು ಐಪಿಎಲ್ 2023 ರ ಪ್ಲೇ-ಆಫ್ ರೇಸ್ ನಲ್ಲಿ ಇನ್ನೂ ಉಳಿಯುವಂತೆ ಮಾಡಿತು. ಎಂದರೆ ಪ್ಲೇ-ಆಫ್ ರೌಂಡ್ ಗೆ ಹೋಗುವ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.




ಈ ಬಾರಿಯ ಐಪಿಎಲ್ ಫ್ಯಾನ್ಸ್ ಗಳಿಗೆ ರಸದೌತಣ:


ಅಂತೂ ಈ ಬಾರಿಯ ಐಪಿಎಲ್ ಅನೇಕ ವಿಷಯಗಳಿಗೆ ಸುದ್ದಿಯಾಗಿದೆ. ಏಕೆಂದರೆ ಈ ಬಾರಿ ಐಪಿಎಲ್ ನಲ್ಲಿ ಆದಂತಹ ನಿಯಮ ಬದಲಾವಣೆಗಳು ಇನ್ನೂ ಈ ಹಂತದವರೆಗೂ ಕೊನೆಯ ಪ್ಲೇ-ಆಫ್ ರೌಂಡ್ ಗೆ ಯಾವ 4 ತಂಡಗಳು ಆಯ್ಕೆಯಾಗುತ್ತವೆ ಅಂತ ಇನ್ನೂ ಸಹ ಖಚಿತವಾಗಿ ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ ನೋಡಿ.


ಐಪಿಎಲ್ ನ ಪ್ರಸ್ತುತ ಋತುವು ಅಭಿಮಾನಿಗಳನ್ನು ರಂಜಿಸುವುದರಲ್ಲಿ ಯಾವ ಅಂಶವನ್ನು ಸಹ ಕೈಚೆಲ್ಲಿಲ್ಲ. ಹೊಸ ಕ್ರಿಕೆಟಿಗರ ಪ್ರಭಾವಶಾಲಿ ಪ್ರತಿಭೆಯ ಪ್ರದರ್ಶನದಿಂದ ಹಿಡಿದು ಪ್ರೇಕ್ಷಕರ ಸ್ಟ್ಯಾಂಡ್ ಗಳಲ್ಲಿ ತೆಗೆದುಕೊಂಡ ಆಸಕ್ತಿದಾಯಕ ವೀಡಿಯೋಗಳವರೆಗೆ, ಐಪಿಎಲ್ ಪಂದ್ಯಗಳ ಬಗ್ಗೆ ಪೋಸ್ಟ್ ಗಳು ಸಾಕಷ್ಟಿವೆ.ಲ

First published: