VIDEO: ಕಿವೀಸ್​ ವಿರುದ್ದ ಭರ್ಜರಿ ಜಯ: ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ ಧೋನಿ-ಕೊಹ್ಲಿ

ಸೆಗ್ವೆಯಲ್ಲಿ ಚಲಿಸುವಾಗ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಇದನ್ನು ಬ್ಯಾಲೆನ್ಸ್​ ಮಾಡುವಲ್ಲಿ ಯಶಸ್ವಿಯಾದ ವಿರಾಟ್​ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ನಾವು ಯಾವುದಕ್ಕೂ ಕಮ್ಮಿಯಿಲ್ಲ ಎಂಬುದನ್ನು ತೋರಿಸಿದರು.

zahir | news18
Updated:January 24, 2019, 3:32 PM IST
VIDEO: ಕಿವೀಸ್​ ವಿರುದ್ದ ಭರ್ಜರಿ ಜಯ: ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ ಧೋನಿ-ಕೊಹ್ಲಿ
@साक्षी समाचार
  • News18
  • Last Updated: January 24, 2019, 3:32 PM IST
  • Share this:
ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಜಯಗಳಿಸುವ ಮೂಲಕ ಟೀಂ ಇಂಡಿಯಾ ಕಿವೀಸ್​ ಪ್ರವಾಸವನ್ನು ಭರ್ಜರಿಯಾಗಿಯೇ ಆರಂಭಿಸಿದೆ. ನ್ಯೂಜಿಲ್ಯಾಂಡ್​ ನೀಡಿದ ಸಾಧಾರಣ ಗುರಿಯನ್ನು ಬೆನ್ನತ್ತಿದ ಕೊಹ್ಲಿ ಪಡೆ 8 ವಿಕೆಟ್​​ಗಳ ಜಯದೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಇನ್ನು ಇದೇ ಖುಷಿಯಲ್ಲಿ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದ ಟೀಂ ಇಂಡಿಯಾ ಆಟಗಾರರಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್​ ಮೈದಾನದಲ್ಲಿ ಹೊಸ ಸಕರ್ಸ್ ಮಾಡಿದ್ದರು. ಮೈದಾನದಲ್ಲಿ ನಿಲ್ಲಿಸಲಾಗಿದ್ದ ಸೆಗ್ವೆ ಏರಿದ ಇಬ್ಬರು ಆಟಗಾರರು ಒಂದು ರೌಂಡ್​ ಹಾಕುವ ಮೂಲಕ ಖುಷಿಯಲ್ಲಿ ಸಂಭ್ರಮಿಸಿದರು.

ಇದನ್ನೂ ಓದಿ: ಜಿಯೋ​ ಭರ್ಜರಿ ಆಫರ್​: ಒಂದು ಬಾರಿ ರಿಜಾರ್ಚ್​ ಮಾಡಿದ್ರೆ 6 ತಿಂಗಳು ಎಲ್ಲವೂ ಉಚಿತ

ಸೆಗ್ವೆಯಲ್ಲಿ ಚಲಿಸುವಾಗ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಇದನ್ನು ಬ್ಯಾಲೆನ್ಸ್​ ಮಾಡುವಲ್ಲಿ ಯಶಸ್ವಿಯಾದ ವಿರಾಟ್​ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ನಾವು ಯಾವುದಕ್ಕೂ ಕಮ್ಮಿಯಿಲ್ಲ ಎಂಬುದನ್ನು ತೋರಿಸಿದರು.

Post-game shenanigans courtesy @msdhoni & @imVkohli

This looks fun 😁😁😁#TeamIndia #NZvIND pic.twitter.com/0EXXHYh2v7


— BCCI (@BCCI) January 23, 2019ಇತ್ತೀಚಿನ ದಿನಗಳಲ್ಲಿ ಸೆಗ್ವೆ ಯಂತ್ರವನ್ನು ಮೈದಾನದಲ್ಲಿ ವಿಡಿಯೋಗಳನ್ನು ಚಿತ್ರೀಕರಿಸಲು ಬಳಸಲಾಗುತ್ತಿದ್ದು, ಇದನ್ನು ಏರಿದ ಕೊಹ್ಲಿ ಮತ್ತು ಧೋನಿಯ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.


ಬುಧವಾರ ನಡೆದ ಪಂದ್ಯದ ಸಂಕ್ಷಿಪ್ತ ಸ್ಕೋರ್ ವಿವರ:

ನ್ಯೂಜಿಲ್ಯಾಂಡ್: 157/10 (38 ಓವರ್​​)

(ಕೇನ್ ವಿಲಿಯಮ್ಸನ್- 64, ಕುಲ್ದೀಪ್ ಯಾದವ್- 39/4, ಮೊಹಮ್ಮದ್ ಶಮಿ- 19/3)

ಭಾರತ: 156/2 (34.5)(D/L)

(ಶಿಖರ್ ಧವನ್- 75*, ವಿರಾಟ್ ಕೊಹ್ಲಿ- 45, ಡಫ್ ಬ್ರೇಸ್​​​ವೆಲ್​ 23/1)

ಪಂದ್ಯ ಶ್ರೇಷ್ಠ: ಮೊಹಮ್ಮದ್ ಶಮಿ

ಇದನ್ನೂ ಓದಿ: VIDEO: ಹೆಲ್ಮೆಟ್​ ಏಕೆ ಧರಿಸಬೇಕು? ಬೆಚ್ಚಿ ಬೀಳಿಸುತ್ತಿದೆ ಈ ಭೀಕರ ದೃಶ್ಯ..!


First published: January 24, 2019, 3:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading