ಏಷ್ಯನ್ ಗೇಮ್ಸ್ ವಿಜೇತರಿಗೆ ಕೇಂದ್ರದಿಂದ ನಗದು ಬಹುಮಾನ ನೀಡಿ ಸನ್ಮಾನ

news18
Updated:September 6, 2018, 8:48 PM IST
ಏಷ್ಯನ್ ಗೇಮ್ಸ್ ವಿಜೇತರಿಗೆ ಕೇಂದ್ರದಿಂದ ನಗದು ಬಹುಮಾನ ನೀಡಿ ಸನ್ಮಾನ
news18
Updated: September 6, 2018, 8:48 PM IST
ನ್ಯೂಸ್ 18 ಕನ್ನಡ

ಮೊನ್ನೆಯಷ್ಟೇ ಮುಕ್ತಾಯಗೊಂಡ ಏಷ್ಯನ್​​ ಗೇಮ್ಸ್-2018ರಲ್ಲಿ ಪದಕ ಗೆದ್ದ ವಿಜೇತರಿಗೆ ಕೇಂದ್ರ ಸರ್ಕಾರದ ವತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಪದಕ ಗೆದ್ದ ವಿಜೇತರ ಪೈಕಿ ಚಿನ್ನದ ಪದಕ ಗೆದ್ದವರಿಗೆ 40 ಲಕ್ಷ ರೂ. ಬೆಳ್ಳಿ ಹಾಗೂ ಕಂಚಿನ ಪದಕ ವಿಜೇತರಿಗೆ 20 ಹಾಗೂ 10 ಲಕ್ಷ ರೂ. ಬಹುಮಾನ ನೀಡಿ ಗೌರವಿಸಲಾಯಿತು. ಈ ಬಾರಿಯ ಏಷ್ಯನ್ ಗೇಮ್ಸ್​ನಲ್ಲಿ ಭಾರತ ದಾಖಲೆ ಪ್ರಮಾಣದಲ್ಲಿ ಪದಕ ಗೆದ್ದಿದ್ದು, 15 ಚಿನ್ನ, 24 ಬೆಳ್ಳಿ ಹಾಗೂ 30 ಕಂಚು ಸೇರಿದಂತೆ ಒಟ್ಟಾರೆ 69 ಪದಕಗಳನ್ನು ಗೆಲ್ಲುವ ಮೂಲಕ 8ನೇ ಸ್ಥಾನಿಯಾಗಿ ಕ್ರೀಡಾಕೂಟ ಅಂತಿಮಗೊಳಸಿತು.

ಆದರೆ ಭಾರತದ ಖಾತೆಗೆ ಮತ್ತೊಂದು ಕಂಚು ದೊರಕುವಲ್ಲಿ ಈ ಬಾರಿ ವಿಫಲವಾಯಿತು. 10 ಸಾವಿರ ಮೀ. ಓಟದ ಸ್ಪರ್ಧೆಯಲ್ಲಿ ಭಾರತದ ಗೋವಿಂದನ್ ಲಕ್ಷಣನ್ ಅವರು 3ನೇ ಸ್ಥಾನಿಯಾಗಿ ಹೊರಹೊಮ್ಮಿದರಾದರು, ಓಟದ ನಡುವೆ ಕಾಲು ಟ್ರ್ಯಾಕ್ ನಿಂದ ಹೊರ ಹೋಗಿತ್ತು ಎಂಬ ಕಾರಣಕ್ಕೆ ತೀರ್ಪುಗಾರರು ಗೋವಿಂದನ್ ಪ್ರದರ್ಶನವನ್ನು ಅನರ್ಹಗೊಳಿಸಿದ್ದರು. ಆದರೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಅವರು ಗೋವಿಂದನ್ ಅವರಿಗೆ 10 ಲಕ್ಷ ರೂ. ಬಹುಮಾನ ನೀಡಿ ಸನ್ಮಾನಿಸಿದ್ದಾರೆ. ಈ ಫೋಟೋವನ್ನು ರಾಜ್ಯವರ್ಧನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 



29:44:91 ಸೆಕೆಂಡ್​ಗಳಲ್ಲಿ ಗೋವಿಂದನ್ ಗುರಿ ಮಿಟ್ಟಿದ್ದರು. ಏಷ್ಯನ್ ಗೇಮ್ಸ್​ನ 10 ಸಾವಿರ ಮೀ. ಓಟದಲ್ಲಿ ಗೋವಿಂದನ್ ಕಂಚು ಗೆದ್ದಿದ್ದರೆ, ಏಷ್ಯನ್ ಗೇಮ್ಸ್​ನಲ್ಲಿ 20 ವರ್ಷಗಳ ನಂತರ ಭಾರತ ಪದಕ ಗೆದ್ದ ಖ್ಯಾತಿಗಳಿಸುತ್ತಿತ್ತು.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626