ಕಾಫಿ ವಿವಾದ: ಹಾರ್ದಿಕ್-ರಾಹುಲ್ ವಿರುದ್ಧ ದಾಖಲಾಯಿತು ಎಫ್​​ಐಆರ್​​​

ಬಾಲಿವುಡ್​ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ನಡೆಸಿ ಕೊಡುವ ಚಾಟ್​ ಶೋ ಕಾಫಿ ವಿತ್ ಕರಣ್'ನಲ್ಲಿ ಹಾರ್ದಿಕ್ ಮತ್ತು ರಾಹುಲ್​ ಸ್ತ್ರೀ ದ್ವೇಷಿ ಹಾಗೂ ಕಾಮ ಪ್ರಚೋದಕ ಹೇಳಿಕೆ ನೀಡಿದ್ದರು.

Vinay Bhat | news18
Updated:February 7, 2019, 2:46 PM IST
ಕಾಫಿ ವಿವಾದ: ಹಾರ್ದಿಕ್-ರಾಹುಲ್ ವಿರುದ್ಧ ದಾಖಲಾಯಿತು ಎಫ್​​ಐಆರ್​​​
ಫೈಲ್​ ಫೋಟೊ: ಹಾರ್ದಿಕ್​ ಪಾಂಡ್ಯ, ಕೆ.ಎಲ್​. ರಾಹುಲ್​
Vinay Bhat | news18
Updated: February 7, 2019, 2:46 PM IST
ಜೋಧ್​​ಪುರ: ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್. ರಾಹುಲ್ ಮಾತನಾಡುವಾಗ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಇವರ ಮೇಲೆ ಹೇರಿದ್ದ ಅಮಾನತ್ತಿನ ಶಿಕ್ಷೆಯನ್ನು ಬಿಸಿಸಿಐ ಈಗಾಗಲೇ ಹಿಂಪಡೆದಿದ್ದು, ಇಬ್ಬರೂ ಮತ್ತೆ ಮೈದಾನಕ್ಕಿಳಿದು ಆಟದಲ್ಲಿ ಬ್ಯುಸಿಯಾಗಿದ್ದಾರೆ.

ಈ ಮಧ್ಯೆ ಹಾರ್ದಿಕ್, ರಾಹುಲ್ ಹಾಗೂ ಕರಣ್ ಜೋಹಾರ್ ವಿರುದ್ಧ ಕೇಸ್ ದಾಖಲಾಗಿದೆ. ರಾಜಸ್ಥಾನದ ಜೋಧ್​​​ಪುರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಇವರ ಮೇಲೆ ಪ್ರಕರಣ ದಾಖಲಾಗಿದ್ದು, ಅಲ್ಲಿನ ಸ್ಥಳೀಯ ವಕೀಲ ಡಿ. ಮೇಘ್ವಾಲ್ ಎಂಬವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕರಿಗೆ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ: ಸೌರಾಷ್ಟ್ರ ಮಣಿಸಿ ಎರಡನೇ ಬಾರಿ ರಣಜಿ ಕಿರೀಟ ತೊಟ್ಟ ವಿದರ್ಭ

ಈ ಕೇಸ್ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಲೂಯಿ ಠಾಣೆಗೆ ವರ್ಗಾವಣೆ ಮಾಡಿದ್ದು, ವಿವಿಧ ಪ್ರಕರಣದ ಅಡಿಯಲ್ಲಿ ಎಫ್​​ಐಆರ್​​ ದಾಖಲು ಮಾಡಲಾಗಿದೆ.

ಈ ಹಿಂದೆ ಬಾಲಿವುಡ್​ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ನಡೆಸಿ ಕೊಡುವ ಚಾಟ್​ ಶೋ ಕಾಫಿ ವಿತ್ ಕರಣ್'ನಲ್ಲಿ ಹಾರ್ದಿಕ್ ಮತ್ತು ರಾಹುಲ್​ ಸ್ತ್ರೀ ದ್ವೇಷಿ ಹಾಗೂ ಕಾಮ ಪ್ರಚೋದಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...