• Home
  • »
  • News
  • »
  • sports
  • »
  • IND vs SA: ಮೂಗಿನಿಂದ ರಕ್ತ ಸುರಿಯುತ್ತಿದ್ದರೂ ಹಿಂದೆ ಸರಿಯದ ನಾಯಕ ರೋಹಿತ್ ಶರ್ಮಾ, ವಿಡಿಯೋ ವೈರಲ್

IND vs SA: ಮೂಗಿನಿಂದ ರಕ್ತ ಸುರಿಯುತ್ತಿದ್ದರೂ ಹಿಂದೆ ಸರಿಯದ ನಾಯಕ ರೋಹಿತ್ ಶರ್ಮಾ, ವಿಡಿಯೋ ವೈರಲ್

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ವಿಡಿಯೋವೊಂದು ವೈರಲ್ ಆಗಿದೆ. ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೂ ಅವರು ಹಿಂದೆ ಸರಿಯದೆ ಮೈದಾನದಲ್ಲೇ ಉಳಿದಿದ್ದರು. ನಾಯಕತ್ವ ಹಿಸಿದ ಅವರು ಆಟಗಾರರಿಗೆ ಸೂಚನೆಗಳನ್ನು ನೀಡಿದ್ದಾರೆ.

ಮುಂದೆ ಓದಿ ...
  • Share this:

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (team India Captain Rohit Sharma) ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಗೆಲ್ಲುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ತವರಿನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಈ ಹಿಂದೆ ದಕ್ಷಿಣ ಆಫ್ರಿಕಾ (India Vs South Africa) ವಿರುದ್ಧ ತವರಿನಲ್ಲಿ ನಡೆದ ಟಿ20  ಸರಣಿಗೆ ನಾಯಕರಾಗಿದ್ದರು ಆದರೆ ಅವರು ಅದನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ ಎಂಬುವುದು ಉಲ್ಲೇಖನೀಯ. ಸದ್ಯ ನಾಯಕ ರೋಹಿತ್ ಬಗ್ಗೆ ವಿಶೇಷ ಕಾರಣಕ್ಕಾಗಿ ಚರ್ಚೆ ನಡೆಯುತ್ತಿದೆ. ಪಂದ್ಯದ ವೇಳೆ ಸಂಕಷ್ಟದಲ್ಲಿದ್ದಾಗಲೂ ಗಟ್ಟಿಯಾಗಿ ನಿಂತಿದ್ದರು.


ಇದನ್ನೂ ಓದಿ: Babar Azam-Virat Kohli: ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ ವಿಶ್ವದಾಖಲೆ ಸರಿಗಟ್ಟಿದ ಬಾಬರ್​ ಅಜಮ್
ಜವಾಬ್ದಾರಿಯಿಂದ ಹಿಂದೆ ಸರಿಯದ ರೋಹಿತ್ ಶರ್ಮಾ

ಭಾನುವಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಪಂದ್ಯದ ವಿಡಿಯೋವೊಂದು ಹೊರಬಿದ್ದಿದೆ. ಇದರಲ್ಲಿ ನಾಯಕ ರೋಹಿತ್ ಶರ್ಮಾ ಸಹವರ್ತಿ ದಿನೇಶ್ ಕಾರ್ತಿಕ್ ಮತ್ತು ಹರ್ಷಲ್ ಪಟೇಲ್ ಜೊತೆ ಕಾಣಿಸಿಕೊಂಡಿದ್ದಾರೆ. ಕ್ಯಾಪ್ಟನ್‌ನ ಮೂಗಿನಲ್ಲಿ ರಕ್ತ ಸುರಿಯುತ್ತಿದ್ದರೂ ಅವರು ತಮ್ಮ ಕೆಲಸವನ್ನು ಹೇಗೆ ಮುಂದುವರೆಸಿದರು ಎಂಬುದು ವೀಡಿಯೊದಲ್ಲಿ ಕಂಡುಬರುತ್ತದೆ. ಮೂಗಿನಿಂದ ಬರುತ್ತಿದ್ದ ರಕ್ತವನ್ನು ಕರವಸ್ತ್ರದಿಂದ ಸ್ವಚ್ಛಗೊಳಿಸುತ್ತಿದ್ದ ವೇಳೆ ಗಮನಿಸಿದ ದಿನೇಶ್ ಕಾರ್ತಿಕ್ ಕೂಡಲೇ ಮೈದಾನದ ಹೊರಗೆ ಇದ್ದವರಿಗೆ ಕೆಲ ಸನ್ನೆ ಮಾಡಿದರು, ಹೀಗಿದ್ದರೂ ರೋಹಿತ್ ತಮ್ಮ ಜವಾಬ್ದಾರಿ ಮುಂದುವರೆಸಿದರು. ಬಳಿಕ ಹರ್ಷಲ್ ಪಟೇಲ್ ಬಳಿಗೆ ಹೋಗಿ ವಿಷಯ ವಿವರಿಸಿದರು, ತದನಂತರ ಅವರು ಮೈದಾನದಿಂದ ಹೊರಬಂದರು.

ಸರಣಿಯಲ್ಲಿ ಭಾರತಕ್ಕೆ ಅಜೇಯ ಮುನ್ನಡೆ


ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ ಕೆಎಲ್ ರಾಹುಲ್ ಜೊತೆಗೂಡಿ ಮೊದಲ ವಿಕೆಟ್‌ಗೆ 96 ರನ್ ಸೇರಿಸಿದರು. ರೋಹಿತ್ 37 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 43 ರನ್ ಗಳಿಸಿ ಔಟಾದರು. ಸೂರ್ಯಕುಮಾರ್ ಗರಿಷ್ಠ 61 ರನ್ ಗಳಿಸಿದರು. ಕೆಎಲ್ ರಾಹುಲ್ 57 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 49 ರನ್ ಗಳಿಸಿದರು. ಮೊದಲ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದ ಭಾರತ, ಎರಡನೇ ಪಂದ್ಯವನ್ನು 16 ರನ್‌ಗಳಿಂದ ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.


ವಿಶೇಷ ದಾಖಲೆ ಬರೆದ ಹಿಟ್​ಮ್ಯಾನ್​:

 ವಿಶ್ವ ಕ್ರಿಕೆಟ್ ನಲ್ಲಿ ಹಿಟ್ ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಗುವಾಹಟಿ ಟಿ20 ಪಂದ್ಯದಲ್ಲಿ ಮೂರನೇ ರನ್ ಪೂರೈಸಿದ ಕೂಡಲೇ ಕ್ಯಾಲೆಂಡರ್ ವರ್ಷದಲ್ಲಿ 500 ರನ್ ಪೂರೈಸಿದರು.ರೋಹಿತ್ ಶರ್ಮಾ ಈ ವರ್ಷ ಅಂದರೆ 2022ರಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500ರ ಗಡಿ ಮುಟ್ಟಿದ ಭಾರತದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದಲ್ಲದೇ  ರೋಹಿತ್ ಶರ್ಮಾ ಇದುವರೆಗೆ 140 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ರೋಹಿತ್ ಐಪಿಎಲ್‌ನಲ್ಲಿ 227 ಪಂದ್ಯಗಳನ್ನು ಆಡಿದ್ದಾರೆ. ಇದಲ್ಲದೇ 33 ಟಿ20 ಪಂದ್ಯಗಳೊಂದಿಗೆ 400 ಪಂದ್ಯಗಳನ್ನು ರೋಹಿತ್ ಪೂರ್ಣಗೊಳಿಸಿದ್ದಾರೆ.

Published by:Precilla Olivia Dias
First published: