• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • MS Dhoni Angry Video: ಯಾವತ್ತಾದ್ರೂ ಧೋನಿ ಕೋಪದಲ್ಲಿ ಕಿರುಚಾಡಿರೋದನ್ನ ನೋಡಿದ್ದೀರಾ? ವಿಡಿಯೋ ನೋಡಿ ಶಾಕ್​ ಆಗ್ತೀರಾ!

MS Dhoni Angry Video: ಯಾವತ್ತಾದ್ರೂ ಧೋನಿ ಕೋಪದಲ್ಲಿ ಕಿರುಚಾಡಿರೋದನ್ನ ನೋಡಿದ್ದೀರಾ? ವಿಡಿಯೋ ನೋಡಿ ಶಾಕ್​ ಆಗ್ತೀರಾ!

ಎಂ ಎಸ್​ ಧೋನಿ

ಎಂ ಎಸ್​ ಧೋನಿ

ಎಂಥಹ ಕಠಿಣ ಸ್ಥಿತಿ ಇದ್ದರೂ ಧೋನಿ ಮಾತ್ರ ಕೂಲ್​ ಆಗಿ ಹ್ಯಾಂಡಲ್​ ಮಾಡುತ್ತಿದ್ದರು. ಸೋತಾಗ ಬೇಸರಗೊಳ್ಳದೇ, ಗೆದ್ದಾಗ ಹಿಗ್ಗದೇ ಯಾವಾಗಲೂ ತಾಳ್ಮೆಯಿಂದಲೇ ಇರುತ್ತಾರೆ. ಐಪಿಎಲ್​ನಲ್ಲೂ ಧೋನಿ ಕ್ಯಾಪ್ಟನ್​ ಕೂಲ್​. 

  • Share this:

ಧೋನಿ (Dhoni) ಈ ಹೆಸರು ಕೇಳಿದ್ರೆ ಸಾಕು ಕ್ರಿಕೆಟ್​ ಅಭಿಮಾನಿಗಳಲ್ಲಿ (Cricket Fans) ಏನೋ ಒಂಥರ ಗೌರವ, ಪ್ರೀತಿ ಹೆಚ್ಚಾಗುತ್ತೆ. ಎಲ್ಲದ್ದರ ಜೊತೆಗೆ ಇನ್ಮುಂದೆ ಧೋನಿ ಅವರನ್ನು ಇಂಡಿಯನ್​ ಜೆರ್ಸಿಯಲ್ಲಿ (Indian Jersy) ನೋಡೋಕೆ ಆಗಲ್ಲ ಅನ್ನೋ ನೋವನ್ನು  ನುಂಗುತ್ತಿದ್ದಾರೆ. ಐಪಿಎಲ್​ನಲ್ಲಿ (IPL 2023) ಧೋನಿ ಆಟವನ್ನು ನೋಡಿ ಈ ನೋವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಧೋನಿ ನೋಡಿರದ ಬೌಲರ್​​ಗಳಿಲ್ಲ. ಈ ಐಪಿಎಲ್​ ನನ್ನ ಕಡೆಯ ಟೂರ್ನಿ ಅಂತ ಧೋನಿ ಹೇಳಿರುವುದು ನಿಜಕ್ಕೂ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಧೋನಿ ಇಷ್ಟವಾಗೋದೇ ತಾಳ್ಮೆ (Pateince) ವಿಚಾರದಲ್ಲಿ. ಎಂಥಹ ಕಠಿಣ ಸ್ಥಿತಿ ಇದ್ದರೂ ಧೋನಿ ಮಾತ್ರ ಕೂಲ್​ ಆಗಿ ಹ್ಯಾಂಡಲ್​ ಮಾಡುತ್ತಿದ್ದರು. ಸೋತಾಗ ಬೇಸರಗೊಳ್ಳದೇ, ಗೆದ್ದಾಗ ಹಿಗ್ಗದೇ ಯಾವಾಗಲೂ ತಾಳ್ಮೆಯಿಂದಲೇ ಇರುತ್ತಾರೆ. ಐಪಿಎಲ್​ನಲ್ಲೂ ಧೋನಿ ಕ್ಯಾಪ್ಟನ್​ ಕೂಲ್​. 


ಕೋಪಗೊಂಡಿರೋ ಧೋನಿ ಮುಖ ನೋಡಿದ್ದೀರಾ?


ಧೋನಿ ತಾಳ್ಮೆ ಕಳೆದುಕೊಳ್ಳೋದು ತುಂಬಾ ವಿರಳ. ಇಲ್ಲಿಯವರೆಗೂ ಧೋನಿ ಗ್ರೌಂಡ್​ನಲ್ಲಿ ಕೋಪಗೊಂಡು ಮತ್ತೊಬ್ಬರಿಗೆ ಬೈಯುತ್ತಿರುವುದನ್ನು ಯಾರೂ ಸಹ ನೋಡಿಲ್ಲ. ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ ಎಸ್ ಧೋನಿ ಅಂದ್ರೆ ಶಾಂತ ಸ್ವರೂಪದವರು ಎಂದೇ ಖ್ಯಾತಿ ಪಡೆದಿದ್ದಾರೆ. ಕ್ಯಾಪ್ಟನ್​ ಕೂಲ್​ ಅಂತಾನೇ ಕರೆಸಿಕೊಳ್ಳುವ ಧೋನಿ ಮೈದಾನದಲ್ಲಿಯೇ ಕೋಪಗೊಂಡಿರುವ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.


ತಾಳ್ಮೆ ಕಳೆದುಕೊಂಡ ಧೋನಿ!


ಈ ವಿಡಿಯೋ ನೋಡಿದ್ರೆ ನಿಜಕ್ಕೂ ನಿಮಗೆ ಶಾಕ್​ ಆಗುತ್ತೆ. ಈ ಘಟನೆ ನಡೆದಿರೋದು ಚೆನ್ನೈ ವರ್ಸಸ್​ ಆರ್​​ಸಿಬಿ ಪಂದ್ಯದಲ್ಲಿ. ಆದರೆ ಈ ಕೋಪವನ್ನು ಯಾರು ಗಮನಿಸಿರಲಿಲ್ಲ. ಆದರೆ ಈ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.  ಪಂದ್ಯದ ಮಧ್ಯೆಯೇ ತನ್ನ ಸಹ ಆಟಗಾರರೊಬ್ಬರ ಮೇಲೆ ತಾಳ್ಮೆ ಕಳೆದುಕೊಂಡು ಕಿರುಚುತ್ತಿರುವುದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ.  ಹಿಂದೆಂದೂ ಕಂಡಿರದ ಈ ದೃಶ್ಯವನ್ನು ನೋಡಿದ ಅಭಿಮಾನಿಗಳಿಗೆ ಶಾಕ್ ಆಗಿದೆ.


ಸಹ ಆಟಾಗರ ಮೇಲೆ ಕಿರುಚಿದ ಧೋನಿ!


ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಸಹ ಆಟಗಾರನ ಮೇಲೆ ಕಿರುಚಲು ಪ್ರಾರಂಭಿಸಿದ್ದಾರೆ ಧೋನಿ. ಕ್ಯಾಪ್ಟನ್ ಕೂಲ್ ಅವರ ಮುಖ ಮತ್ತು ಹಾವ-ಭಾವ ನೋಡಿದಾಗಲೇ ಕೋಪಗೊಂಡಿದ್ದಾರೆ ಅಂತ ಗೊತ್ತಾಗುತ್ತೆ.



ಇದನ್ನೂ ಓದಿ: ಇಂದು ಚೆನ್ನೈ - ರಾಜಸ್ಥಾನ್​ ಹೈವೋಲ್ಟೇಜ್​ ಮ್ಯಾಚ್​, ತವರಿನ ಸೋಲಿಗೆ ಉತ್ತರ ನೀಡುತ್ತಾ ಸಿಎಸ್​ಕೆ?


ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಧೋನಿ


ಎಂಎಸ್ ಧೋನಿ ಕೋಟ್ಯಂತರ ಭಾರತೀಯರ ಮನಸ್ಸಿನಲ್ಲಿ ನೆಲೆಯೂರಿರುವ ಆಟಗಾರ. ಭಾರತಕ್ಕೆ ಹಲವು ವಿಜಯಗಳನ್ನು ನೀಡುವ ಮೂಲಕ ಧೋನಿ ಅನೇಕ ಅಭಿಮಾನಿಗಳನ್ನು ಗಳಿಸಿದ್ದಾರೆ.


ನಮ್ಮ ದೇಶದ ದಿಗ್ಗಜರಲ್ಲದೆ ವಿಶ್ವದ ಸ್ಟಾರ್ ಆಟಗಾರರೂ ಮಹೇಂದ್ರ ಅವರ ನಾಯಕತ್ವದ ಅಭಿಮಾನಿಗಳು. ಇಷ್ಟೊಂದು ಅಭಿಮಾನಿ ಬಳಗವನ್ನು ಗಳಿಸಿರುವ ಕ್ರಿಕೆಟಿಗ ಧೋನಿ ಅವರು ಯಾರನ್ನು ಮೆಚ್ಚುತ್ತಾರೆ ಗೊತ್ತಾ..? ತಮ್ಮ ರೋಲ್ ಮಾಡೆಲ್ ಯಾರು ಎಂಬ ಬಗ್ಗೆ ಧೋನಿ ಮಾಹಿತಿ ನೀಡಿದ್ದಾರೆ.


ತೆಂಡೂಲ್ಕರ್ ಅವರನ್ನು ನೋಡುತ್ತಾ ಬೆಳೆದಿದ್ದೇನೆ ಮತ್ತು ಅವರಂತೆ ಆಡುವುದು ನನ್ನ ಕನಸಾಗಿತ್ತು ಎಂದು ಹೇಳಿದ್ದಾರೆ. ಅವರ ರೋಲ್ ಮಾಡೆಲ್, ಕ್ರಿಕೆಟ್ ಆರಾಧ್ಯ. ತೆಂಡೂಲ್ಕರ್ ಎಂದು ಹೇಳಿಕೊಂಡಿದ್ದಾರೆ. ಎಲ್ಲರಂತೆ ತಾನೂ ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿದದ್ದಾರೆ.

First published: