Vinay BhatVinay Bhat
|
news18 Updated:December 28, 2018, 12:02 PM IST
Pic: Twitter
- News18
- Last Updated:
December 28, 2018, 12:02 PM IST
ಮೆಲ್ಬೋರ್ನ್: ಇಲ್ಲಿನ ಮೇಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ಬೌಲರ್ಗಳು ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ.
ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ (33/6) ಅವರ ಬೌಲಿಂಗ್ ಬಿರುಗಾಳಿಗೆ ತರಗೆಲೆಯಂತೆ ಉರುಳಿದ ಕಾಂಗರೂಗಳು 151 ರನ್ಗೆ ಆಲೌಟ್ ಆಗಿದ್ದಾರೆ. ಅದರಲ್ಲು ಬುಮ್ರಾ ಬೆಂಕಿಯ ಚೆಂಡಿಗೆ ಶಾನ್ ಮಾರ್ಶ್ ಔಟ್ ಆಗಿದ್ದು ಆಸೀಸ್ ಆಟಗಾರರನ್ನು ದಂಗಾಗುವಂತೆ ಮಾಡಿತು. ಸ್ಲೋ ಯಾರ್ಕರ್ ಮೂಲಕ ಎಲ್ಬಿ ಬಲೆಗೆ ಸಿಲುಕಿದ ಮಾರ್ಶ್ ಪೆವಿಲಿಯನ್ನತ್ತ ಹೆಜ್ಜೆ ಹಾಕಬೇಕಾಯಿತು.
ಅಂತೆಯೆ ಬುಮ್ರಾ ಪ್ರಮುಖ
ಬ್ಯಾಟ್ಸ್ಮನ್ಗಳಾದ ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಟಿಮ್ ಪೇಯ್ನ್, ನೇಥನ್ ಲ್ಯಾನ್ ಹಾಗೂ ಜೋಷ್ ಹ್ಯಾಜ್ಲೇವುಡ್ ಅವರನ್ನು ಪೆವಿಲಿಯನ್ಗೆ ಅಟ್ಟಿದರು. 15.5 ಓವರ್ ಬೌಲಿಂಗ್ ಮಾಡಿದ ಬುಮ್ರಾ ಕೇವಲ 33 ರನ್ ನೀಡಿದ 6 ವಿಕೆಟ್ ಕಿತ್ತರು.
ಇದನ್ನೂ ಓದಿ: 'ನೀನು ಸಿಕ್ಸ್ ಸಿಡಿಸಿದರೆ ನನ್ನ ಬೆಂಬಲ ಮುಂಬೈ ತಂಡಕ್ಕೆ': ರೋಹಿತ್ರನ್ನು ಕೆಣಕಿದ ಆಸೀಸ್ ನಾಯಕ
ಇದರ ಜೊತೆಗೆ ಬುಮ್ರಾ 6 ವಿಕೆಟ್ ಕೀಳುವ ಮೂಲಕ ಡೆಬ್ಯು ಮಾಡಿದ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಪಡೆದ ಭಾರತೀಯ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಭಾರತ ಪರ 1979ರಲ್ಲಿ ದಿಲೀಪ್ ದೋಶಿ ಅವರ 40 ವಿಕೆಟ್ ಪಡೆದಿದ್ದರು. ಈಗ ಬುಮ್ರಾ 2018ರಲ್ಲಿ 41 ವಿಕೆಟ್ ಪಡೆಯುವ ಮೂಲಕ 39 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
ಬುಮ್ರಾ ಪ್ರದರ್ಶನಕ್ಕೆ ಟ್ವಿಟರ್ ಪ್ರತಿಕ್ರಿಯೆ:
First published:
December 28, 2018, 11:17 AM IST