ವಿಂಡೀಸ್ ವಿರುದ್ಧ ಮುಂದಿನ 3 ಪಂದ್ಯಕ್ಕೆ ಭಾರತ ತಂಡ ಪ್ರಕಟ: ಇಬ್ಬರು ಸ್ಟಾರ್ ಆಟಗಾರರು ಕಮ್​​ಬ್ಯಾಕ್

Vinay Bhat | news18
Updated:October 25, 2018, 7:53 PM IST
ವಿಂಡೀಸ್ ವಿರುದ್ಧ ಮುಂದಿನ 3 ಪಂದ್ಯಕ್ಕೆ ಭಾರತ ತಂಡ ಪ್ರಕಟ: ಇಬ್ಬರು ಸ್ಟಾರ್ ಆಟಗಾರರು ಕಮ್​​ಬ್ಯಾಕ್
  • Advertorial
  • Last Updated: October 25, 2018, 7:53 PM IST
  • Share this:
ನ್ಯೂಸ್ 18 ಕನ್ನಡ

ವೆಸ್ಟ್​ ಇಂಡೀಸ್ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ 1-0ಯ ಮುನ್ನಡೆ ಸಾಧಿಸಿದೆ. ಹೀಗಿರುವಾಗ ಬಿಸಿಸಿಐ ಉಳಿದಿರುವ 3 ಪಂದ್ಯಕ್ಕೆ 15 ಮಂದಿ ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ.

ಇದನ್ನೂ ಓದಿ: ಬೌಂಡರಿ ಗೆರೆಯಲ್ಲಿ ರಿಷಭ್ ಪಂತ್ ಅದ್ಭುತ ಕ್ಯಾಚ್: ಗಂಭೀರ ಗಾಯ..!

ಆಡಿರುವ ಎರಡು ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರದ ಮೊಹಮ್ಮದ್ ಶಮಿ ಅವರನ್ನು ತಂಡದಿಂದ ಕೈ ಬಿಡಲಾಗಿದ್ದು, ಜಸ್​​ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ತಂಡ ಸೇರಿಕೊಂಡಿದ್ದಾರೆ. ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ನಂಬರ್​ 1 ಪಟ್ಟವನ್ನು ತನ್ನದಾಗಿಸಿರುವ ಬುಮ್ರಾ ಟೀಂ ಇಂಡಿಯಾಕ್ಕೆ ಮರಳಿರುವುದು ಮತ್ತಷ್ಟು ಬಲಬಂದಂತಾಗಿದೆ. ಇತ್ತ ಭುವನೇಶ್ವರ್ ಕುಮಾರ್ ಕೂಡ ಕಳೆದ ಎರಡು ವರ್ಷದಿಂದ ಟೀಂ ಇಂಡಿಯಾದ ಖಾಯಂ ಬೌಲರ್​ ಆಗಿ ಆಡುತ್ತಿದ್ದಾರೆ. ಮೂರನೇ ಏಕದಿನ ಪಂದ್ಯ ಅ. 27 ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದನ್ನೂ ಓದಿ: (VIDEO): ಯಾರ ಕಡೆಗೂ ವಾಲದ ವಿಜಯ ಲಕ್ಷ್ಮೀ: ಹೇಗಿತ್ತು ಆ ಕೊನೆಯ 6 ಎಸೆತ..?

ಬಿಸಿಸಿಐ ಪ್ರಕಟ ಮಾಡಿರುವ 15 ಮಂದಿ ಸದಸ್ಯರ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ-ನಾಯಕ), ಶಿಖರ್ ಧವನ್, ಅಂಬಟಿ ರಾಯುಡು, ಮನೀಶ್ ಪಾಂಡೆ, ಎಂ. ಎಸ್ ಧೋನಿ (ವಿಕೆಟ್ ಕೀಪರ್), ರಿಷಭ್ ಪಂತ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಜಸ್​ಪ್ರೀತ್ ಬುಮ್ರಾ, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್, ಕೆ. ಎಲ್ ರಾಹುಲ್, ಉಮೇಶ್ ಯಾದವ್. First published:October 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ