News18 India World Cup 2019

ಭಾರತ-ಇಂಗ್ಲೆಂಡ್: ಮೂರನೇ ಟೆಸ್ಟ್​ಗೆ ಬುಮ್ರಾ-ಅಶ್ವಿನ್ ಫಿಟ್; ಕೊಹ್ಲಿ..?

news18
Updated:August 15, 2018, 1:08 PM IST
ಭಾರತ-ಇಂಗ್ಲೆಂಡ್: ಮೂರನೇ ಟೆಸ್ಟ್​ಗೆ ಬುಮ್ರಾ-ಅಶ್ವಿನ್ ಫಿಟ್; ಕೊಹ್ಲಿ..?
news18
Updated: August 15, 2018, 1:08 PM IST
ಈಗಾಗಲೇ ಇಂಗ್ಲೆಂಡ್ ವಿರುದ್ಧ 2 ಟೆಸ್ಟ್ ಪಂದ್ಯ ಸೋತು ಕಂಗಾಲಾಗಿರುವ ಟೀಂ ಇಂಡಿಯಾಕ್ಕೆ 3ನೇ ಟೆಸ್ಟ್​ಗೆ ಕೊಂಚ ಬಲಬಂದಂತಾಗಿದೆ. ನ್ಯಾಟಿಂಗ್​ಹ್ಯಾಮ್​​ನಲ್ಲಿ ಶನಿವಾರದಿಂದ ಆರಂಭವಾಗಲಿರುವ ಮೂರನೇ ಟೆಸ್ಟ್​ಗೆ ಗಾಯಾಳುಗಳಾಗಿದ್ದ ಜಸ್​​ಪ್ರೀತ್ ಬುಮ್ರಾ, ಆರ್. ಅಶ್ವಿನ್ ಹಾಗೂ ಹಾರ್ದಿಕ್ ಪಾಂಡ್ಯ ಫಿಟ್ ಆಗಿದ್ದಾರೆ.

ಈ ಹಿಂದೆ ಐರ್ಲೆಂಡ್ ವಿರುದ್ಧದ ಟಿ-20 ಪಂದ್ಯದ ವೇಳೆ ಬುಮ್ರಾ ಅವರ ಹೆಬ್ಬರಳಿಗೆ ಗಾಯವಾಗಿತ್ತು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟಿ-20 ಹಾಗೂ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಬಳಿಕ ಚಿಕಿತ್ಸೆಯಿಂದ ಚೇತರಿಸಿಕೊಳ್ಳದ ಕಾರಣ ವಿಶ್ರಾಂತಿಗಾಗಿ ಭಾರತಕ್ಕೆ ಕಳುಹಿಸಲಾಗಿತ್ತು. ಸದ್ಯ ಬುಮ್ರಾ ಅವರು ಸಂಪೂರ್ಣ ಚೇತರಿಸಿಕೊಂಡಿದ್ದು, ಮೂರನೇ ಟೆಸ್ಟ್​ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಇನ್ನು ಆರ್. ಅಶ್ವಿನ್ ಎರಡನೇ ಟೆಸ್ಟ್​ನಲ್ಲಿ ಬ್ಯಾಟಿಂಗ್ ಮಾಡಿವ ವೇಳೆ ಬಾಲ್ ಕೈಗೆ ತಾಗಿ ಗಾಯವಾಗಿತ್ತು. ಸದ್ಯ ಅಶ್ವಿನ್ ಕೂಡ ಫಿಟ್ ಆಗಿದ್ದು ಜೊತೆಗೆ ಹಾರ್ದಿಕ್ ಪಾಂಡ್ಯ ಸಹ ಗಾಯದಿಂದ ಗುಣಮುಖರಾಗಿದ್ದಾರೆ.

ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದ್ವಿತೀಯ ಟೆಸ್ಟ್​ನ ಮೂರನೇ ದಿನದ ಆಟದ ವೇಳೆ ಬೆನ್ನಿನ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಕೊಹ್ಲಿಗೆ ಬ್ಯಾಟಿಂಗ್ ಮಾಡಲೂ ಕಷ್ಟವಾಗಿತ್ತು. ಆದರೆ ಸದ್ಯ ಈ ಬಗ್ಗೆ ಸ್ಪಷ್ಟ ಪಡಿಸುರುವ ಕೊಹ್ಲಿ, ನಾನು ಮೂರನೇ ಟೆಸ್ಟ್​ಗೆ ಸಂಪೂರ್ಣ ಫಿಟ್​ನೆಸ್​ ಪಡೆದು ಆಡಲಿದ್ದೇನೆ. ಶೇ. 100 ರಷ್ಟು ಸಾಮರ್ಥ್ಯದಿಂದ ವಿಕೆಟ್ ನಡುವ ಓಡುವ ಸಾಮರ್ಥ್ಯ ನನ್ನಲಿದೆ ಎಂದು ಹೇಳಿದ್ದಾರೆ.
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...