ಬುಮ್ರಾ, ಭುವಿ ಮೋಡಿಗೆ ಹರಿಣಗಳು ಕಂಗಾಲು: ವಾಂಡರರ್ಸ್ ಟೆಸ್ಟ್​ನಲ್ಲಿ ಭಾರತಕ್ಕೆ 42 ರನ್ ಮುನ್ನಡೆ


Updated:January 26, 2018, 9:37 AM IST
ಬುಮ್ರಾ, ಭುವಿ ಮೋಡಿಗೆ ಹರಿಣಗಳು ಕಂಗಾಲು: ವಾಂಡರರ್ಸ್ ಟೆಸ್ಟ್​ನಲ್ಲಿ ಭಾರತಕ್ಕೆ 42 ರನ್ ಮುನ್ನಡೆ
ಡುಪ್ಲೆಸಿಸ್ ಔಟಾದ ಸಂದರ್ಭ ಭಾರತೀಯ ಆಟಗಾರರ ಸಂಭ್ರಮ
  • Share this:
ಜೋಹಾನ್ಸ್ ಬರ್ಗ್(ಜ.25): ವಾಂಡರರ್ಸ್​ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಲಯ ಕಂಡುಕೊಂಡಿದೆ. ಮೊದಲ ಇನ್ನಿಂಗ್ಸ್​ನಲ್ಲಿ 187 ರನ್​​ಗಳಿಗೆ ಆಲೌ ಆಗಿದ್ದ ಭಾರತ ತಂಡ, ದಕ್ಷಿಣ ಆಫ್ರಿಕಾವನ್ನ 194 ರನ್​ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ 2ನೇ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 49 ರನ್ ಗಳಿಸಿದೆ.

ಇದಕ್ಕೂ ಮುನ್ನ ನಿನ್ನೆ 6 ರನ್​ಗೆ 1 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡ ಇವತ್ತು ಬ್ಯಾಟಿಂಗ್ ಮುಂದುವರೆಸಿತು.  ರಬಾಡಾ 30 ಮತ್ತು ಹಶೀಮ್ ಆಮ್ಲಾ 61 ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿದರು. ಬಳಿಕ ಲಯ ಕಂಡುಕೊಂಡ ಭಾರತೀಯ ಬೌಲರ್​ಗಳು ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಪಡೆಯನ್ನ ಧೂಳೀಪಟ ಮಾಡಿದರು. 3ನೇ ಟೆಸ್ಟ್​ಗೆ ಅವಕಾಶ ಪಡೆದ ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ದಾಳಿ ನಡೆಸಿ 5 ವಿಕೆಟ್ ಉರುಳಿಸಿದರು. ಬುಮ್ರಾ ಎಸೆಯುತ್ತಿದ್ದ ಏರಿಳಿತದ ಚೆಂಡುಗಳಿಗೆ ಹರಿಣಗಳ ಬಳಿ ಉತ್ತರವೇ ಇರಲಿಲ್ಲ. ಬುಮ್ರಾಗೆ ಜೊತೆಯಾದ ಭುವನೇಶ್ವರ್ ಕುಮಾರ್ ಸಹ 3 ವಿಕೆಟ್ ಉರುಳಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 194 ರನ್​ಗಳಿಗೆ ಆಲೌಟ್ ಆಯಿತು.

2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ 2ನೇ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 49 ರನ್ ಗಳಿಸಿದ್ದು, 2ನೇ ದಿನದಾಟದಂತ್ಯಕ್ಕೆ ಒಟ್ಟು 42 ರನ್ ಮುನ್ನಡೆ ಪಡೆದಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ

ಮೊದಲ ಇನ್ನಿಂಗ್ಸ್ – 187ಕ್ಕೆ ಆಲೌಟ್

ಎರಡನೇ ಇನ್ನಿಂಗ್ಸ್​ನ 2ನೇ ದಿನದಾಟದಂತ್ಯಕ್ಕೆ ಭಾರತ 49/1
Loading...

ದಕ್ಷಿಣ ಆಫ್ರಿಕಾ

ಮೊದಲ ಇನ್ನಿಂಗ್ಸ್ – 194ಕ್ಕೆ ಆಲೌಟ್

ಭಾರತ ಬೌಲಿಂಗ್:

ಜಸ್ಪ್ರೀತ್ ಬುಮ್ರಾ – 54/5

ಭುವನೇಶ್ವರ್ ಕುಮಾರ್ – 44/3

 

 

 

 

 
First published:January 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...