ಟೀಂ ಇಂಡಿಯಾ ಆಟಗಾರರನ್ನು ಕೆಣಕಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ..!

news18
Updated:August 23, 2018, 5:27 PM IST
ಟೀಂ ಇಂಡಿಯಾ ಆಟಗಾರರನ್ನು ಕೆಣಕಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ..!
news18
Updated: August 23, 2018, 5:27 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್ ತಂಡದ ಆಟಗಾರರಿಗೂ ಟೀಂ ಇಂಡಿಯಾ ಆಟಗಾರರಿಗೂ ಸರಿ ಬರುವುದಿಲ್ಲ ಎಂಬುದು ಮತ್ತೆ ಸಾಭೀತಾಗಿದೆ. ಈ ಹಿಂದೆ 2007ರಲ್ಲಿ ಯುವರಾಜ್ ಸಿಂಗ್​ ಅವರನ್ನ ಆಂಗ್ಲರು ಕೆಣಕಿ ಸ್ಟುವರ್ಟ್​ ಬ್ರಾಡ್ ಓವರ್​​ನ 6 ಎಸೆತಗಳಲ್ಲಿ 6 ಸಿಕ್ಸ್ ಚಚ್ಚಿದ ವಿಷಯ ಗೊತ್ತಿರುವ ಸಂಗತಿ. ಈಗ ಮತ್ತೆ ಬ್ರಾಡ್ ಟೀಂ ಇಂಡಿಯಾ ಆಟಗಾರನನ್ನು ಕೆಣಕಿ ಅನೇಕರ ಆಕ್ರೋಶಕ್ಕೆ ಕಾರಣರಾಗಿದ್ದು, ಇದಕ್ಕೆ ಶಿಕ್ಷೆ ಕೂಡ ಅನುಭವಿಸಿದ್ದಾರೆ.

ಭಾರತ-ಇಂಗ್ಲೆಂಡ್ ನಡುವಣ 3ನೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್​ಮನ್​​-ಕೀಪರ್ ರಿಷಭ್ ಪಂತ್ ಅವರು ಔಟ್ ಆದ ವೇಳೆ ಬ್ರಾಡ್ ಅವರು ಪಂತ್​ ಅನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ, ಇದೀಗ  ಬ್ರಾಡ್ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಬ್ರಾಡ್ ಐಸಿಸಿ ಕೋಡ್ ಆಫ್ 2.1.7 ನಿಯಮದ ಉಲ್ಲಂಘನೆ ಮಾಡಿದ್ದಾರೆ. ಜೊತೆಗೆ ಪಂದ್ಯದ ಶೇ. 15ರಷ್ಟು ದಂಡ ವಿದಿಸಲಾಗಿದೆ ಎಂದು ತಿಳಿಸಿದೆ.

ಇದರ ಜೊತೆಗೆ ಟ್ವೀಟರ್​ನಲ್ಲೂ ಆಂಗ್ಲರ ನಡತೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

 



 



 

First published:August 23, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ