Lovlina Borgohain: ಹೆಣ್ಣುಮಕ್ಕಳು ಎಂದು ಟೀಕಿಸಿದ್ದ ಹಳ್ಳಿಯ ಜನರಿಂದಲೇ ಪ್ರಶಂಸೆ ಪಡೆದ ಬಾಕ್ಸರ್‌‌‌ ಲವ್ಲಿನಾ ಬೊರ್ಗೊಹೈನ್‌..!

ಹೆಣ್ಣುಮಕ್ಕಳಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬ ಹಳ್ಳಿಯ ಜನರ ವಿಶ್ವಾಸವನ್ನು ತೊಡೆದು ಹಾಕಿ ಲವ್ಲಿನಾ ಹಾಗೂ ಅವರ ಸಹೋದರಿಯರು ಇಂದು ಉನ್ನತ ಸ್ಥಾನದಲ್ಲಿದ್ದಾರೆ

ಲವ್ಲಿನಾ ಬೊರ್ಗೊಹೈನ್

ಲವ್ಲಿನಾ ಬೊರ್ಗೊಹೈನ್

  • Share this:

ಭಾರತದ ಬಾಕ್ಸರ್‌‌‌ ಲವ್ಲಿನಾ ಬೊರ್ಗೊಹೈನ್‌ ಈ ಹಿಂದಿನ ವಿಶ್ವ ಚಾಂಪಿಯನ್‌ ಚೀನಾದ ತೈಪೆಯ ಚೆನ್ ನಿಯೆನ್ ಚಿನ್‌ರನ್ನು ಸೋಲಿಸಿ ಮಹಿಳಾ ವೆಲ್ಟರ್‌ವೈಟ್ (69 ಕೆಜಿ) ವಿಭಾಗದ ಸೆಮಿಫೈನಲ್‌ಗೆ ಶುಕ್ರವಾರ ತಲುಪಿದ್ದಾರೆ. 23ರ ಹರೆಯದ ಅಸ್ಸಾಂನ ಲವ್ಲಿನಾ ಕ್ವಾರ್ಟರ್‌ಫೈನಲ್ ಅನ್ನು 4-1 ಪಾಯಿಂಟ್‌ಗಳ ಅಂತರದಲ್ಲಿ ಗೆದ್ದು ಪದಕ ಗೆಲ್ಲುವ ಆಸೆಗೆ ಹೊಸ ಭರವಸೆ ಮೂಡಿಸಿದ್ದಾರೆ.ಲವ್ಲಿನಾ ಅಕ್ಟೋಬರ್ 2, 1997 ರಂದು ಅಸ್ಸಾಂನ ಬಾರಾ ಮುಖಿಯಾ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಲವ್ಲಿನಾರಿಗೆ ಸ್ಫೂರ್ತಿ ನೀಡಿರುವುದು ಅವರ ಹಿರಿಯ ಅವಳಿ ಸಹೋದರಿಯರಾದ ಲಿಚಾ ಹಾಗೂ ಲಿಮಾ. ಇವರಿಬ್ಬರೂ ರಾಷ್ಟ್ರೀಯ ಮಟ್ಟದಲ್ಲಿ ಕಿಕ್ ಬಾಕ್ಸಿಂಗ್ ನಿಷ್ಣಾತರು. ಅವರದೇ ಹೆಜ್ಜೆಯಲ್ಲಿ ಮುಂದುವರಿದ ಲವ್ಲಿನಾ ಮುವಾಯಿ ಥಾಯ್ ಎಂಬ ಥಾಯ್ ಬಾಕ್ಸಿಂಗ್ ಅನ್ನು 13ರ ಹರೆಯದಲ್ಲೇ ಕಲಿಯಲಾರಂಭಿಸಿದರು. ತದನಂತರ ಬಾಕ್ಸಿಂಗ್ ತರಬೇತಿಯತ್ತ ಗಮನ ಹರಿಸಿದರು.


ಬಾರ್‌ಪಥರ್ ಬಾಲಕಿಯರ ಶಾಲೆಯಲ್ಲಿ ಲವ್ಲಿನಾ ತನ್ನ ಪ್ರಾಥಮಿಕ ಶಿಕ್ಷಣವನ್ನು ಅಭ್ಯಸಿಸುತ್ತಿದ್ದಾಗ ಭಾರತದ ಖ್ಯಾತ ಬಾಕ್ಸಿಂಗ್ ತರಬೇತುದಾರರಾದ ಪಡುಮ್ ಬೋರೋ ಲವ್ಲಿನಾ ಪ್ರತಿಭೆಯನ್ನು ಗುರುತಿಸಿದರು. 2012ರಲ್ಲಿ ಬೋರೋ ಲವ್ಲಿನಾರಿಗೆ ತರಬೇತಿ ನೀಡಲು ಆರಂಭಿಸಿದರು ಹಾಗೂ ಭಾರತದ ಮುಖ್ಯ ಮಹಿಳಾ ಬಾಕ್ಸಿಂಗ್ ತರಬೇತುದಾರರಾದ ಶಿವ ಸಿಂಗ್ ಗರಡಿಯಲ್ಲಿ ಪಳಗಿದರು.


ಲವ್ಲಿನಾ ತಂದೆ ಸಣ್ಣ ವ್ಯವಹಾರವೊಂದನ್ನು ನಡೆಸುತ್ತಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಲವ್ಲಿನಾ ಅರ್ಜುನ ಪ್ರಶಸ್ತಿ ಪಡೆದ ಸಮಯದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಮೂವರೂ ಹೆಣ್ಣುಮಕ್ಕಳನ್ನು ಪಡೆದ ತಂದೆ ತಾಯಿಯನ್ನು ಹಳ್ಳಿಯ ಜನ ಗಂಡು ಸಂತಾನ ಇಲ್ಲದೇ ಇದ್ದುದಕ್ಕೆ ಟೀಕಿಸುತ್ತಿದ್ದರು ಹಾಗೂ ಕರುಣೆಯಿಂದ ನೋಡುತ್ತಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.


ಇದನ್ನು ಓದಿ: ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಪುಲ್ಲೇಲ ಗೋಪಿಚಂದ್ ಬಿಟ್ಟು, ದಕ್ಷಿಣ ಕೊರಿಯಾದ ಕೋಚ್‌ ಬಳಿ ತರಬೇತಿ ಪಡೆಯುತ್ತಿರುವುದೇಕೆ..?

ಆದರೆ ಲವ್ಲಿನಾ ತಾಯಿ ಮಕ್ಕಳಿಗೆ ಯಾವಾಗಲೂ ಸ್ಫೂರ್ತಿ ಹಾಗೂ ಪ್ರೋತ್ಸಾಹ ನೀಡುತ್ತಿದ್ದರು. ಜನರ ಭಾವನೆಯನ್ನು ಬದಲಾಯಿಸುವಂತೆ ಏನಾದರೂ ಮಹತ್ತರವಾದುದನ್ನು ಸಾಧಿಸಿ ಎಂದು ತಮ್ಮ ಹೆಣ್ಣುಮಕ್ಕಳಿಗೆ ಹೇಳುತ್ತಿದ್ದರು. ಹೀಗೆ ನಮ್ಮ ಈ ಗೆಲುವಿಗೆ ತಂದೆ ತಾಯಿಯೇ ಸ್ಫೂರ್ತಿ ಎಂದು ಲವ್ಲಿನಾ ಸ್ಮರಿಸಿಕೊಂಡಿದ್ದಾರೆ. ನಾವು ಅಂದುಕೊಂಡಿದ್ದನ್ನು ಸಾಧಿಸಿಯೇ ಬಿಟ್ಟೆವು. ನನ್ನ ಸಹೋದರಿಯರಿಬ್ಬರೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮತ್ತು ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗದಲ್ಲಿದ್ದರೆ, ನಾನು ಬಾಕ್ಸರ್ ಆಗಿ ಮಿಂಚಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.


ಲವ್ಲಿನಾ ಬೇಸಿಗೆ ಕ್ರೀಡಾಕೂಟದಲ್ಲಿ ತದನಂತರ ಟೋಕಿಯೋ ಗೇಮ್ಸ್‌ನಲ್ಲಿ ಎರಡು ಬಾರಿ ವಿಶ್ವಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆಯಾಗಿ ಸಾಧನೆಗೈದ ಅಸ್ಸಾಂನ ಮೊದಲ ಮಹಿಳಾ ಕ್ರೀಡಾಪಟುವಾಗಿದ್ದಾರೆ. ಹೆಣ್ಣುಮಕ್ಕಳಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬ ಹಳ್ಳಿಯ ಜನರ ವಿಶ್ವಾಸವನ್ನು ತೊಡೆದು ಹಾಕಿ ಲವ್ಲಿನಾ ಹಾಗೂ ಅವರ ಸಹೋದರಿಯರು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಅಂದು ಹೆಣ್ಣುಮಕ್ಕಳೆಂದು ತಾತ್ಸಾರವಾಗಿ ಕಂಡಿದ್ದ ಜನರೇ ಇಂದು ಅವರನ್ನು ಸನ್ಮಾನಿಸುತ್ತಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
First published: