Wriddhiman Saha: ವೃದ್ಧಿಮಾನ್ ಸಹಾಗೆ ಬೆದರಿಕೆ ಹಾಕಿದ ಪತ್ರಕರ್ತನಿಗೆ 2 ವರ್ಷ ನಿಷೇಧ ಹೇರಿದ BCCI

ಟೀಂ ಇಂಡಿಯಾದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ (Wriddhiman Saha) ಅವರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಹಿರಿಯ ಕ್ರೀಡಾ ಪತ್ರಕರ್ತ ಬೋರಿಯಾ ಮಜುಂದಾರ್ ಅವರಿಗೆ 2 ವರ್ಷಗಳ ನಿಷೇಧ ಹೇರಿ ಬಿಸಿಸಿಐ ಆದೇಶ ಹೊರಡಿಸಿದೆ.

ವೃದ್ಧಿಮಾನ್ ಸಹಾ

ವೃದ್ಧಿಮಾನ್ ಸಹಾ

  • Share this:
ಟೀಂ ಇಂಡಿಯಾದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ (Wriddhiman Saha) ಅವರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಹಿರಿಯ ಕ್ರೀಡಾ ಪತ್ರಕರ್ತ ಬೋರಿಯಾ ಮಜುಂದಾರ್ ಅವರಿಗೆ 2 ವರ್ಷಗಳ ನಿಷೇಧ ಹೇರಿ ಬಿಸಿಸಿಐ ಆದೇಶ ಹೊರಡಿಸಿದೆ. ಬಿಸಿಸಿಐ (BCCI) ಅವರ ವಿರುದ್ಧ ಕ್ರಮ ಕೈಗೊಂಡಿದೆ. ಈ ಕ್ರಮದಿಂದಾಗಿ ಬೋರಿಯಾ ಮಜುಂದಾರ್ ಅವರು ಮುಂದಿನ 2 ವರ್ಷಗಳವರೆಗೆ ಬಿಸಿಸಿಐ ಮತ್ತು ಬಿಸಿಸಿಐ ಅಂಗಸಂಸ್ಥೆಗಳ ಯಾವುದೇ ಪಂದ್ಯ ಅಥವಾ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಬಿಸಿಸಿಐ ಹಂಗಾಮಿ ಸಿಇಒ ಹೇಮಾಂಗ್ ಅಮೀನ್ (Hemang Amin) ಅವರು ಈ ಪತ್ರಕರ್ತನಿಗೆ ನಿಷೇಧ ಹೇರಿರುವುದಾಗಿ ಎಲ್ಲಾ ರಾಜ್ಯ ಘಟಕಗಳಿಗೆ ಮಾಹಿತಿ ನೀಡಿದ್ದಾರೆ. ಬೆದರಿಕೆ ಬಗ್ಗೆ ಕ್ರಿಕೆಟಿಗ ವೃದ್ಧಿಮಾನ್‌ ಸಹಾ ಅವರ ಆರೋಪ ಕೇಳಿ ಬಂದ ಹಿನ್ನೆಲೆ ಭಾರತೀಯ ಕ್ರಿಕೆಟ್ ಮಂಡಳಿಯು 3 ಸದಸ್ಯರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯಲ್ಲಿ ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla), ಖಜಾಂಚಿ ಅರುಣ್ ಧುಮಾಲ್ (Arun Dhumal) ಮತ್ತು ಕೌನ್ಸಿಲರ್ ಪ್ರಭತೇಜ್ ಸಿಂಗ್ ಭಾಟಿಯಾ (Prabhtej Singh Bhatia) ಅವರಿದ್ದ ಸಮಿತಿ ಈ ನಿರ್ಧಾರ ಕೈಗೊಂಡಿದೆ.

ಏನಿದು ಈ ಪ್ರಕರಣ:

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ವೃದ್ಧಿಮಾನ್ ಸಹಾ ಅವರನ್ನು ಆಯ್ಕೆ ಮಾಡಲಾಗಿಲ್ಲ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ನಿವೃತ್ತಿ ನೀಡುವಂತೆ ಸಲಹೆ ನೀಡಿದ್ದರು ಎಂದು ಸಾಹಿ ಆರೋಪಿಸಿದ್ದಾರೆ. ಸಹಾ ಅವರು ಪತ್ರಕರ್ತರೊಂದಿಗೆ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.





ಭಾರತದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಮತ್ತು ಹರ್ಭಜನ್ ಸಿಂಗ್ ಸೇರಿದಂತೆ ಹಲವರು ವೃದ್ಧಿಮಾನ್ ಸಾಹಾ ಅವರ ಪರವಾಗಿ ಮಾತನಾಡಿದ್ದರು. ಅಲ್ಲದೇ ಈ ಬಗ್ಗೆ ಪರಿಶೀಲಿಸಲು ಬಿಸಿಸಿಐ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯವನ್ನೂ ಸಹ ಮಾಡಿದ್ದರು. ಇದರ ಪ್ರತಿಫಲವಾಗಿ ಇದೀಗ ಸಾಹಿ ಅವರಿಗೆ 2 ವರ್ಷಗಳ ಕಾಲ ನಿಷೇಧ ಹೇರಲಾಗಿದೆ.

ಇದನ್ನೂ ಓದಿ: Virat Kohli: ಚೆನ್ನೈ- RCB ಪಂದ್ಯ, ಹೊಸ ದಾಖಲೆಯ ಮೇಲೆ ಕಿಂಗ್ ಕೊಹ್ಲಿ ಕಣ್ಣು!

ಬೋರಿಯಾ ಮಜುಂದಾರ್‌ಗೆ ಬಿಸಿಸಿಐ ವಿಧಿಸಿದ ನಿರ್ಬಂಧಗಳು:

- ಭಾರತದ ಯಾವುದೇ ಕ್ರಿಕೆಟ್ ಪಂದ್ಯಗಳಲ್ಲಿ (ದೇಶೀಯ ಮತ್ತು ಅಂತರಾಷ್ಟ್ರೀಯ) ಪತ್ರಿಕಾ ಸದಸ್ಯರಾಗಿ ಮಾನ್ಯತೆ ಪಡೆಯಲು 2 ವರ್ಷಗಳ ನಿಷೇಧ.
- ಭಾರತದಲ್ಲಿ ಯಾವುದೇ ನೋಂದಾಯಿತ ಆಟಗಾರರೊಂದಿಗೆ ಯಾವುದೇ ಸಂದರ್ಶನ ಪಡೆಯಲು 2 ವರ್ಷಗಳ ಕಾಲ ನಿಷೇಧ.
- ಬಿಸಿಸಿಐ ಮತ್ತು ಸದಸ್ಯರ ಸಂಘದ ಒಡೆತನದ ಕ್ರಿಕೆಟ್ ಸೌಲಭ್ಯಗಳನ್ನು ಪ್ರವೇಶಿಸಲು 2 ವರ್ಷಗಳ ನಿಷೇಧ.
- ಪತ್ರಕರ್ತನ ಮೇಲಿನ ಈ ನಿರ್ಬಂಧಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಬಿಸಿಸಿಐ ತನ್ನ ರಾಜ್ಯ ಘಟಕಗಳನ್ನು ಒತ್ತಾಯಿಸಿದೆ.

ಪ್ರಕರಣದ ಕುರಿತು ಬೋರಿಯಾ ಮಜುಂದಾರ್ ಹೇಳಿದ್ದೇನು?:

ಮತ್ತೊಂದೆಡೆ ಆರೋಪದ ನಂತರ ಬೋರಿಯಾ ಮಜುಂದಾರ್ ಅವರನ್ನು ಸಮರ್ಥಿಸಿಕೊಂಡಿದ್ದರು. ವಾಟ್ಸಾಪ್ ಚಾಟ್ ಅನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಬೋರಿಯಾ ಮಜುಂದಾರ್ ಅವರು ಸಹಾ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸುವುದಾಗಿ ಹೇಳಿದ್ದರು.

ಇದನ್ನೂ ಓದಿ: IPL 2022: ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ ಬಿಡುಗಡೆ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ

'ಪ್ರತಿಯೊಂದಕ್ಕೂ ಎರಡು ಬದಿಗಳಿವೆ. ಸಹಾ ಅವರು ನನ್ನ ವಾಟ್ಸಾಪ್ ಚಾಟ್ ಅನ್ನು ಟ್ಯಾಂಪರ್ ಮಾಡಿದ್ದಾರೆ, ಇದು ನನ್ನ ಖ್ಯಾತಿ ಮತ್ತು ವಿಶ್ವಾಸಾರ್ಹತೆಗೆ ಕಳಂಕ ತಂದಿದೆ. ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಬಿಸಿಸಿಐಗೆ ಮನವಿ ಮಾಡುತ್ತೇನೆ. ನನ್ನ ವಕೀಲರು ವೃದ್ಧಿಮಾನ್ ಸಹಾ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಲಿದ್ದಾರೆ. ಸತ್ಯಕ್ಕೆ ಜಯವಾಗಲಿ' ಎಂದು ಬೋರಿಯಾ ಮಜುಂದಾರ್ ಹೇಳಿದ್ದರು.
Published by:shrikrishna bhat
First published: