• Home
  • »
  • News
  • »
  • sports
  • »
  • Virat Kohli: ಕೊಹ್ಲಿ ಬೆಡ್​​​ ರೂಂ ವಿಡಿಯೋ ವೈರಲ್, ಅಸಮಾಧಾನ ಹೊರಹಾಕಿದ ಬಾಲಿವುಡ್‌

Virat Kohli: ಕೊಹ್ಲಿ ಬೆಡ್​​​ ರೂಂ ವಿಡಿಯೋ ವೈರಲ್, ಅಸಮಾಧಾನ ಹೊರಹಾಕಿದ ಬಾಲಿವುಡ್‌

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Virat Kohli: ಕ್ರಿಕೆಟಿಗ ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಉಳಿದುಕೊಂಡಿದ್ದ ಹೋಟೆಲ್‌ ರೂಂನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

  • Share this:

ಕ್ರಿಕೆಟಿಗ ವಿರಾಟ್‌ ಕೊಹ್ಲಿ (Virat Kohli) ಆಸ್ಟ್ರೇಲಿಯಾದಲ್ಲಿ ಉಳಿದುಕೊಂಡಿದ್ದ ಹೋಟೆಲ್‌ ರೂಂ ನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಕುರಿತು ಸ್ವತಃ ವಿರಾಟ್‌ ಕೊಹ್ಲಿ ಬೇಸರವನ್ನು ಹೊರಹಾಕಿದ್ದಾರೆ. ಇನ್ನು ಅವರ ಪತ್ನಿ ನಟಿ ಅನುಷ್ಕಾ ಶರ್ಮಾ (Anushka Sharma) ಹಾಗೂ ಹಲವು ಕ್ರಿಕೆಟಿಗರು ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ, ಬಾಲಿವುಡ್‌ ನ (Bollywood) ಹಲವು ನಟ ನಟಿಯರು ಈ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಬಿಟೌನ್‌ ನ ಖ್ಯಾತನಾಮರಾಮ ಅಭಿಷೇಕ್‌ ಬಚ್ಚನ್‌, ವರುಣ್‌ ಧವನ್‌, ಹೃತಿಕ್‌ ರೋಷನ್‌, ಅರ್ಜುನ್‌ ಕಪೂರ್‌, ಪರಿಣಿತಿ ಚೋಪ್ರಾ ಮುಂತಾದವರು ಇದನ್ನು ಖಂಡಿಸಿದ್ದಾರೆ.


ಕೊಹ್ಲಿ ಬೆಡ್​ ರೂಂ ವಿಡಿಯೋ ವೈರಲ್:


ಅಂದಹಾಗೆ, ಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಪರ್ತ್ ನ ಹೊಟೇಲ್ ವೊಂದರಲ್ಲಿ ತಂಗಿದ್ದ ಟೀಂ ಇಂಡಿಯಾದ ಬ್ಯಾಟ್ಸ್‌ ಮನ್‌ ವಿರಾಟ್ ಕೊಹ್ಲಿ ತನ್ನ ಖಾಸಗಿತನದ ಬಗ್ಗೆ ಯಾರೋ ಒಬ್ಬರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ ಎಂದು ಇನ್ಸ್ಟಾ ಮೂಲಕ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದರು.


ಇನ್ಸ್ಟಾಗ್ರಾಮ್ ನಲ್ಲಿ ಕೊಹ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಅವರು ಇಲ್ಲದಿದ್ದಾಗ ಅವರ ಕೊಠಡಿಯೊಳಗೆ ಯಾರೋ ಬಂದಿದ್ದು, ವಿಡಿಯೋ ಮಾಡಿದ್ದಾರೆ. ಅದರಲ್ಲಿ ಕೊಹ್ಲಿಯ ಸೂಟ್ ಕೇಸ್, ಬಟ್ಟೆ ಇಡುವ ಸ್ಥಳ, ಶೂ, ಗ್ಲಾಸ್ ಗಳು ಮತ್ತಿತರ ವಸ್ತುಗಳ ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಪ್ರತಿಯೊಬ್ಬರ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿರುವ ಕೊಹ್ಲಿ, ಅವರನ್ನು ಮನರಂಜನೆಯ ಸರಕನ್ನಾಗಿ ಮಾಡದಂತೆ ಕೇಳಿಕೊಂಡಿದ್ದರು.


ಇದನ್ನೂ ಓದಿ: IND vs SA: ಭಾರತದ ಎದುರು ಆಫ್ರಿಕಾ ಗೆಲ್ಲಲು ಧೋನಿ ಕಾರಣ, ಶಾಕಿಂಗ್​ ಹೇಳಿಕೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ


ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ನೋಡುವುದು... ಅವರನ್ನು ಭೇಟಿಯಾಗುವುದು ಅಭಿಮಾನಿಗಳಿಗೆ ಖುಷಿ ನೀಡುತ್ತದೆ. ನಾವು ಕೂಡ ಅಭಿಮಾನಿಗಳನ್ನು ಭೇಟಿ ಮಾಡಲು ಉತ್ಸುಕರಾಗಿದ್ದೇವೆ. ಆದರೆ ಈ ವಿಡಿಯೋ ನನಗೆ ಬೇಸರ ತಂದಿದೆ. ನನ್ನ ಕೋಣೆಯಲ್ಲಿಯೂ ನನಗೆ ಖಾಸಗಿತನವಿಲ್ಲ. ನನ್ನ ಕೋಣೆಯಲ್ಲಿ ಗೌಪ್ಯತೆಯನ್ನು ಹೊಂದಿಲ್ಲದಿದ್ದರೆ, ನಾನು ಅದನ್ನು ಎಲ್ಲಿ ಹೊಂದಬಹುದು? ಅಂತಹ ಅಭಿಮಾನವನ್ನು ನಾನು ಬೆಂಬಲಿಸಲಾರೆ. ಇತರರ ಖಾಸಗಿತನವನ್ನು ಗೌರವಿಸಿ ಅವರನ್ನು ವಸ್ತುಗಳಂತೆ ಪರಿಗಣಿಸಬೇಡಿ ಎಂದು ಬರೆದುಕೊಂಡಿದ್ದರು.


ಕೊಹ್ಲಿ ಪರ ನಿಂತ ಬಾಲಿವುಡ್:


ನಟಿ ಹಾಗೂ ಕೊಹ್ಲಿ ಪತ್ನಿ ಅನಿಷ್ಕಾ ಶರ್ಮಾ ಇದನ್ನು ಒಪ್ಪಲಾಗುವುದಿಲ್ಲ ಹಾಗೂ ಮನುಷ್ಯತ್ವದ ಉಲ್ಲಂಘನೆ ಅಂತ ಕರೆದಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನಟ ವರುಣ್ ಧವನ್, "ಭಯಾನಕ ನಡವಳಿಕೆ" ಎಂದು ಬರೆದಿದ್ದಾರೆ. ಇನ್ನು ನಟ ಅರ್ಜುನ್ ಕಪೂರ್ ಅವರು ವೀಡಿಯೊವನ್ನು "ಸಂಪೂರ್ಣವಾಗಿ ಅನೈತಿಕ ಮತ್ತು ನಾಟ್‌ ಕೂಲ್‌ ಎಂದು ಹೇಳಿದ್ದಾರೆ. ಇನ್ನು ನಟಿ ಪರಿಣಿತಿ ಚೋಪ್ರಾ OMGF ನ್ಯೂ ಲೆವೆಲ್‌ ಆಫ್‌ ಲೋ ಅಂತ ಬರೆದಿದ್ದಾರೆ. ನಟಿ ಊರ್ವಶಿ ರೌಟೇಲಾ, ಇದು ಅನೌತಿಕವಾದದ್ದು. ಇದನ್ನೇ ಒಬ್ಬ ಹುಡುಗಿಯ ರೂಂ ನಲ್ಲಿ ಮಾಡಿದ್ದರೆ... ಎಂದು ಬರೆದಿದ್ದಾರೆ.


ಇದನ್ನೂ ಓದಿ: T20 WC 2022 IND vs BAN: ನಾಳೆ ಭಾರತ-ಬಾಂಗ್ಲಾ ಪಂದ್ಯ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11


ಇನ್ನು ನಟ ಹೃತಿಕ್ ರೋಷನ್ ಮತ್ತು ಅಭಿಷೇಕ್ ಬಚ್ಚನ್ ಕೂಡ ಕೊಹ್ಲಿ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಅಭಿಷೇಕ್ ವೀಡಿಯೊ "ಕೂಲ್ ಅಲ್ಲ" ಎಂದು ಬರೆದಿದ್ದರೆ, ಹೃತಿಕ್, ಅಪರಾಧಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಬರೆದಿದ್ದಾರೆ. "ಡ್ಯಾಮ್! ಈ ವ್ಯಕ್ತಿಯನ್ನು ಪತ್ತೆ ಹಚ್ಚಿ ಕೆಲಸದಿಂದ ವಜಾಗೊಳಿಸಬೇಕು ಮತ್ತು ಹೋಟೆಲ್ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು! ಎಂದು ಹೃತಿಕ್‌ ಕಾಮೆಂಟ್‌ ಮಾಡಿದ್ದಾರೆ.

Published by:shrikrishna bhat
First published: