Rishabh Pant: ನನ್ನ ಹೆಸರು ಬಳಸಿ ಫೇಮಸ್​ ಆಗ್ತಿದ್ದಾರೆ! ಬಾಲಿವುಡ್​ ಖ್ಯಾತ ನಟಿ ಹೆಸರು ಹೇಳದೇ ಟಾಂಗ್​ ಕೊಟ್ಟ ಪಂತ್​!

ರಿಷಬ್ ಪಂತ್ - ಊರ್ವಶಿ ರೌಟೇಲಾ ನಡುವಿನ ಮಾತುಗಳು ಇದೀಗ ಬಾಲಿವುಡ್​ ಹಾಗೂ ಕ್ರಿಕೆಟ್ ವಲಯದಲ್ಲಿ ಸಖತ್​ ಚರ್ಚೆಗೆ ಕಾರಣವಾಗಿದೆ.

ರಿಷಭ್ -ಊರ್ವಶಿ

ರಿಷಭ್ -ಊರ್ವಶಿ

  • Share this:
ಭಾರತದ ಯುವ ಆಟಗಾರ ರಿಷಭ್ ಪಂತ್​ (Rishabh Pant) ಸದ್ಯ ಮುಂಬರುವ ಏಷ್ಯಾ ಕಪ್​ಗಾಗಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಅವರ ಹೆಸರು ಬಾಲಿವುಡ್​ನಲ್ಲಿ ತಳಕುಹಾಕಿಕೊಂಡಿದೆ. ಹೌದು, ಕ್ರಿಕೆಟಿಗ ಮತ್ತು ನಟಿಯರುಗಳ ನಡುವೆ ಡೇಟಿಂಗ್​,  ಗಾಸಿಪ್​ ​ಗಳು ಸಾಮಾನ್ಯವಾಗಿರುತ್ತದೆ. ಬಾಲಿವುಡ್ (Urvashi Rautela) ನಟಿಯನ್ನು ಮದುವೆಯಾಗಿ ಚೆನ್ನಾಗಿ ಸೆಟಲ್ ಆಗಿರುವ ಕ್ರಿಕೆಟಿಗರೂ ಇದ್ದಾರೆ. ಆದರೆ ರಿಷಬ್ ಪಂತ್ - ಊರ್ವಶಿ ರೌಟೇಲಾ (Urvashi Rautela) ನಡುವಿನ ಮಾತುಗಳು ಇದೀಗ ಬಾಲಿವುಡ್​ ಹಾಗೂ ಕ್ರಿಕೆಟ್ (Cricket)​ ವಲಯದಲ್ಲಿ ಸಖತ್​ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಊರ್ವಶಿ ರೌಟೇಲಾ ಸಂದರ್ಶನವೊಂದರಲ್ಲಿ ರಿಷಭ್ ಪಂತ್ ಅವರ ಕುರಿತು ಮಾತಾಡಿದ್ದು, ಇದೀಗ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. 

ಅವರು ನನಗಾಗಿ ಕಾದಿದ್ದರು:

ಹೌದು, ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಊರ್ವಶಿ ರೌಟೇಲಾ, ‘ಮೊದಲೇ ವಾರಣಾಸಿಯಲ್ಲಿ ಶೂಟಿಂಗ್ ಮುಗಿಸಿ ದೆಹಲಿಗೆ ಶೋಗೆ ಹೋಗಿದ್ದೆ. ಸುಮಾರು 10 ಗಂಟೆಗಳ ಕಾಲ ಶೂಟಿಂಗ್ ನಡೆದಿದೆ. ನಾನು ತುಂಬಾ ಸುಸ್ತಾಗಿ ನನ್ನ ಹೊಟೇಲ್​ ರೂಂ ಗೆ ಬಂದಿದ್ದೆ. ಅದೇ ವೇಳೆ ‘RP‘ ಅವರೂ ಸಹ ನನ್ನನ್ನು ಭೇಟಿಯಾಗಲು ಅಲ್ಲಿಗೆ ಬಂದಿದ್ದರು. ಅಲ್ಲದೇ ನನಗಾಗಿ ಅವರು ತುಂಬಾ ಸಮಯದ ವರೆಗೂ ಕಾದಿದ್ದಾರೆ. ಆದರೆ ನನಗೆ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಅಲ್ಲದೇ ಅವರು ನನಗೆ ಸರಿಸುಮಾರು 16ರಿಂದ 17 ಬಾರಿ ಕರೆ ಮಾಡಿದ್ದರು. ಆದರೆ ನಾನು ನಿದ್ರೆಗೆ ಜಾರಿದ್ದೆ‘ ಎಂದು ಹೇಳಿದ್ದಾರೆ.

ಆದರೆ ಇಲ್ಲಿ ನಟಿ ಊರ್ವಶಿ ಅವರು ‘RP‘ ಎಂದು ಹೇಳಿರುವ ಕಾರಣ ನೆಟ್ಟಿಗರು ಇದನ್ನು ರಿಷಭ್ ಪಂತ್ ಎಂದು ಹೇಳುತ್ತಿದ್ದಾರೆ. ಏಕೆಂದರೆ ಅನೇಕ ಬಾರಿ ಇವರಿಬ್ಬರ ನಡುವೆ ಪ್ರೇಮವಿತ್ತು ಎಂಬ ಸುದ್ದಿಗಳೂ ಮೊದಲೆಲ್ಲಾ ಹರಿದಾಡಿತ್ತು. ಹೀಗಾಗಿ ‘RP‘ ಎಂದಾಕ್ಷಣ ನೆಟ್ಟಿಗರು ರಿಷಭ್ ಪಂತ್ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: MS Dhoni: ದಾಖಲೆ ವೀರ ಧೋನಿಗೆ ಈ 3 ರೆಕಾರ್ಡ್ ಕನಸಾಗಿ ಉಳಿತಂತೆ, ಅದ್ರ ಹತ್ರ ಹೋಗೋಕೂ ಸಾಧ್ಯವಾಗಿಲ್ವಾ?

ಹೆಸರು ಹೇಳದೇ ತಿರುಗೇಟು ನೀಡಿದ ರಿಷಭ್:

ಆದರೆ ಸಾಮಾಜಿಕ ಜಾಲತಾಣದಲ್ಲಿ ಊರ್ವಶಿ ಅವರ ಸಂದರ್ಶನದ ತುಣುಕುಗಳು ಹರಿದಾಡಿದ ನಂತರ ಕ್ರಿಕೆಟಿಗ ರಿಷಭ್ ಪಂತ್ ಊರ್ವಶಿ ಅವರ ಹೆಸರನ್ನು ಬಳಸದೇ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಪೋಸ್ಟ್ನಲ್ಲಿ ಅವರು, ‘ಕೇವಲ ಅಲ್ಪ ಜನಪ್ರಿಯತೆಗಾಗಿ ಮತ್ತು ಮುನ್ನಲೆಗೆ ಬರಲು ಜನರು ಸಂದರ್ಶನಗಳಲ್ಲಿ ಹೇಗೆ ಸುಳ್ಳು ಹೇಳುತ್ತಾರೆ ಎಂಬುದು ತಮಾಷೆಯಾಗಿದೆ. ಕೆಲವರು ಖ್ಯಾತಿ ಮತ್ತು ಹೆಸರಿಗಾಗಿ ಎಂತಹ ಹೇಳಿಕೆ ನೀಡುತ್ತಾರೆ ಎಂದು ನೋಡಿದರೆ ದುಃಖವಾಗುತ್ತದೆ. ದೇವರು ಅವರನ್ನು ಆಶೀರ್ವದಿಸಲಿ. #merapicachorhoBehen #jhutkibhilimithotihai” ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಕೊನೆಯಲ್ಲಿ ನೀಡಿದ ಈ ಎರಡು ಹ್ಯಾಶ್‌ಟ್ಯಾಗ್‌ಗಳ ಅರ್ಥ- ನನ್ನನ್ನು ಬಿಟ್ಟುಬಿಡಿ ಸಹೋದರಿ ಮತ್ತು ಸುಳ್ಳು ಹೇಳುವುದಕ್ಕೂ ಮಿತಿ ಇದೆ ಎಂದಾಗಿದೆ.

ರಿಷಭ್ ಪಂತ್ ಇನ್ಸ್ಟಾ ಪೋಸ್ಟ್


ರಿಷಭ್ ಅವರನ್ನು ಹಾಡಿ ಹೋಗಳಿದ್ದ ಪಾಕ್ ಮಾಜಿ ವೇಗಿ:

ಶೊಯೇಬ್ ಅಖ್ತರ್ ಟೀಮ್ ಇಂಡಿಯಾದ ರೋಚಕ ಬ್ಯಾಟ್ಸ್ ಮನ್ ಮತ್ತು ಕೀಪರ್ ರಿಷಭ್ ಪಂತ್ ಅವರನ್ನು ಹಾಡಿ ಹೊಗಳಿದ್ದು,  ರಿಷಭ್ ಪಂತ್​ ಗೆ ಇನ್ನೂ 24 ವರ್ಷ, ಸ್ವಲ್ಪ ತೂಕ ಕಳೆದುಕೊಂಡರೆ ಮಾಡೆಲ್ ಆಗಬಹುದು ಮತ್ತು ಕೋಟಿಗಟ್ಟಲೆ ಸಂಪಾದಿಸಬಹುದು ಎಂದು ಹೇಳಿದ್ದಾರೆ.
Published by:shrikrishna bhat
First published: