Urvashi Rautela: ಪಂತ್ ಆಯ್ತು, ಈಗ ಪಾಕ್ ಆಟಗಾರನೇ ಬೇಕಂತೆ! ಬಾಲಿವುಡ್​ ನಟಿ ರೀಲ್ಸ್​ ವಿಡಿಯೋ ವೈರಲ್​

Urvashi Rautela: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಕಳೆದ ಹಲವು ದಿನಗಳಿಂದ ನಟಿ ಕ್ರಿಕೆಟಿಗ ರಿಷಬ್ ಪಂತ್ ಜೊತೆಗಿನ ವಿವಾದಗಳಿಂದ ಸುದ್ದಿಯಲ್ಲಿದ್ದರು. ಇದೀಗ ಆಕೆ ಪಾಕಿಸ್ತಾನದ ಕ್ರಿಕೆಟಿಗ ನಸೀಮ್ ಶಾ ಜೊತೆಗಿನ ವಿಡಿಯೋ ಮೂಲಕ ಗಮನ ಸೆಳೆದಿದ್ದಾರೆ.

ಊರ್ವಶಿ ರೌಟೇಲಾ-ನಸೀಮ್ ಶಾ

ಊರ್ವಶಿ ರೌಟೇಲಾ-ನಸೀಮ್ ಶಾ

  • Share this:
ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಕಳೆದ ಹಲವು ದಿನಗಳಿಂದ ನಟಿ ಕ್ರಿಕೆಟಿಗ ರಿಷಭ್ ಪಂತ್ (Rishabh Pant) ಜೊತೆಗಿನ ವಿವಾದಗಳಿಂದ ಸುದ್ದಿಯಲ್ಲಿದ್ದರು. ಇದೀಗ ಆಕೆ ಪಾಕಿಸ್ತಾನದ ಕ್ರಿಕೆಟಿಗ ನಸೀಮ್ ಶಾ (Naseem Shah) ಜೊತೆಗಿನ ವಿಡಿಯೋ ಮೂಲಕ ಗಮನ ಸೆಳೆದಿದ್ದಾರೆ. ಹೌದು, ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ನ ಕ್ರಿಕೆಟ್ ಪಂದ್ಯಗಳಿಗೆ ಊರ್ವಶಿ ಸ್ಟೇಡಿಯಂನಲ್ಲಿ ಹಾಜರಾಗಿದ್ದಾರೆ. ಇಲ್ಲಿಯವರೆಗೂ ಊರ್ವಶಿ ಹೆಸರು ಭಾರತದ ಕ್ರಿಕೆಟಿಗ ರಿಷಭ್ ಪಂತ್ ಜೊತೆಗೆ ತಳುಕು ಹಾಕಿಕೊಂಡಿತ್ತು. ಆದರೆ ಇದೀಗ ಊರ್ವಶಿ ಪಾಕಿಸ್ತಾನಿ ಕ್ರಿಕೆಟಿಗನ ಜೊತೆ ತಳುಕು ಹಾಕಿಕೊಳ್ಳುವ ಮೂಲಕ ಸಖತ್​ ಸುದ್ದಿ ಮಾಡುತ್ತಿದ್ದಾರೆ. ಅಲ್ಲದೇ ಊರ್ವಶಿ ಅವರು ಪಾಕ್​ ಆಟಗಾರನ ಜೊತೆಗಿನ ರೊಮ್ಯಾಂಟಿಕ್ ವಿಡಿಯೋ (Video) ಶೇರ್ ಮಾಡಿದ್ದಾರೆ. ಇದರಿಂದಾಗಿ ಊರ್ವಶಿ ರೌಟೇಲಾ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಟ್ರೋಲ್​ ಆಗುತ್ತಿದ್ದಾರೆ.

ಪಾಕ್​ ಆಟಗಾರನ ಜೊತೆ ಬಾಲಿವುಡ್ ಬೆಡಗಿ:

ಹೌದು, ನಟಿ ಊರ್ವಶಿ ಮತ್ತು ರಿಷಭ್ ಪಂತ್​ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದದ ಸುದ್ದಿಗಳು ನಿರಂತರವಾಗಿ ಬರುತ್ತಲೇ ಇತ್ತು. ಆದರೆ ಇದೀಗ ನಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ರೊಮ್ಯಾಂಟಿಕ್ ರೀಲ್ ಅನ್ನು ಹಂಚಿಕೊಂಡಿದ್ದಾರೆ. ಆದರೆ ರಿಷಭ್​ ಜೊತೆ ಅಲ್ಲ. ಬದಲಿಗೆ ಪಾಕಿಸ್ತಾನಿ ಕ್ರಿಕೆಟಿಗ ನಸೀಮ್ ಶಾ ಈ ರೀಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಹೊರಬಂದಾಗಿನಿಂದ ಊರ್ವಶಿ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. ಈ ನಟಿಗೆ ಈಗ ಪಾಕಿಸ್ತಾನದಿಂದಲೂ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ.

ಊರ್ವಶಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಈ ವೀಡಿಯೊದಲ್ಲಿ, ಪಾಕಿಸ್ತಾನಿ ಬೌಲರ್ ನಸೀಮ್ ಶಾ ಪರದೆಯ ಮೇಲೆ ಊರ್ವಶಿಯನ್ನು ನೋಡಿ ನಗುತ್ತಿದ್ದಾರೆ. ಊರ್ವಶಿ ಕೂಡ ಸ್ಮೈಲ್ ನೀಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ನೋಡಿದ ನಂತರ ಊರ್ವಶಿ ಸಾಕಷ್ಟು ಟ್ರೋಲ್ ಆಗಿದ್ದಾರೆ. ಊರ್ವಶಿ ಈಗ ಈ ಕಥೆಯನ್ನು ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಅಳಿಸಿದ್ದಾರೆ. ಆದರೆ ಇದೀಗ ಕೆಲವು ಅಭಿಮಾನಿಗಳು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಹೀಗಿರುವಾಗ ಊರ್ವಶಿಯನ್ನ ಈ ವಿಡಿಯೋಗೆ ಮತ್ತೆ ಜನ ಟ್ರೋಲ್ ಮಾಡುತ್ತಿದ್ದಾರೆ.

ಇಷ್ಟೇ ಅಲ್ಲ ಊರ್ವಶಿ ಹಾಗೂ ನಸೀಮ್ ಶಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಮ್ಸ್ ಸುರಿಮಳೆಯಾಗುತ್ತಿದೆ. ಇಬ್ಬರ ಫೋಟೋಗಳು ಮತ್ತು ವಿಡಿಯೋಗಳನ್ನು ಎಡಿಟ್ ಮಾಡಿ ಹಲವು ಫನ್ನಿ ಮೀಮ್‌ಗಳನ್ನು ಮಾಡಲಾಗಿದೆ. ಪ್ರಸ್ತುತ, ಊರ್ವಶಿ ರೌಟೇಲಾ ಮತ್ತು ನಸೀಮ್ ಶಾ ಪ್ರಚಾರದಲ್ಲಿದ್ದಾರೆ. ಹಲವರು ಈ ಮೀಮ್‌ಗಳಲ್ಲಿ ಈ ಇಬ್ಬರ ಜೊತೆಗೆ ಕ್ರಿಕೆಟಿಗ ರಿಷಭ್ ಪಂತ್ ಅವರನ್ನು ಸೇರಿಸಿದ್ದಾರೆ.

ಇದನ್ನೂ ಓದಿ: Rishabh Pant: ಊರ್ವಶಿ ರೌಟೇಲಾಗಾಗಿ ಹುಡುಕಾಟ, ರಿಷಭ್ ಪಂತ್​ ಕಾಲೆಳೆದ ಚಹಾಲ್​-ರೋಹಿತ್​

ಪದೇ ಪದೇ ಸುದ್ದಿಯಾಗುತ್ತಿದ್ದ ಊರ್ವಶಿ-ಪಂತ್​:

ಇನ್ನು, ಊರ್ವಶಿ ಮತ್ತು ರಿಷಭ್ ಪಂತ್ ಕಳೆದ ಕೆಲ ದಿನಗಳಿಂದ ಸಖತ್ ಸುದ್ದಿಯಲ್ಲಿದ್ದರು. ಇದಕ್ಕಾಗಿ ಇವರಿಬ್ಬರೂ ಪರೋಕ್ಷವಾಗಿ ಸಹ ಸಮಾಜಿಕ ಜಾಲತಾಣದಲ್ಲಿ ಪ್ರತಿಕ್ರಯೆಗಳನ್ನು ನೀಡುತ್ತಿದ್ದರು. ಅದೇ ರೀತಿ ಹಾಂಗ್​ ಕಾಂಗ್​ ಪಂದ್ಯದ ಬಳಿಕ  ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಚಹಾಲ್ ಮತ್ತು ರಿಷಭ್ ಪಂತ್​ ಮೈದಾನದಲ್ಲಿ ಕೆಲ ಕಾಲ ಸಮಯ ಕಳೆದರು. ಈ ವೇಳೆ  ರೋಹಿತ್​ ಮತ್ತು ಚಹಾಲ್​ ರಿಷಭ್​ ಬಳಿ ಊರ್ವಶಿ ಅವರನ್ನು ಹುಡುಕುತ್ತಿದ್ದೀಯಾ ಎಂದು ಕೇಳುವ ಮೂಲಕ ತಮಾಷೆ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಒಂದು ವಿಡಿಯೋ ತುಣುಕನ್ನು ವೈರಲ್ ಮಾಡುತ್ತಿದ್ದಾರೆ.
Published by:shrikrishna bhat
First published: