ಐಪಿಎಲ್​​​ನಲ್ಲಿ ಅಬ್ಬರಿಸುವ ಧೋನಿ ಟೀಂ ಇಂಡಿಯಾದಲ್ಲಿ ಮಾತ್ರ ಯಾಕಿಂಗೆ..?

news18
Updated:October 2, 2018, 8:55 PM IST
ಐಪಿಎಲ್​​​ನಲ್ಲಿ ಅಬ್ಬರಿಸುವ ಧೋನಿ ಟೀಂ ಇಂಡಿಯಾದಲ್ಲಿ ಮಾತ್ರ ಯಾಕಿಂಗೆ..?
  • Advertorial
  • Last Updated: October 2, 2018, 8:55 PM IST
  • Share this:
ನ್ಯೂಸ್ 18 ಕನ್ನಡ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಫಾರ್ಮ್ ಕುರಿತು ಮತ್ತೆ ಸಾಕಷ್ಟು ಟೀಕೆಗಳು ಕೇಳಿ ಬಂದಿದೆ. ಇತ್ತೀಚೆಗಷ್ಟೇ ಏಷ್ಯಾ ಕಪ್​​ನಲ್ಲಿ ವಿಕೆಟ್ ಹಿಂಬದಿ 800 ಬಲಿತೆಗೆದುಕೊಂಡ ಸಾಧನೆ ಮಾಡಿದ್ದರು. ಸ್ಟಂಪಿಂಗ್​​ನಲ್ಲಂತೂ ಮಾಹಿಗೆ ಯಾರು ಸಾಟಿಯೇ ಇಲ್ಲ. ಆದರೆ, ಬ್ಯಾಟಿಂಗ್​​ನಲ್ಲಿ ಮಾತ್ರ ಧೋನಿ ತಮ್ಮ ಹಳೆಯ ವೈಖರಿಯನ್ನೇ ಮರೆತಂತಿದೆ.

ಈ ವರ್ಷದ ಐಪಿಎಲ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಯಶಸ್ವಿ ಪ್ರದರ್ಶನ ತೋರಿದ್ದ ಮಾಹಿ ತಂಡವನ್ನ ಚಾಂಪಿಯನ್ ಪಟ್ಟಕೇರಿಸಿದರು. ಆದರೆ ಆ ಬಳಿಕ ಟೀಂ ಇಂಡಿಯಾದಲ್ಲಿ ಮಾತ್ರ ಅಷ್ಟಾಗಿ ಧೋನಿ ಬ್ಯಾಟ್ ಬೀಸಲೇ ಇಲ್ಲ. 2018ರಲ್ಲಿ ಆಡಿದ 16 ಐಪಿಎಲ್ ಪಂದ್ಯಗಳಲ್ಲಿ 3 ಅರ್ಧಶತಕ ಸಹಿತ 75.83ರ ಸರಾಸರಿಯಲ್ಲಿ ಧೋನಿ ಬ್ಯಾಟ್ ಬೀಸಿದರು. ಆದರೆ ಕಳೆದ 10 ಏಕದಿನ ಪಂದ್ಯಗಳಲ್ಲಿ ಅವರು ಗಳಿಸಿದ್ದು ಒಟ್ಟಾರೆ 196 ರನ್ ಮಾತ್ರ. ಅದರಲ್ಲೂ ಏಷ್ಯಾಕಪ್​​ನಲ್ಲಿ ಸಿಕ್ಕ 4 ಬ್ಯಾಟಿಂಗ್ ಅವಕಾಶದಲ್ಲಿ ಧೋನಿ ಗಳಿಸಿದ್ದು ಕೇವಲ 77 ರನ್. ಇದು ಧೋನಿಯ ಬ್ಯಾಟಿಂಗ್ ವೈಫಲ್ಯಕ್ಕೆ ಹಿಡಿದಿರುವ ಕನ್ನಡಿ.

ಇನ್ನು ಮುಂಬರುವ ಐಸಿಸಿ ವಿಶ್ವಕಪ್​​ಗೆ ಕೆಲವೇ ತಿಂಗಳು ಬಾಕಿ ಉಳಿದಿವೆ. ಇಂತಹ ಸಂದರ್ಭದಲ್ಲಿ 37ರ ಹರೆಯದ ಧೋನಿ ತಂಡದ ಪ್ರಮುಖ ಆಧಾರಸ್ಥಂಭವಾಗಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಮ್ಯಾಚ್ ಫಿನಿಷರ್ ಆಗಿ ಗುರುತಿಸಿಕೊಳ್ಳಬೇಕಾಗುತ್ತದೆ. ಆದರೆ ಧೋನಿಯ ಸದ್ಯದ ಫಾರ್ಮ್ ನಿಜಕ್ಕೂ ಆಶ್ಚರ್ಯದ ಜೊತೆಗೆ ಆಘಾತಕ್ಕೆ ಕಾರಣವಾಗಿದೆ. ಹೀಗಾಗಿ ಧೋನಿ ಇನ್ನಾದರು ತಮ್ಮ ಜವಾಬ್ದಾರಿ ಅರಿತು ಬ್ಯಾಟಿಂಗ್ ಮಾಡಬೇಕಿದೆ.
First published:October 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ