2ನೇ ಏಕದಿನಕ್ಕೆ ಭಾರತ ಕಠಿಣ ಅಭ್ಯಾಸ: ಪರ್ಫೆಕ್ಟ್​ ಯಾರ್ಕರ್​​ಗೆ ಭುವಿಯಿಂದ ಹೊಸ ತಂತ್ರ

ಮೊದಲ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಉತ್ತಮ ಪ್ರದರ್ಶನ ನೀಡಿದ್ದರು ಡೆತ್ ಓವರ್​​ನಲ್ಲಿ ದುಬಾರಿಯಾಗಿ ಬಿಟ್ಟರು. ಅದರಲ್ಲು ಕೊನೆಯ ಓವರ್​ನಲ್ಲಿ 18 ರನ್ ನೀಡಿದ್ದು ಟೀಂ ಇಂಡಿಯಾಕ್ಕೆ ಮುಳುವಾಯಿತು.

Vinay Bhat | news18
Updated:January 14, 2019, 4:57 PM IST
2ನೇ ಏಕದಿನಕ್ಕೆ ಭಾರತ ಕಠಿಣ ಅಭ್ಯಾಸ: ಪರ್ಫೆಕ್ಟ್​ ಯಾರ್ಕರ್​​ಗೆ ಭುವಿಯಿಂದ ಹೊಸ ತಂತ್ರ
ಭುವನೇಶ್ವರ್ ಕುಮಾರ್ (ಟೀಂ ಇಂಡಿಯಾ ವೇಗಿ)
  • News18
  • Last Updated: January 14, 2019, 4:57 PM IST
  • Share this:
ಅಡಿಲೇಡ್​​​: ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯ ಸೋತಿರುವ ಟೀಂ ಇಂಡಿಯಾ ಎರಡನೇ ಪಂದ್ಯಕ್ಕೆ ಸಕಲ ಸಿದ್ದತೆಯಲ್ಲಿ ತೊಡಗಿದೆ.

ನೆಟ್​ನಲ್ಲಿ ಬೆವರು ಹರಿಸುತ್ತಿರುವ ಕೊಹ್ಲಿ ಹುಡುಗರು ನಾಳೆ ನಡೆಯಲಿರುವ 2ನೇ ಪಂದ್ಯ ಗೆಲ್ಲಲೇ ಬೇಕೆಂದು ಪಣತೊಟ್ಟಿದೆ. ಟೀಂ ಇಂಡಿಯಾಕ್ಕೆ ಈ ಪಂದ್ಯ ಗೆಲ್ಲಲೇ ಬೇಕಾಗಿದ್ದು ಸೋತರೆ ಸರಣಿ ಆಸೀಸ್ ಪಾಲಾಗಲಿದೆ.

ಮೊದಲ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಉತ್ತಮ ಪ್ರದರ್ಶನ ನೀಡಿದ್ದರು ಡೆತ್ ಓವರ್​​ನಲ್ಲಿ ದುಬಾರಿಯಾಗಿ ಬಿಟ್ಟರು. ಅದರಲ್ಲು ಕೊನೆಯ ಓವರ್​ನಲ್ಲಿ 18 ರನ್ ನೀಡಿದ್ದು ಟೀಂ ಇಂಡಿಯಾಕ್ಕೆ ಮುಳುವಾಯಿತು. 10 ಓವರ್​ ಬೌಲಿಂಗ್ ಮಾಡಿದ್ದ ಭುವನೇಶ್ವರ್ 66 ರನ್ ನೀಡಿ 2 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ:  204 ರನ್​​ಗಳ ಗುರಿ ಬೆನ್ನತ್ತಿದ ತಂಡ ಕೇವಲ '14 ರನ್​ಗೆ ಆಲೌಟ್': ಕ್ರಿಕೆಟ್ ಇತಿಹಾಸದಲ್ಲೆ ಕೆಟ್ಟ ಪ್ರದರ್ಶನ

ಹೀಗಾಗಿ ಬೌಲಿಂಗ್​ನಲ್ಲಿ ಹಿಡಿತ ಸಾಧಿಸಲು ಭುವನೇಶ್ವರ್ ಕುಮಾರ್ ಹೊಸ ತಂತ್ರವನ್ನು ರೂಪಿಸಿದ್ದಾರೆ. ಯಾರ್ಕರ್ ಎಸೆಯುವಲ್ಲಿ ಕೊಂಚ ವೀಕ್ ಆಗಿರುವ ಭುವಿ, ನೆಟ್​​ನಲ್ಲಿ ಅಭ್ಯಾಸ ಮಾಡುವ ವೇಳೆ ವಿಕೆಟ್ ಎದುರು ಶೂಗಳನ್ನು ಇಟ್ಟು ಪರ್ಫೆಕ್ಟ್​​ ಯಾರ್ಕರ್ ಬೌಲಿಂಗ್ ಮಾಡಲು ಪ್ರಯತ್ನ ಪಡುತ್ತಿದ್ದಾರೆ.

 ಇದನ್ನೂ ಓದಿ: 2019 ಐಪಿಎಲ್​​​ನ ಟಾಪ್​ 5 ಆಲ್ರೌಂಡರ್​​ ಆಟಗಾರರು ಇವರೇ ನೋಡಿ..!

ಈ ಬಗ್ಗೆ ಮಾತನಾಡಿರುವ ಕುಮಾರ್, ಯಾರ್ಕರ್ ಬೌಲಿಂಗ್ ಮಾಡುವುದು ಸುಲಭವಲ್ಲ. ಅದಕ್ಕಾಗಿ ಶೂಗಳನ್ನು ಬಳಸಿ ಯಾರ್ಕರ್ ಬಾಲ್ ಎಸೆಯಲು ಅಭ್ಯಾಸ ಮಾಡುತ್ತಿರುವೆ. ಇದರಿಂದ ಡೆತ್ ಓವರ್​ನಲ್ಲಿ ವಿಕೆಟ್ ಪಡೆಯಲು ಆಗಿಲ್ಲವಾದು ಕನಿಷ್ಠ ರನ್​​ ಕಲೆಹಾಕುವುದನ್ನು ತಡೆಯಬಹುದು. ಹೊಸ ಬಾಲ್ ಆದರೆ ಎದುರಾಳಿ ಬ್ಯಾಟ್ಸ್​ಮನ್​ಗಳನ್ನು ಸ್ವಿಂಗ್​ ಮಾಡಿ ಪೆವಿಲಿಯನ್​ಗೆ ಅಟ್ಟಬಹುದು. ಆದರೆ, ಓಲ್ಡ್​ ಬಾಲ್​ನಲ್ಲಿ ಅದು ಸಾಧ್ಯವಿಲ್ಲ. ಅದಕ್ಕಾಗಿ ಸ್ಲೋ ಬಾಲ್ ಅಥವಾ ಯಾರ್ಕರ್ ಮೊರೆಹೋಗಬೇಕಾಗುತ್ತದೆ ಎಂದಿದ್ದಾರೆ.

First published:January 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ