ಐಪಿಎಲ್​ನಲ್ಲಿ ಭರ್ಜರಿ ಸೇಲ್ ಆದ ಕೃಷ್ಣಪ್ಪ ಗೌತಮ್​ಗೆ ಭಜ್ಜಿ ಹೆಸರು ಬಂದಿದ್ದು ಹೇಗೆ?

ಆಫ್​ಸ್ಪಿನ್ನರ್ ಆಗಿರುವ ಕೆ.ಗೌತಮ್ ಈ ಬಾರಿಯ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕರ್ನಾಟಕ ಪ್ರೀಮಿಯರ್ ಲೀಗ್​ನಲ್ಲಿ ಮಲ್ನಾಡ್ ಗ್ಲೇಡಿಯೇಟರ್ಸ್ ಪರ ಮಿಂಚಿದ್ದಾರೆ. ಒಳ್ಳೆಯ ಆಲ್​ರೌಂಡರ್ ಆಗಿರುವ ಅವರು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಈ ಬಾರಿ ಬೆನ್ನೆಲುಬು ಆಗುವುದರಲ್ಲಿ ಸಂಶಯವಿಲ್ಲ.


Updated:January 28, 2018, 7:01 PM IST
ಐಪಿಎಲ್​ನಲ್ಲಿ ಭರ್ಜರಿ ಸೇಲ್ ಆದ ಕೃಷ್ಣಪ್ಪ ಗೌತಮ್​ಗೆ ಭಜ್ಜಿ ಹೆಸರು ಬಂದಿದ್ದು ಹೇಗೆ?
ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್​ಗೆ 6.2 ಕೋಟಿ ರೂ.ಗೆ ಮಾರಾಟವಾದ ಕೆ. ಗೌತಮ್
  • Share this:
ಬೆಂಗಳೂರು(ಜ. 28): ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅಚ್ಚರಿಯ ಮೊತ್ತಕ್ಕೆ ಸೇಲ್ ಆದವರಲ್ಲಿ ಕರ್ನಾಟಕದ ಕೆ. ಗೌತಮ್ ಕೂಡ ಒಬ್ಬರು. ರಾಜಸ್ಥಾನ್ ರಾಯಲ್ಸ್ ತಂಡ 6.2 ಕೋಟಿಗೆ ಬಿಡ್ ಮಾಡಿ ಕೃಷ್ಣಪ್ಪ ಗೌತಮ್​ರನ್ನು ಖರೀದಿಸಿತು. ಹರಾಜಿನ ಟೀ ಬ್ರೇಕ್ ವೇಳೆ ಸ್ಟಾರ್ ಸ್ಪೋರ್ಟ್ಸ್​ನಲ್ಲಿ ಗೌತಮ್ ಬಗ್ಗೆ ಇಂಟರೆಸ್ಟಿಂಗ್ ಚರ್ಚೆ ನಡೆಯಿತು. ಈ ವೇಳೆ ನಿರೂಪಕಿ ಮಯಂತಿ ಲಾಂಗರ್ ಅವರು ಕೆ.ಗೌತಮ್ ಅವರನ್ನು ಭಜ್ಜಿ ಎಂದೇ ಸಂಬೋಧಿಸಿದರು. ಗೌತಮ್​ಗೆ ಭಜ್ಜಿ ಹೆಸರು ಬಂದದ್ದು ಹೇಗೆ ಎಂಬುದಕ್ಕೆ ಮಯಂತಿ ಅವರೇ ವಿವರಣೆ ನೀಡಿದರು. ಗೌತಮ್ ಅವರು ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಗೌತಮ್​ಗೆ ಹರ್ಭಜನ್ ಸಿಂಗ್ ಫೇವರಿಟ್. ಭಜ್ಜಿ ಜೊತೆಯೇ ಅವರು ಹೆಚ್ಚು ಕಾಲ ಕಳೆಯುತ್ತಿದ್ದರಂತೆ. ಹೀಗಾಗಿ, ಗೌತಮ್ ಅವರಿಗೆ ಹರ್ಭಜನ್ ಸಿಂಗ್ ಅವರ ಭಜ್ಜಿ ಹೆಸರು ತಗುಲಿಹಾಕಿಕೊಂಡಿತು ಎಂದು ಮಯಂತಿ ಲಾಂಗರ್ ತಿಳಿಸಿದರು.

ಇದೇ ವೇಳೆ, ಮುಂಬೈ ಇಂಡಿಯನ್ಸ್ ತಂಡದಲ್ಲಿ ತನಗೆ ಆಡಲು ಹೆಚ್ಚು ಅವಕಾಶ ಸಿಕ್ಕಿರಲಿಲ್ಲ ಎಂದು ವಿಷಾದಿಸಿದ ಗೌತಮ್, ಈಗಿನ ರಾಯಲ್ಸ್ ಟೀಮ್​ನಲ್ಲಿ ತನಗೆ ಆಡಲು ಹೆಚ್ಚು ಅವಕಾಶ ಸಿಗಬಹುದೆಂದು ಆಶಿಸಿದರು.

ಅಂದಹಾಗೆ, ಆಫ್​ಸ್ಪಿನ್ನರ್ ಆಗಿರುವ ಕೆ.ಗೌತಮ್ ಈ ಬಾರಿಯ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕರ್ನಾಟಕ ಪ್ರೀಮಿಯರ್ ಲೀಗ್​ನಲ್ಲಿ ಮಲ್ನಾಡ್ ಗ್ಲೇಡಿಯೇಟರ್ಸ್ ಪರ ಮಿಂಚಿದ್ದಾರೆ. ಒಳ್ಳೆಯ ಆಲ್​ರೌಂಡರ್ ಆಗಿರುವ ಅವರು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಈ ಬಾರಿ ಬೆನ್ನೆಲುಬು ಆಗುವುದರಲ್ಲಿ ಸಂಶಯವಿಲ್ಲ.
First published:January 28, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading