ಎಎಫ್​ಸಿ ಕಪ್: ಪ್ಲೇಆಫ್ ಹಂತಕ್ಕೇರಿದ ಬೆಂಗಳೂರು ಎಫ್​ಸಿ


Updated:May 16, 2018, 9:45 PM IST
ಎಎಫ್​ಸಿ ಕಪ್: ಪ್ಲೇಆಫ್ ಹಂತಕ್ಕೇರಿದ ಬೆಂಗಳೂರು ಎಫ್​ಸಿ
ಬೆಂಗಳೂರು ಎಫ್​ಸಿ

Updated: May 16, 2018, 9:45 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಮೇ 16): ಐಎಸ್​ಎಲ್ ರನ್ನರಪ್ ಬೆಂಗಳೂರು ಫುಟ್ಬಾಲ್ ಕ್ಲಬ್ ಇದೀಗ ಎಎಫ್​ಸಿ ಕಪ್ ಟೂರ್ನಿಯ ಪ್ಲೇ ಆಫ್ ಹಂತಕ್ಕೇರಿದೆ. ಇಂದು ಬಾಂಗ್ಲಾದ ರಾಜಧಾನಿಯಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶದ ಅಬಾಹಾನಿ ಢಾಕಾ ತಂಡವನ್ನು 4-0 ಗೋಲುಗಳಿಂದ ಬೆಂಗಳೂರಿಗರು ಜಯಭೇರಿ ಭಾರಿಸಿದ್ದಾರೆ. ಇ ಗುಂಪಿನಲ್ಲಿ 15 ಅಂಕಗಳೊಂದಿಗೆ ಟಾಪರ್ ಆಗಿ ಮುಂದಿನ ಹಂತಕ್ಕೇರಿದ್ದಾರೆ. ಬೆಂಗಳೂರಿಗರ ಪ್ಲೇ ಆಫ್ ಕನಸಿಗೆ ಅಡ್ಡಿಯಾಗಿದ್ದ ಮಾಲ್ಡೀವ್ಸ್​ನ ನ್ಯೂ ರೇಡಿಯೆಂಟ್ ತಂಡವನ್ನು ಐಜ್ವಾಲ್ ಎಫ್​ಸಿ ಸೋಲಿಸಿತು. ಈ ಮೂಲಕ ಬೆಂಗಳೂರು ಎಫ್​ಸಿ ದಾರಿ ಸುಗಮವಾಯಿತು. ನ್ಯೂ ರೇಡಿಯೆಂಟ್ ತಂಡ 12 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಅಬಾಹಾನಿ ಮತ್ತು ಐಜ್ವಾಲ್ ತಂಡಗಳು 4 ಪಾಯಿಂಟುಗಳೊಂದಿಗೆ ಕೊನೆಯೆರಡು ಸ್ಥಾನ ಪಡೆದವು.

ಒಂಬತ್ತು ಗುಂಪುಗಳಿರುವ ಈ ಟೂರ್ನಿಯಿಂದ ಗ್ರೂಪ್ ಟಾಪರ್ಸ್ ಮುಂದಿನ ಹಂತಕ್ಕೆ ಹೋಗಿದ್ಧಾರೆ. ಅದರಂತೆ ಜಾರ್ಡಾನ್​ನ ಆಲ್ ಜಜೀರಾ ಮತ್ತು ಅಲ್ ಫೈಸಾಲಿ, ಲಿಬಿಯಾದ ಅಲ್ ಅಹೆದ್, ಟುರ್ಕ್​ಮೆನಿಸ್ತಾನ್​ನ ಆಲ್ಟಿನ್ ಅಸೈರ್, ಭಾರತದ ಬೆಂಗಳೂರು ಎಫ್​ಸಿ, ಸಿಂಗಾಪುರದ ಹೋಮ್ ಯುನೈಟೆಡ್, ಮಯನ್ಮಾರ್​ನ ಯಾಂಗೋನ್ ಯುನೈಟೆಡ್, ಇಂಡೋನೇಷ್ಯಾದ ಪೆರ್ಸಿಜಾ ಜಕಾರ್ತ, ಕೊರಿಯಾದ 4.25 ಎಸ್​ಸಿ ತಂಡಗಳು ಕ್ವಾಲಿಫೈ ಆಗಿವೆ.

ಬೆಂಗಳೂರು ಎಫ್​ಸಿ ತಂಡ ಕಳೆದ ಬಾರಿಯ ಎಎಫ್​ಸಿ ಕಪ್​ ಟೂರ್ನಿಯಲ್ಲಿ ಫೈನಲ್​ವರೆಗೂ ಹೋಗಿ ಇತಿಹಾಸ ನಿರ್ಮಿಸಿತ್ತು. ಈ ಬಾರಿ ಕಪ್ ಗೆಲ್ಲಬಹುದೆಂಬ ನಿರೀಕ್ಷೆ ಇದೆ.
First published:May 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ