Pro Kabaddi: ಬೆಂಗಳೂರು ಬುಲ್ಸ್ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ

Bengaluru Bulls Vs Jaipur Pink Panthers: ವಿವೋ ಪ್ರೊ ಕಬಡ್ಡಿ ಲೀಗ್ ಸೀಸನ್ ಎಂಟನೇ ಆವೃತ್ತಿಯ ಟ್ರಿಪಲ್ ಹೆಡರ್ ನಲ್ಲಿ ಸೀಸನ್ 6ರ ಚಾಂಪಿಯನ್ ಬೆಂಗಳೂರು ಬುಲ್ಸ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ಸೆಣಸಾಟ ನಡೆಸಲಿವೆ.

ಬೆಂಗಳೂರು ಬುಲ್ಸ್, ಜೈಪುರ್ ಪಿಂಕ್ ಪ್ಯಾಂಥರ್ಸ್

ಬೆಂಗಳೂರು ಬುಲ್ಸ್, ಜೈಪುರ್ ಪಿಂಕ್ ಪ್ಯಾಂಥರ್ಸ್

 • Share this:
  ಕ್ರೀಡಾ ಅಭಿಮಾನಿಗಳಿಗೆ(Fans) ಇಂದು ಸೂಪರ್ ಸಂಡೆ(Super Sunday).. ಯಾಕಂದ್ರೆ ಒಂದು ಕಡೆ ಐಪಿಎಲ್ ಮೆಗಾ ಹರಾಜು(IPL Auction) ಪ್ರಕ್ರಿಯೆಯ ಭರಾಟೆ ಜೋರಾಗಿದೆ. ಮತ್ತೊಂದು ಕಡೆ ಇಂದು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್(Bengaluru Bulls) ಜೈಪುರ್ ಪಿಂಕ್ ಪ್ಯಾಂಥರ್ಸ್( Jaipur Pink Panthers )ವಿರುದ್ಧ ಸೆಣಸಲಿದೆ.. ಹೀಗಾಗಿ ಇಂದಿನ ಪ್ರೊ ಕಬ್ಬಡಿ(Pro Kabaddi) ಸೀಸನ್ 8ರ ಕಡೆ ಕಬ್ಬಡಿ ಅಭಿಮಾನಿಗಳು ಚಿತ್ತ ನೆಟ್ಟಿದ್ದಾರೆ. ಸೀಸನ್ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಬೆಂಗಳೂರು ಕಳೆದ ಹಲವು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಹೀಗಾಗಿ ಫೈನಲ್ ಪ್ರವೇಶಿಸಬೇಕಾದರೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವುದು ಬೆಂಗಳೂರು ಬುಲ್ಸ್ ಪಾಲಿಗೆ ಅವಶ್ಯಕ.. ಹೀಗಾಗಿ ಸೂಪರ್ ಸಂಡೆ ಯಲ್ಲಿ ಅಭಿಮಾನಿಗಳು ಗಾಯಗೊಂಡಿರುವ ಬುಲ್ಸ್ ಹೇಗೆ ಪಿಂಕ್ ಪ್ಯಾಂಥರ್ಸ್ ಮೇಲೆ ಆಕ್ರಮಣ ಮಾಡಲಿದೆ ಎಂಬುದನ್ನು ತಿಳಿದುಕೊಳ್ಳಲು ಕಾಯುತ್ತಿದ್ದಾರೆ.

  ಇಂದಿನ ಪಂದ್ಯ ಗೆದ್ದರೆ ಪ್ಲೇ-ಆಫ್ ಆಸೆ ಜೀವಂತ

  ವಿವೋ ಪ್ರೊ ಕಬಡ್ಡಿ ಲೀಗ್ ಸೀಸನ್ ಎಂಟನೇ ಆವೃತ್ತಿಯ ಟ್ರಿಪಲ್ ಹೆಡರ್ ನಲ್ಲಿ ಸೀಸನ್ 6ರ ಚಾಂಪಿಯನ್ ಬೆಂಗಳೂರು ಬುಲ್ಸ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ಸೆಣಸಾಟ ನಡೆಸಲಿವೆ. ಕಳೆದ ಬಾರಿ ಬೆಂಗಳೂರು ಎದುರು ಸೋಲು ಕಂಡಿದ್ದ ಪಿಂಕ್ ಪ್ಯಾಂಥರ್ಸ್ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿ ಇದೆ. ಇತ್ತ ಬೆಂಗಳೂರು ಫೈನಲ್ ಪ್ರವೇಶಿಸಬೇಕಾದರೆ ಇಂದಿನ ಪಂದ್ಯ ಗೆಲ್ಲಬೇಕಾದ ಅನಿವಾರ್ಯತೆ ಇದೆ.. ಹೀಗಾಗಿ ಎರಡು ತಂಡಗಳಿಗೆ ಇಂದಿನ ಪಂದ್ಯ ಮಹತ್ವದ್ದಾಗಿದೆ.

  ಇದನ್ನೂ ಓದಿ: ಭಾರತೀಯ ಮೂಲದ ಗೆಳತಿ ಜೊತೆ ಸಪ್ತಪದಿ ತುಳಿಯಲು ಸಜ್ಜಾದ ಮ್ಯಾಕ್ಸ್‌ವೆಲ್

  ಬೆಂಗಳೂರು ತಂಡದ ಬಲ ಹೇಗಿದೆ.

  ಬೆಂಗಳೂರು ಬುಲ್ಸ್ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸೋತಿತ್ತು. ನಾಯಕ ಪವನ್ ಕುಮಾರ್ ಸೆಹ್ರಾವತ್ ರೇಡಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ದ್ವಿತೀಯ ರೈಡರ್ ಆಗಿ ಭರತ್ ತುಂಬಾ ಚೆನ್ನಾಗಿದ್ದಾರೆ. ಉಪನಾಯಕ ಮಹೇಂದರ್ ಸಿಂಗ್, ಅಮನ್, ಸೌರಭ್ ನಂದಲ್ ಮತ್ತು ಮಯೂರ್ ಅವರ ರಕ್ಷಣೆ ಸ್ಥಿರವಾಗಿದೆ.

  ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಬಲ

  ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಕೂಡ ಕಳೆದ ಪಂದ್ಯದಲ್ಲಿ ಯುಪಿ ಯೋಧ ವಿರುದ್ಧ ಸೋಲು ಕಂಡಿತ್ತು.. ಅರ್ಜುನ್ ದೇಶ್ವಾಲ್ ಮತ್ತು ದೀಪಕ್ ನಿವಾಸ್ ಹೂಡಾ ತಂಡಕ್ಕೆ ಉತ್ತಮ ರೇಡ್ ಮಾಡುತ್ತಿದ್ದಾರೆ. ನಾಯಕ ಸಂದೀಪ್ ಧುಲ್, ವಿಶಾಲ್, ಸಾಹುಲ್ ಕುಮಾರ್ ಮತ್ತು ದೀಪಕ್ ಸಿಂಗ್ ಸೇರಿದಂತೆ ರಕ್ಷಣಾ ವಿಭಾಗ ಉತ್ತಮ ಪ್ರದರ್ಶನ ನೀಡುತ್ತಿದೆ.. ಹೀಗಾಗಿ ಎರಡೂ ತಂಡಗಳು ಬಲಿಷ್ಠ ಆಗಿರುವುದರಿಂದ ಇಂದಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಇದೆ..

  ಪವನ್ ಕುಮಾರ್ ಸೆಹ್ರಾವತ್ Vs ಅರ್ಜುನ್ ದೇಶ್ವಾಲ್

  ಬೆಂಗಳೂರು ತಂಡದ ನಾಯಕ ಪವನ್ ಕುಮಾರ್ ಸೆಹ್ರಾವತ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಆಟಗಾರ ಅರ್ಜುನ್ ದೇಶ್ವಾಲ್ ಇಬ್ಬರೂ ಬಲಿಷ್ಠ ರೈಡರ್ ಗಳಾಗಿದ್ದಾರೆ.. ಎರಡು ತಂಡದಲ್ಲಿರುವ ಸ್ಟಾರ್ ರೈಡರ್ ಗಳು ಇವರಾಗಿದ್ದು ಸಂಪೂರ್ಣವಾಗಿ ಪಂದ್ಯದಲ್ಲಿ ಸೋಲು ಗೆಲುವು ಇವರನ್ನೇ ಅವಲಂಬಿಸಿದೆ.. ಪವನ್ ಕುಮಾರ್ ಎಂಟನೇ ಆವೃತ್ತಿಯ ಪ್ರೊ ಕಬ್ಬಡ್ಡಿಯಲ್ಲಿ ಹೆಚ್ಚು ರೈಡರ್ ಪಾಯಿಂಟ್ಸ್ ಗಳಿಸಿರುವ ಆಟಗಾರ ಕೂಡ ಆಗಿದ್ದಾರೆ..

  ಭರತ್ V/s ದೀಪಕ್ ನಿವಾಸ್ ಹೂಡಾ

  ಬೆಂಗಳೂರು ತಂಡದ ನಾಯಕ ಪವನ್ ಕುಮಾರ್ ಸೆಹ್ರಾವತ್ ಹೊರತುಪಡಿಸಿ ತಂಡಕ್ಕೆ ಆಸರೆಯಾದರು ಮತ್ತೊಬ್ಬ ಆಟಗಾರ ಭರತ್.. ಪೋಷಕರ ರೈಡರ್ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುತ್ತಾ ಬಂದಿರುವ ಭರತ್ ಸಂಕಷ್ಟದ ಸಮಯದಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಹಲವು ಬಾರಿ ಆಸರೆಯಾಗಿದ್ದಾರೆ.

  ಇನ್ನು ಭರತ್ ರಂತೆ ದೀಪಕ್ ನಿವಾಸ್ ಹೂಡಾ ಕೂಡ ಜೈಪುರ ಪಿಂಕ್ ಪ್ಯಾಂಥರ್ಸ್ನ ಬಲಿಷ್ಠ ರೈಡರ್ ಗಳಲ್ಲಿ ಒಬ್ಬರು.. ಉತ್ತಮ ಫಾರ್ಮ್ ನಲ್ಲಿರುವ ದೀಪಕ್ ಇಂದಿನಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಕಾಡಿದರೂ ಆಶ್ಚರ್ಯ ಇಲ್ಲ.

  ಇನ್ನು ಎರಡು ತಂಡಗಳು ಬಲಿಷ್ಠ ಆಟಗಾರರನ್ನ ಹೊಂದಿವೆ. ಆದರೆ ಇಲ್ಲಿಯವರೆಗೂ ನಡೆದಿರುವ ಪಂದ್ಯಗಳ ಸರಾಸರಿ ಗಮನಿಸಿದರೆ ಜೈಪುರ್ ಪಿಂಕ್ ಪ್ಯಾಂಥರ್ಸ್ ಮೇಲೆ ಬೆಂಗಳೂರು ಬುಲ್ಸ್ ಮೇಲುಗೈ ಸಾಧಿಸಿದೆ.. ಹೀಗಾಗಿ ಇಂದಿನ ಪಂದ್ಯದಲ್ಲಿ ಬೆಂಗಳೂರು ತಂಡ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

  ಇದನ್ನೂ ಓದಿ: KKR ಪರ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡ ಶಾರುಖ್, ಜೂಹಿ ಚಾವ್ಲಾ ಮಕ್ಕಳು

  8ನೇ ಆವೃತ್ತಿ ಕಬಡ್ಡಿ ಲೀಗ್​ ನಲ್ಲಿ ಬೆಂಗಳೂರು ಬುಲ್ಸ್ ತಂಡ ಇಲ್ಲಿಯವರೆಗೆ 19 ಪಂದ್ಯಗಳನ್ನಾಡಿದ್ದು, ಈ ಪೈಕಿ 9 ಪಂದ್ಯಗಳಲ್ಲಿ ಗೆಲುವು, 8 ಪಂದ್ಯಗಳಲ್ಲಿ ಸೋಲು ಹಾಗೂ ಎರಡು ಪಂದ್ಯಗಳಲ್ಲಿ ಡ್ರಾಗಳೊಂದಿಗೆ ಒಟ್ಟು 55 ಪಾಯಿಂಟ್​ ಗಳಿಕೆ ಮಾಡಿ ನಾಲ್ಕನೇ ಸ್ಥಾನದಲ್ಲಿದೆ
  Published by:ranjumbkgowda1 ranjumbkgowda1
  First published: