Pro Kabaddi League: ಹರಿಯಾಣ ಸ್ಟೀಲರ್ಸ್ ಗೆ ಗುದ್ದಿದ ಬೆಂಗಳೂರು ಬುಲ್ಸ್

Bengaluru Bulls Vs Haryana Steelers: ಪುಣೇರಿ ಪಲ್ಟನ್ಸ್​ ವಿರುದ್ಧ ಜೈಪುರ ಗೆದ್ದರೆ, ನಾಳೆ ಗುಜರಾತ್​ ಲೈಯನ್ಸ್​ ವಿರುದ್ಧ ತಮಿಳ್​ ತಲೈವಾಸ್​ ಅಥವಾ ಶನಿವಾರ ಪಾಟ್ನಾ ಪೈರೇಟ್ಸ್​ ತಂಡ ಹರಿಯಾಣ ಸ್ಟೀಲರ್ಸ್​ ವಿರುದ್ಧ ಗೆಲುವು ಸಾಧಿಸಿದರೆ ಬೆಂಗಳೂರು ಪ್ಲೇ ಆಫ್​ ಸ್ಥಾನ ಖಚಿತವಾಗಲಿದೆ.

ಬೆಂಗಳೂರು ಬುಲ್ಸ್, ಹರಿಯಾಣ ಸ್ಟೀಲರ್ಸ್

ಬೆಂಗಳೂರು ಬುಲ್ಸ್, ಹರಿಯಾಣ ಸ್ಟೀಲರ್ಸ್

  • Share this:
    ಪ್ರೊ ಕಬಡ್ಡಿ(Pro Kabaddi League) 8ರ ಸೆಮಿಫೈನಲ್ (Semi-final)ರೇಸ್ ಈಗಾಗಲೇ ಶುರುವಾಗಿದ್ದು ಪವನ್ ಶೆರಾವತ್ (Pawan Sehrawat) ನಾಯಕತ್ವದ ಬೆಂಗಳೂರು ಬುಲ್ಸ್(Bengaluru Bulls) ತಂಡ ಪ್ಲೇಆಫ್ ಗಾಗಿ (Plays off) ನಡೆದ ಕದನದಲ್ಲಿ ಹರಿಯಾಣ ಸ್ಟೀಲರ್ಸ್( Haryana Steelers) ವಿರುದ್ಧ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಶೆರ್ಟಾನ್‌ ಗ್ರ್ಯಾಂಡ್‌ ಹೋಟೆಲ್‌ ಆವರಣದಲ್ಲಿ ನಿರ್ಮಿಸಲಾಗಿರುವ ಬಯೋ ಬಬಲ್‌ ವಾತಾವರಣದ ಒಳಗೆ ನಡೆದ ಒಂದು 125ನೇ ಪಂದ್ಯದಲ್ಲಿ 46-24 ಅಂತರ ಗಳಿಂದ ಬೆಂಗಳೂರು ಬುಲ್ಸ್ ತಂಡದ ಗೆಲುವಿನ ನಗೆ ಬೀರಿದೆ. ಮೂಲಕ ಬೆಂಗಳೂರು ಬುಲ್ಸ್ ಪ್ಲೇ ಆಫ್ ತಲುಪುವ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ.

    ಆಲ್​ರೌಂಡರ್ ಆದ ಪವನ್​ ಶೆರಾವತ್

    ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ನಾಯಕ ಪವನ್​ ಶೆರಾವತ್​​ ಆಲ್​ರೌಂಡರ್​ ಆಗಿ ಕಣಕ್ಕಿಳಿದರು. ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶನ ತೋರಿದ ಅವರು 13 ರೈಡ್ ಮತ್ತು 7 ಟ್ಯಾಕಲ್​ ಅಂಕಗಳ ಸಹಿತ 20 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

    ಇವರಿಗೆ ಸಾಥ್​ ನೀಡಿದ ಭರತ್​ 5 ರೈಡ್​ ಮತ್ತು 3 ಟ್ಯಾಕಲ್ ಅಂಕ ಪಡೆದರು.ಇನ್ನು ಹರಿಯಾಣ ಪರ ವಿಕಾಸ್ 4, ಆಶಿಶ್ 4 ಪಾಯಿಂಟ್ಸ್‌ ಅಷ್ಟೇ ಕಲೆಹಾಕಿದ್ರು.

    ಇದನ್ನೂ ಓದಿ: 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರಿಕೆಟ್ ದಂತಕಥೆ ಎಬಿ ಡಿವಿಲಿಯರ್ಸ್

    ಪಂದ್ಯದ ಆರಂಭದಿಂದಲೂ ಬೆಂಗಳೂರು ಬುಲ್ಸ್ ಮೇಲುಗೈ
    ಇನ್ನು ಪಂದ್ಯದ ಮೊದಲಾರ್ಧದಲ್ಲಿ ಬುಲ್ಸ್ 20-14ರ ಲೀಡ್‌ ಪಡೆಯಿತು. ದ್ವಿತಿಯಾರ್ಧದಲ್ಲಿ ಮತ್ತೆ ಮೇಲುಗೈ ಸಾಧಿಸಿದ ಬೆಂಗಳೂರು ಟೀಂ 26 ಪಾಯಿಂಟ್ಸ್ ಗಳಿಸಿದರೆ, ಹರಿಯಾಣ ಸ್ಟೀಲರ್ಸ್ 10 ಪಾಯಿಂಟ್ಸ್ ಪಡೆಯಿತು. ಅಂತಿಮವಾಗಿ ಬೆಂಗಳೂರು ಬುಲ್ಸ್‌ 46-24 ಪಾಯಿಂಟ್ಸ್ ಅಂತರದಲ್ಲಿ ಗೆಲುವು ಸಾಧಿಸಿತು.

    ಲೀಗ್‌ನಲ್ಲಿ ಆಡಿದ 22 ಪಂದ್ಯಗಳಲ್ಲಿ ಒಟ್ಟು 11 ಜಯ, 9 ಸೋಲು ಮತ್ತು 3 ಟೈ ಫಲಿತಾಂಶಗಳೊಂದಿಗೆ ಒಟ್ಟಾರೆ 66 ಅಂಕಗಳನ್ನು ಕಲೆಹಾಕಿರುವ ಬೆಂಗಳೂರು ಬುಲ್ಸ್‌ ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಆದರೆ, ಪ್ಲೇ ಆಫ್ಸ್‌ ಸ್ಥಾನ ಮಾತ್ರ ಖಾತ್ರಿಯಾಗಿಲ್ಲ. ಅಂಕಪಟ್ಟಿಯಲ್ಲಿ ಅಗ್ರ 6 ಸ್ಥಾನ ಗಿಟ್ಟಿಸಿದ ತಂಡಗಳು ನಾಕ್‌ಔಟ್‌ ಹಂತಕ್ಕೆ ತೇರ್ಗಡೆ ಆಗಲಿವೆ..

    ಇನ್ನು ಇನ್ನುಳಿದ 5 ಸ್ಥಾನಗಳ ಸಲುವಾಗಿ ಯು.ಪಿ ಯೋಧಾ (68 ಅಂಕ), ದಬಾಂಗ್‌ ಡೆಲ್ಲಿ (65 ಅಂಕ), ಹರಿಯಾಣ ಸ್ಟೀಲರ್ಸ್‌ (63 ಅಂಕ), ಜೈಪುರ ಪಿಂಕ್‌ಪ್ಯಾಂಥರ್ಸ್‌ (62 ಅಂಕ), ಪುಣೇರಿ ಪಲ್ಟನ್ಸ್‌ (60 ಅಂಕ) ಮತ್ತು ಗುಜರಾತ್‌ ಜಯಂಟ್ಸ್‌ (57 ಅಂಕ) ತಂಡಗಳ ನಡುವೆ ಭಾರಿ ಪೈಪೋಟಿ ಇದೆ.

    ಹೀಗಾಗಿ ನಾಳಿನ ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್​ ವಿರುದ್ಧ ಜೈಪುರ ಗೆದ್ದರೆ, ನಾಳೆ ಗುಜರಾತ್​ ಲೈಯನ್ಸ್​ ವಿರುದ್ಧ ತಮಿಳ್​ ತಲೈವಾಸ್​ ಅಥವಾ ಶನಿವಾರ ಪಾಟ್ನಾ ಪೈರೇಟ್ಸ್​ ತಂಡ ಹರಿಯಾಣ ಸ್ಟೀಲರ್ಸ್​ ವಿರುದ್ಧ ಗೆಲುವು ಸಾಧಿಸಿದರೆ ಬೆಂಗಳೂರು ಪ್ಲೇ ಆಫ್​ ಸ್ಥಾನ ಖಚಿತವಾಗಲಿದೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಶುರುವಾಗುವ ಹೊಸಾ ಕ್ರಿಕೆಟ್ ಅಕಾಡೆಮಿಯಲ್ಲಿ ಏನೇನು ಇರಲಿದೆ? ಅಲ್ಲಿಗೆ ಪ್ರವೇಶ ಹೇಗೆ?

    ಯುಪಿ ಯೋಧಾ, ದಬಾಂಗ್ ಡೆಲ್ಲಿಗೆ ಗೆಲುವು

    .ಮೊದಲ ಪಂದ್ಯದ ಮೊದಲಾರ್ಧದಲ್ಲಿ ಯುಪಿ ಯೋಧಾ 18 ಪಾಯಿಂಟ್ಸ್ ಕಲೆಹಾಕಿದ್ರೆ, ಯು ಮುಂಬಾ ಕೇವಲ 12 ಪಾಯಿಂಟ್ಸ್‌ ಕಲೆಹಾಕಿ ಹಿನ್ನಡೆ ಕಂಡಿತು. ಎರಡನೇ ಹಂತದಲ್ಲಿ ಯುಪಿ ಯೋಧಾ ಆರ್ಭಟ ಮುಂದುವರಿದು 17 ಪಾಯಿಂಟ್ಸ್ ತನ್ನದಾಗಿಸಿಕೊಂಡಿತು. ಆದ್ರೆ ಯು ಮುಂಬಾ ಹೋರಾಟ ಪ್ರದರ್ಶಿಸಿದ್ರು ಸಹ 16 ಪಾಯಿಂಟ್ಸ್ ಮೂಲಕ ಹಿನ್ನಡೆ ಕಂಡಿತು.

    ಯುಪಿ ಯೋಧಾ ತಂಡವು ಯು ಮುಂಬಾ ವಿರುದ್ಧ 35-28 ಪಾಯಿಂಟ್ಸ್‌ ಅಂತರದಲ್ಲಿ ಗೆಲುವು ಸಾಧಿಸಿತು. ಇನ್ನು ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ದಬಾಂಗ್ ಡೆಲ್ಲಿ, ಪಾಯಿಂಟ್ಸ್ ಟೇಬಲ್‌ನ ಅಗ್ರ ತಂಡ ಪಾಟ್ನಾ ಪೈರೇಟ್‌ ವಿರುದ್ಧ ಮೇಲುಗೈ ಸಾಧಿಸಿತು. 26-23 ಪಾಯಿಂಟ್ಸ್ ಅಂತರದಲ್ಲಿ ಡೆಲ್ಲಿ ಮಿಂಚಿನ ಆಟವಾಡಿತು.
    Published by:ranjumbkgowda1 ranjumbkgowda1
    First published: