ಪ್ರೋ ಕಬಡ್ಡಿ: ಬೆಂಗಳೂರಿಗೆ 11ನೇ ಜಯ: ಪ್ಲೇ ಆಫ್​​ನತ್ತ ಬುಲ್ಸ್​ ತಂಡ

Vinay Bhat | news18
Updated:December 13, 2018, 2:13 PM IST
ಪ್ರೋ ಕಬಡ್ಡಿ: ಬೆಂಗಳೂರಿಗೆ 11ನೇ ಜಯ: ಪ್ಲೇ ಆಫ್​​ನತ್ತ ಬುಲ್ಸ್​ ತಂಡ
ಬೆಂಗಳೂರು ಬುಲ್ಸ್​ ತಂಡ
  • News18
  • Last Updated: December 13, 2018, 2:13 PM IST
  • Share this:
ವಿಶಾಖಪಟ್ಟಣ: ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪ್ರೋ ಕಬಡ್ಡಿ ಲೀಗ್​​ನ 11ನೇ ಆವೃತ್ತಿಯ ತೆಲುಗು ಟೈಟಾನ್ಸ್​​ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ ತಂಡ ಭರ್ಜರಿ ಗೆಲುವು ದಾಖಲಿಸಿದೆ. 37-24 ಅಂಕಗಳ ಅಂತರದಿಂದ ಗೆದ್ದು ಬೀಗಿದ ಬುಲ್ಸ್​ 11ನೇ ಜಯದೊಂದಿಗೆ, ಬಿ ಗುಂಪಿನಿಂದ ಪ್ಲೇ ಆಫ್​ ಹಂತಕ್ಕೇರುವುದು ಬಹುತೇಕ ಖಚಿವಾಗಿದೆ.

ಬಲಿಷ್ಠ ತೆಲುಗು ಟೈಟಾನ್ಸ್​ ವಿರುದ್ಧ ಚುರುಕಿನ ಆಟ ಪ್ರದರ್ಶಿಸಿದ ರೋಹಿತ್ ಕುಮಾರ್ ಬಳಗ ಆರಂಭದಲ್ಲಿ ಹಿನ್ನಡೆ ಅನುಭವಿಸಿತಾದರು ಬಳಿಕ ಭರ್ಜರಿ ಕಮ್​​ಬ್ಯಾಕ್ ಮಾಡಿತು. ಪಂದ್ಯ ಆರಂಭವಾದ 3ನೇ ನಿಮಿಷದಲ್ಲಿ ಬುಲ್ಸ್ ಪರ ರೈಡಿಂಗ್​​​ಗೆ ತೆರಳಿದ ಹರೀಶ್ ನಾಯ್ಕ್ ಬೋನಸ್​ ಮೂಲಕ ತಂಡದ ಖಾತೆ ತೆರೆದರು. ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್​ 10-12 ಅಂತರದ ಹಿನ್ನಡೆಯಲ್ಲಿತ್ತು. ಬಳಿಕ ದ್ವಿತೀಯಾರ್ಧದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಬೆಂಗಳೂರು ತಂಡ ಅತ್ಯುತ್ತಮ ರೈಡಿಂಗ್ ಹಾಗೂ ಬೋನಸ್​ನೊಂದಿಗೆ ಉತ್ತಮ ಅಂಕ ಕಲೆಹಾಕಿತು.

ಇದನ್ನೂ ಓದಿ: ಆಸೀಸ್ ವಿರುದ್ಧ 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ರಕಟ: ರೋಹಿತ್-ಅಶ್ವಿನ್ ಅಲಭ್ಯ

ಸ್ಟಾರ್ ರೈಡರ್ ಪವನ್ ಶೇರಾವತ್ 13 ಅಂಕ ತಮ್ಮದಾಗಿಸಿದರು. ಈ ಮೂಲಕ ಬೆಂಗಳೂರು ತಂಡ 37-24 ಅಂತರದ ಭರ್ಜರಿ ಜಯ ಸಾಧಿಸಿದರೆ, ಟೈಟಾನ್ಸ್​ ತಂಡ ತವರಿನಲ್ಲೇ ಸತತ ಎರಡನೇ ಸೋಲು ಅನುಭವಿಸಿತು. ಸದ್ಯ ಆಡಿರುವ 18 ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್​ ತಂಡ 64 ಅಂಕದೊಂದಿಗೆ ಬಿ ಗುಂಪಿನಲ್ಲಿ ಅಗ್ರಸ್ಥಾನ ತನ್ನದಾಗಿಸಿದೆ.

First published: December 13, 2018, 12:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading