ಬೆಂಗಳೂರು, ಜ. 9: ಪ್ರೋಕಬಡ್ಡಿ ಲೀಗ್ನ ಅತ್ಯಂತ ಯಶಸ್ವಿ ಆಟಗಾರರಲ್ಲಿ ಬೆಂಗಳೂರು ಬುಲ್ಸ್ ಕ್ಯಾಪ್ಟನ್ ಪವನ್ ಶೆರಾವತ್. ಯುಪಿ ಯೋದ್ಧಾ ವಿರುದ್ಧದ ಪಂದ್ಯದಲ್ಲಿ ಪವನ್ ಆಟ ನಡೆಯಲಿಲ್ಲ. ನಿನ್ನೆ ದಬಂಗ್ ಡೆಲ್ಲಿ ತಂಡದ ಎಕ್ಸ್ಪ್ರೆಸ್ ಆಟಗಾರ ನವೀನ್ ಕುಮಾರ್ ಅವರ ಆಟ ಹೆಚ್ಚು ಸಾಗದ ರೀತಿಯಲ್ಲಿ ಡಿಫೆನ್ಸ್ ಕೋಟೆ ರಚಿಸಿದ್ದ ಯುಪಿ ಯೋದ್ಧಾ ಮುಂದೆ ಇಂದು ಪವನ್ ಆಟವೂ ಸಾಗಲಿಲ್ಲ. 17 ಬಾರಿ ರೇಡ್ ಮಾಡಿದ ಪವನ್ ಗಳಿಸಿದ್ದು ಕೇವಲ 5 ಅಂಕ. ಬರೋಬ್ಬರಿ ಎಂಟು ಬಾರಿ ಸಿಕ್ಕಿಬಿದ್ದರು. ಈ ಪಂದ್ಯದಲ್ಲಿ ಯುಪಿ ಯೋದ್ಧಾ ತಂಡ 42-27 ಅಂಕಗಳಿಂದ ಬೆಂಗಳೂರು ಬುಲ್ಸ್ ತಂಡವನ್ನು ಮಣಿಸಿತು.
ಇಂದು ಬೆಂಗಳೂರಿನ ಮಾನ ಉಳಿಸಿದ್ದು ರೇಡರ್ ಭರತ್. 14 ರೇಡ್ನಿಂದ ಅವರು 11 ಅಂಕಗಳನ್ನ ಗಳಿಸಿದ್ದರಿಂದ ಬೆಂಗಳೂರು ಬುಲ್ಸ್ 27 ಅಂಕ ತಲುಪಲು ಸಾಧ್ಯವಾಯಿತು.
ಇನ್ನು, ಯು ಪಿ ಯೋದ್ಧಾ ತಂಡದ ಪರ ರೇಡರ್ ಶ್ರೀಕಾಂತ್ ಜಾಧವ್ ಸ್ಟಾರ್ ಎನಿಸಿದರು. 25 ರೇಡ್ ಮಾಡಿದ ಅವರು 15 ಅಂಕಗಳನ್ನ ಗಳಿಸಿ ಯೋದ್ಧಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ, ಯೋದ್ಧಾಗೆ ಕೈಹಿಡಿದದ್ದು ಅದರ ಡಿಫೆನ್ಸ್.
ಯು ಪಿ ಯೋದ್ಧಾಗೆ ಇದು ಈ ಸೀಸನ್ನಲ್ಲಿ ದೊರೆತ ಎರಡನೇ ಗೆಲುವಾಗಿದೆ. ಇದರರೊಂದಿಗೆ ಅದು ಒಟ್ಟು 20 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಏರಿತು. ಬೆಂಗಳೂರು ಬುಲ್ಸ್ ಈ ಪಂದ್ಯ ಸೋತರೂ 3ನೇ ಸ್ಥಾನದಲ್ಲಿ ಮುಂದುವರಿದಿದೆ.
ಇದನ್ನೂ ಓದಿ: PKL 8: ಅರ್ಜುನ್ ದೇಶವಾಲ್ ಮತ್ತೊಂದು ಸೂಪರ್-10; ಜೈಪುರ್, ಹರ್ಯಾಣ ತಂಡಗಳಿಗೆ ಗೆಲುವು
ಪುಣೇರಿ ಪಲ್ಟಾನ್ vs ಬೆಂಗಾಲ್ ವಾರಿಯರ್ಸ್:
ಇಂದು ನಡೆದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಪುಣೇರಿ ಪಲ್ಟನ್ 39-27 ಅಂಕಗಳಿಂದ ಗೆಲುವು ಪಡೆಯಿತು. ಇಡೀ ಟೂರ್ನಿಯಲ್ಲಿ ಡಿಫೆನ್ಸ್ನಲ್ಲಿ ಬಲಿಷ್ಠವಾಗಿದ್ದ ಪುಣೇರಿ ಪಲ್ಟಾನ್ ಇಂದು ರೇಡಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡಿತು. ಅಸ್ಲಮ್ ಇನಾಮ್ದಾರ್ 23 ರೇಡ್ ಮಾಡಿ 13 ಅಂಕ ಗಳಿಸಿದರು. ಅಷ್ಟೂ ರೇಡ್ನಲ್ಲಿ ಅವರು ಒಮ್ಮೆಯೂ ಎದುರಾಳಿಗೆ ಸಿಕ್ಕಿಬೀಳಲಿಲ್ಲ.
ಇನ್ನು, ಬೆಂಗಾಲ್ ವಾರಿಯರ್ಸ್ ತಂಡದ ನಾಯಕ ಮಣಿಂದರ್ ಸಿಂಗ್ 13 ಅಂಕ ಗಳಿಸಿದರಾದರೂ ಪುಣೇರಿ ಪಲ್ಟಾನ್ ಪಡೆಯನ್ನು ಸೋಲಿಸಲು ವಾರಿಯರ್ಸ್ಗೆ ಸಾಧ್ಯವಾಗಲಿಲ್ಲ. ಇರಾನಿ ಆಟಗಾರ ಮೊಹಮ್ಮದ್ ನಬಿಬಕ್ಷ್ ಅವರ ಆಟವೂ ನಡೆಯಲಿಲ್ಲ. 10 ರೇಡ್ ಮಾಡಿದ ನಬಿಬಕ್ಷ್ ಕೇವಲ 4 ಅಂಕ ಗಳಿಸಿದರು.
ನಾಳೆಯ ಪಂದ್ಯಗಳು:
1) ತಮಿಳ್ ತಲೈವಾಸ್ vs ಹರ್ಯಾಣ ಸ್ಟೀಲರ್ಸ್, ಸಮಯ ಸಂಜೆ 7:30ಕ್ಕೆ
2) ಜೈಪುರ್ ಪಿಂಕ್ ಪ್ಯಾಂಥರ್ಸ್ vs ದಬಂಗ್ ಡೆಲ್ಲಿ, ಸಮಯ ರಾತ್ರಿ 8:30ಕ್ಕೆ
ಇದನ್ನೂ ಓದಿ: PKL 8: ಯೋದ್ಧಾಗೆ ಸೋಲುಣಿಸಿದ ತಲೈವಾಸ್; ಅಂಕ ಹಂಚಿಕೊಂಡ ಸ್ಟೀಲರ್ಸ್, ಮುಂಬಾ
ಅಂಕಪಟ್ಟಿ:
1) ದಬಂಗ್ ಡೆಲ್ಲಿ: 31 ಅಂಕ
2) ಪಟ್ನಾ ಪೈರೇಟ್ಸ್: 29 ಅಂಕ
3) ಬೆಂಗಳೂರು ಬುಲ್ಸ್: 28 ಅಂಕ
4) ಯು ಮುಂಬಾ: 25 ಅಂಕ
5) ತಮಿಳ್ ತಲೈವಾಸ್: 22 ಅಂಕ
6) ಯು ಪಿ ಯೋದ್ಧಾ: 20 ಅಂಕ
7) ಯರ್ಯಾಣ ಸ್ಟೀಲರ್ಸ್: 20 ಅಂಕ
8) ಜೈಪುರ್ ಪಿಂಕ್ ಪ್ಯಾಂಥರ್ಸ್: 18 ಅಂಕ
9) ಬೆಂಗಾಲ್ ವಾರಿಯರ್ಸ್: 17 ಅಂಕ
10) ಪುಣೇರಿ ಪಲ್ಟಾನ್: 16 ಅಂಕ
11) ಗುಜರಾತ್ ಜೈಂಟ್ಸ್: 15 ಅಂಕ
12) ತೆಲುಗು ಟೈಟಾನ್ಸ್: 10 ಅಂಕ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ