PKL 8- ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಬೆಂಗಳೂರು ಬುಲ್ಸ್; ಇಲ್ಲಿದೆ ಅದರ ಬಲಾಬಲ

Pro Kabaddi League 2021- ಆರನೇ ಸೀಸನ್​ನಲ್ಲಿ ಚಾಂಪಿಯನ್ ಆಗಿದ್ದ ಬೆಂಗಳೂರು ಬುಲ್ಸ್ ಇದೀಗ ಎಂಟನೇ ಸೀಸನ್​ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಹಿಂದಿನ ಸೀಸನ್​ಗೆ ಹೋಲಿಸಿದರೆ ಬುಲ್ಸ್ ಹೆಚ್ಚು ಬಲಿಷ್ಠವಾಗಿದೆ.

ಬೆಂಗಳೂರು ಬುಲ್ಸ್

ಬೆಂಗಳೂರು ಬುಲ್ಸ್

  • News18
  • Last Updated :
  • Share this:
    ಬೆಂಗಳೂರು: ಇದೇ ಡಿಸೆಂಬರ್ 22ರಿಂದ ಪ್ರೋಕಬಡ್ಡಿ ಲೀಗ್ ಟೂರ್ನಿ ನಡೆಯಲಿದೆ. ಒಟ್ಟು 12 ತಂಡಗಳು ಸ್ಪರ್ಧಿಸುತ್ತಿವೆ. ಈ ವರ್ಷ ಇದು ಎಂಟನೇ ಸೀಸನ್​ನ ಪಿಕೆಎಲ್ ಆಗಿದೆ. ಒಮ್ಮೆ ಚಾಂಪಿಯನ್ ಆಗಿರುವ ಬೆಂಗಳೂರು ಬುಲ್ಸ್ ಈ ಬಾರಿ ಟೂರ್ನಿ ಗೆಲ್ಲುವ ನೆಚ್ಚಿನ ತಂಡಗಳಲ್ಲೊಂದೆನಿಸಿದೆ. ಬುಲ್ಸ್ ಫೇವರಿಟ್ ಎನಿಸಲು ಕಾರಣಗಳು ಇಲ್ಲದಿಲ್ಲ. ಬೆಂಗಳೂರು ಬುಲ್ಸ್ ತಂಡದ ಬಲ ಏನು ಎಂಬ ವಿವರ ಇಲ್ಲಿದೆ…

    ಪವನ್ ಕುಮಾರ್ ಸೆಹ್ರಾವತ್:

    ಪಿಕೆಎಲ್ ಸೀಸನ್ 3ಯಲ್ಲಿ ಪವನ್ ಕುಮಾರ್ ಸೆಹ್ರಾವತ್ ಬೆಂಗಳೂರು ಬುಲ್ಸ್ ತಂಡಕ್ಕೆ ಆಗಮಿಸಿದರು. ರೋಹಿತ್ ಕುಮಾರ್ ನೆರಳಿನಲ್ಲಿ ಬೆಳೆದ 25 ವರ್ಷದ ಪವನ್ ಈಗ್ಗೆ ಮೂರು ವರ್ಷಗಳಿಂದ ಬೆಂಗಳೂರು ಬುಲ್ಸ್ ತಂಡದ ಸ್ಟಾರ್ ಆಟಗಾರ ಎನಿಸಿದ್ದಾರೆ. ರೋಹಿತ್ ಕುಮಾರ್ ಅನುಪಸ್ಥಿತಿಯಲ್ಲಿ ಬೆಂಗಳೂರು ತಂಡಕ್ಕೆ ಅಗಾಧ ಶಕ್ತಿ ಒದಗಿಸಿದ್ಧಾರೆ. ದೇಶದ ಅತ್ಯುತ್ತಮ ರೇಡರ್​ಗಳ ಪೈಕಿ ಒಬ್ಬರೆನಿಸಿದ್ದಾರೆ. ಬೆಂಗಳೂರು ತಂಡಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಹೊಂದಿದ್ಧಾರೆ.

    ಹೈ ಫ್ಲಯರ್ ಎಂದು ಕರೆಯಲಾಗುವ ಪವನ್ ಕುಮಾರ್ ಅವರು ರೇಡಿಂಗ್ ಮಾಡುವಾಗ ಡಿಫೆಂಡರ್​ಗಳಿಂದ ಜಿಗಿದು ತಪ್ಪಿಸಿಕೊಳ್ಳುವಲ್ಲಿ ನಿಷ್ಣಾತರು. ಹಾಗೆಯೇ, ರನ್ನಿಂಗ್ ಹ್ಯಾಂಡ್ ಟಚ್ ಮಾಡಿ ಪಾಯಿಂಟ್​ಗಳನ್ನ ಸುಲಭವಾಗಿ ಗಿಟ್ಟಿಸಬಲ್ಲರು. ಕಳೆದ ಸೀಸನ್​ನಲ್ಲಿ ಅವರು 350 ರೇಡಿಂಗ್ ಪಾಯಿಂಟ್ಸ್ ಕಲೆಹಾಕಿದ್ದಾರೆ. ಎರಡು ಸೀಸನ್​ನಲ್ಲಿ ಟೂರ್ನಿಯ ಅತ್ಯಧಿಕ ರೇಡ್ ಪಾಯಿಂಟ್ಸ್ ಗಳಿಸಿದ ದಾಖಲೆ ಅವರದ್ದಾಗಿದೆ.

    ಇದನ್ನೂ ಓದಿ: Pavan Sehrawat- ಬೆಂಗಳೂರು ಬುಲ್ಸ್​ನ ಪವನ್ ರೇಡ್​ಗೆ ಬಂದರೆ ಬೆಚ್ಚುತ್ತಾರೆ ಡಿಫೆಂಡರ್ಸ್; ಇದಕ್ಕೆ ದಾಖಲೆಗಳೇ ಸಾಕ್ಷಿ

    ಪ್ರಬಲ ರೇಡಿಂಗ್ ವಿಭಾಗ:

    ಪವನ್ ಕುಮಾರ್ ಸೆಹ್ರಾವತ್ ಅವರು ಬೆಂಗಳೂರು ಬುಲ್ಸ್ ತಂಡದ ಸ್ಟಾರ್ ರೇಡರ್. ಹಿಂದಿನ ಕೆಲ ಸೀಸನ್​ಗಳಲ್ಲಿ ಬೆಂಗಳೂರು ತಂಡದ ರೇಡಿಂಗ್ ಬಹುತೇಕ ಪವನ್ ಮೇಲೆಯೇ ಅವಲಂಬಿತವಾಗಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಹರಾಜಿನಲ್ಲಿ ಬುಲ್ಸ್ ತಂಡ ಕೆಲ ಉತ್ತಮ ರೇಡರ್​​ಗಳನ್ನ ಖರೀದಿ ಮಾಡಿದೆ. ಚಂದ್ರನ್ ರಂಜಿತ್, ಡೋಂಗ್ ಗಿಯೋನ್ ಲೀ, ಅಬುಲ್​ಫಜಲ್ ಮಗ್​ಸೂದ್​ಲೂ ಮಹಾಲಿ, ಜಿ ಬಿ ಮೋರೆ ಅವರ ಸೇರ್ಪಡೆಯೊಂದಿಗೆ ಬೆಂಗಳೂರು ಬುಲ್ಸ್ ತಂಡದ ರೇಡಿಂಗ್ ವಿಭಾಗ ಬಹಳ ಬಲಿಷ್ಠವಾಗಿದೆ.

    ಚಂದ್ರನ್ ರಂಜಿತ್ ಮತ್ತು ದೀಪಕ್ ನರ್ವಾಲ್ ಅವರು 320ಕ್ಕೂ ಹೆಚ್ಚು ರೇಡಿಂಗ್ ಪಾಯಿಂಟ್ಸ್ ಗಳಿಸಿದ್ದಾರೆ. ಹಲವು ಸೂಪರ್ 10 ಅಂಕಗಳನ್ನ ಗಿಟ್ಟಿಸಿದ್ದಾರೆ. ದಕ್ಷಿಣ ಕೊರಿಯಾದ ಡೋಂಗ್ ಗಿಯೋನ್ ಲೀ ಮತ್ತು ಇರಾನ್ ದೇಶದ ಅಬುಲ್​ಫಜಲ್ ಅವರು ಪ್ರತಿಭಾನ್ವಿತ ಕಬಡ್ಡಿ ರೇಡರ್ಸ್ ಎನಿಸಿದ್ದಾರೆ. ಜಿಬಿ ಮೋರೆ ಕಳೆದ ಸೀಸನ್​ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು.

    ಹೀಗಾಗಿ, ಒಂದು ವೇಳೆ ಪವನ್ ಕುಮಾರ್ ಮಂಕಾದರೂ ಉಳಿದ ರೇಡರ್​ಗಳು ಭರ್ಜರಿಯಾಗಿ ಪಾಯಿಂಟ್ಸ್ ಕಲೆಹಾಕಬಲ್ಲವರಾಗಿದ್ಧಾರೆ. ಹೀಗಾಗಿ, ಬೆಂಗಳೂರು ಬುಲ್ಸ್ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಒಂದೆನಿಸಿದೆ.

    ಇದನ್ನೂ ಓದಿ: Bengaluru Bulls: ಬೆಂಗಳೂರು ಬುಲ್ಸ್ ತಂಡದ ಸ್ಟಾರ್ ಕಬಡ್ಡಿ ಆಟಗಾರರು ಮತ್ತು ಅವರ ಬೆಲೆ

    ಅನುಭವಿ ಡಿಫೆಂಡರ್ಸ್:

    ಕಳೆದ ಸೀಸನ್​ನಲ್ಲಿ ಬೆಂಗಳೂರು ಬುಲ್ಸ್ ಫೈನಲ್ ತಲುಪಲು ವಿಫಲವಾಗಿತ್ತು. ಅದಕ್ಕೆ ಪ್ರಮುಖ ಕಾರಣವಾಗಿದ್ದು ಅದರ ಡಿಫೆನ್ಸ್ ದೌರ್ಬಲ್ಯ. ಮಹೇಂದ್ರ ಸಿಂಗ್, ಅಮಿತ್ ಶೆವೋರನ್ ಮತ್ತು ಸೌರಭ್ ನಂದಾಲ್ ಅವರು 50ಕ್ಕೂ ಹೆಚ್ಚು ಟ್ಯಾಕಲ್ ಪಾಯಿಂಟ್ಸ್ ಪಡೆದರೂ ಎದುರಾಳಿ ರೇಡರ್​ಗಳಿಗೆ ಅತಿ ಹೆಚ್ಚು ಅಂಕ ಬಿಟ್ಟುಕೊಡಲಾಗಿತ್ತು. ಇದು ರಕ್ಷಣಾ ಆಟಗಾರರ ದೌರ್ಬಲ್ಯವೇ ಆಗಿತ್ತು.

    ಈ ಸೀಸನ್​ನಲ್ಲಿ ಬುಲ್ಸ್ ಮತ್ತಷ್ಟು ಡಿಫೆಂಡರ್ ಆಟಗಾರರನ್ನ ಹರಾಜಿನಲ್ಲಿ ಖರೀದಿ ಮಾಡಿದೆ. ಮಯೂರ್ ಕದಂ, ವಿಕಾಸ್, ಅಂಕಿತ್, ಜಿಯಾವುರ್ ರಹಮಾನ್ ಅವರು ಬುಲ್ಸ್ ತಂಡ ಸೇರ್ಪಡೆಗೊಂಡಿದ್ದಾರೆ. ಮಹೇಂದ್ರ ಸಿಂಗ್, ಅಮಿತ್ ಶೆವೋರನ್, ಸೌರಬ್ ನಂದಾಲ್ ಜೊತೆಗೆ ಈ ಹೊಸಬರು ಬುಲ್ಸ್ ತಂಡಕ್ಕೆ ರಕ್ಷಣಾ ಕೋಟೆಯಾಗಿ ನಿಲ್ಲಲಿದ್ದಾರೆ.

    ಬುಲ್ಸ್ ತಂಡದ ಡಿಫೆಂಡರ್​ಗಳು ಅಸಾಮಾನ್ಯ ಆಟಗಾರರಲ್ಲದಿದ್ದರೂ ತಕ್ಕಮಟ್ಟಿಗೆ ಎದುರಾಳಿ ರೇಡರ್​ಗಳ ಟ್ಯಾಕಲ್ ಮಾಡಬಲ್ಲವರಾಗಿದ್ದಾರೆ.
    Published by:Vijayasarthy SN
    First published: