ಕಬಡ್ಡಿ: ಗೆಲುವು ಮತ್ತು ಅಗ್ರಸ್ಥಾನದೊಂದಿಗೆ ಲೀಗ್ ಹಂತ ಮುಗಿಸಿದ ಬೆಂಗಳೂರು ಬುಲ್ಸ್

ಡಿಸೆಂಬರ್ 31ರಂದು ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ಕ್ವಾಲಿಫಯರ್ ನಡೆಯಲಿದ್ದು, ಅಂದು ಗೆದ್ದವರು ನೇರ ಫೈನಲ್ ಪ್ರವೇಶಿಸಲಿದ್ದಾರೆ.

Vijayasarthy SN | news18
Updated:December 27, 2018, 10:19 PM IST
ಕಬಡ್ಡಿ: ಗೆಲುವು ಮತ್ತು ಅಗ್ರಸ್ಥಾನದೊಂದಿಗೆ ಲೀಗ್ ಹಂತ ಮುಗಿಸಿದ ಬೆಂಗಳೂರು ಬುಲ್ಸ್
ಬೆಂಗಳೂರು ಬುಲ್ಸ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯದ ಒಂದು ದೃಶ್ಯ
  • News18
  • Last Updated: December 27, 2018, 10:19 PM IST
  • Share this:
ಕೋಲ್ಕತಾ(ಡಿ. 27): ಪ್ರೋಕಬಡ್ಡಿ ಲೀಗ್​ನಲ್ಲಿ ಬೆಂಗಳೂರು ಬುಲ್ಸ್ ತಂಡ ಗೆಲುವಿನೊಂದಿಗೆ ಲೀಗ್ ವ್ಯವಹಾರ ಮುಗಿಸಿ ಪ್ಲೇ ಆಫ್ ಹಂತ ಪ್ರವೇಶಿಸಿದೆ. ಇಂದು ನಡೆದ ಇಂಟರ್ ಝೋನ್ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಬೆಂಗಳೂರಿಗರು 40-32 ಅಂಕಗಳಿಂದ ಸೋಲಿಸಿದರು. ಪವನ್ ಸೆಹ್ರಾವತ್ ಅವರು ರೇಡಿಂಗ್​ನಲ್ಲಿ 16 ಪಾಯಿಂಟ್ ಪಡೆದು ಬುಲ್ಸ್ ಗೆಲುವಿನ ರೂವಾರಿಯಾದರು. ಜೈಪುರದ ದೀಪಕ್ ನಿವಾಸ್ ಹೂಡಾ ಕೂಡ ಉತ್ತಮ ರೇಡಿಂಗ್ ಮಾಡಿದರಾದರೂ ತಮ್ಮ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ.

ಬೆಂಗಳೂರು ಬುಲ್ಸ್ ಈ ಗೆಲುವಿನೊಂದಿಗೆ ಒಟ್ಟು 22 ಪಂದ್ಯಗಳಿಂದ 78 ಅಂಕ ಕಲೆ ಹಾಕಿ ಬಿ ಝೋನ್​ನಲ್ಲಿ ಅಗ್ರಸ್ಥಾನ ಪಡೆಯಿತು. ಇದೇ ವಲಯದಲ್ಲಿ ಬೆಂಗಾಳ್ ವಾರಿಯರ್ಸ್ ಮತ್ತು ಯುಪಿ ಯೋದ್ಧಾ ತಂಡಗಳೂ ಕೂಡ ಮುಂದಿನ ಹಂತಕ್ಕೆ ಪ್ರವೇಶ ಗಿಟ್ಟಿಸಿದೆ.

ಇನ್ನು, ಎ ಝೋನ್​ನಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್, ಯು ಮುಂಬಾ ಮತ್ತು ದಬಾಂಗ್ ಡೆಲ್ಲಿ ಈ 3 ತಂಡಗಳು ಪ್ಲೇ ಆಫ್​ಗೆ ತೇರ್ಗಡೆಯಾಗಿವೆ.

ಡಿ. 31ರಂದು ಎರಡೂ ವಲಯದ ಟಾಪ್ಪರ್​ಗಳ ನಡುವೆ, ಅಂದರೆ ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳ ನಡುವೆ ಮೊದಲ ಕ್ವಾಲಿಫಯರ್ ಪಂದ್ಯ ನಡೆಯಲಿದೆ. ಇದಕ್ಕೆ ಒಂದು ದಿನ ಮುನ್ನ ಪ್ಲೇ ಆಫ್ ಪ್ರವೇಶಿಸಿದ ಇನ್ನುಳಿದ 4 ತಂಡಗಳ ನಡುವೆ 3 ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ.

ಹಿಂದಿನ ಕೆಲ ಸೀಸನ್​ಗಳಲ್ಲಿ ಅಷ್ಟೇನೂ ಆಶಾದಾಯ ಪ್ರದರ್ಶನ ನೀಡಲು ವಿಫಲವಾಗಿದ್ದ ಬೆಂಗಳೂರು ಬುಲ್ಸ್ ಈ ವರ್ಷ ಭರ್ಜರಿ ಆಟ ಆಡಿ 13 ಪಂದ್ಯಗಳನ್ನ ಗೆದ್ದಿದೆ. 7 ಪಂದ್ಯಗಳನ್ನ ಸೋತಿತಾದರೂ ಅವೆಲ್ಲವೂ ಕಡಿಮೆ ಅಂತರದ ವೀರೋಚಿತ ಸೋಲಾಗಿವೆ. ಅತ್ತ, ಗುಜರಾತ್ ಫಾರ್ಚೂನ್ ಜೈಂಟ್ಸ್ ಮತ್ತು ಯು ಮುಂಬಾ ತಂಡಗಳು ಇನ್ನೂ ಭರ್ಜರಿ ಪ್ರದರ್ಶನ ನೀಡಿದ್ದು, ಕೇವಲ 3 ಮತ್ತು 5 ಪಂದ್ಯಗಳಲ್ಲಿ ಮಾತ್ರ ಸೋತಿವೆ.

ಅಂತಿಮ ಲೀಗ್ ಅಂಕಪಟ್ಟಿ:

ಝೋನ್ ಎ:1) ಗುಜರಾತ್ ಜೈಂಟ್ಸ್: 93 ಪಾಯಿಂಟ್
2) ಯು ಮುಂಬಾ: 86 ಪಾಯಿಂಟ್
3) ದಬಾಂಗ್ ಡೆಲ್ಲಿ: 68
4) ಪುನೇರಿ ಪಲ್ಟಾನ್: 52
5) ಜೈಪುರ್ ಪಿಂಕ್ ಪ್ಯಾಂಥರ್ಸ್: 43
6) ಹರ್ಯಾಣ ಸ್ಟೀಲರ್ಸ್: 42

ಝೋನ್ ಬಿ:
1) ಬೆಂಗಳೂರು ಬುಲ್ಸ್: 78
2) ಬೆಂಗಾಳ್ ವಾರಿಯರ್ಸ್: 69
3) ಯುಪಿ ಯೋದ್ಧಾ: 56
4) ಪಾಟ್ನಾ ಪೈರೇಟ್ಸ್: 55
5) ತೆಲುಗು ಟೈಟಾನ್ಸ್: 51
6) ತಮಿಳ್ ತಲೈವಾಸ್: 42

ಪ್ಲೇ ಆಫ್ ವೇಳಾಪಟ್ಟಿ:
ಡಿ. 30:
ಎಲಿಮಿನೇಟರ್ 1 – ಯು ಮುಂಬಾ ವರ್ಸಸ್ ಯುಪಿ ಯೋದ್ಧಾ
ಎಲಿಮಿನೇಟರ್ 2 – ದಬಾಂಗ್ ಡೆಲ್ಲಿ ವರ್ಸಸ್ ಬೆಂಗಾಳ್ ವಾರಿಯರ್ಸ್
ಎಲಿಮಿನೇಟರ್ 3 – ಮೊದಲೆರಡು ಎಲಿಮಿನೇಟರ್​ಗಳಲ್ಲಿ ಗೆದ್ದವರ ನಡುವೆ ಪಂದ್ಯ

ಡಿ. 31:
ಕ್ವಾಲಿಫಯರ್ 1 – ಗುಜರಾತ್ ಜೈಂಟ್ಸ್ ವರ್ಸಸ್ ಬೆಂಗಳೂರು ಬುಲ್ಸ್
ಕ್ವಾಲಿಫಯರ್ 2 – ಕ್ವಾಲಿಫಯರ್ 1ರಲ್ಲಿ ಸೋತವರು ಹಾಗೂ ಎಲಿಮಿನೇಟರ್ 3ರಲ್ಲಿ ಗೆದ್ದವರ ನಡುವೆ ಪಂದ್ಯ

ಫೈನಲ್

ಒಂದು ವೇಳೆ ಬೆಂಗಳೂರು ತಂಡ ಮೊದಲ ಕ್ವಾಲಿಫಯರ್​ನಲ್ಲಿ ಗೆದ್ದರೆ ನೇರ ಫೈನಲ್ ಪ್ರವೇಶಿಸುತ್ತದೆ. ಒಂದು ವೇಳೆ ಆ ಕ್ವಾಲಿಫೈರ್ ಸೋತರೂ ಅದೇ ದಿನ ನಡೆಯುವ ಕೊನೆಯ ಎಲಿಮಿನೇಟರ್ ಪಂದ್ಯದಲ್ಲಿ ಆಡಿ ಫೈನಲ್​ಗೆ ಅರ್ಹತೆ ಪಡೆಯುವ ಅವಕಾಶ ಇರುತ್ತದೆ.
First published: December 27, 2018, 10:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading