ಕೆಪಿಎಲ್ 2018: ಬಳ್ಳಾರಿ ಟಕ್ಕರ್ಸ್ ವಿರುದ್ಧ ಬೆಂಗಳೂರಿಗೆ 7 ರನ್​ಗಳ ಭರ್ಜರಿ ಜಯ

news18
Updated:August 17, 2018, 10:41 PM IST
ಕೆಪಿಎಲ್ 2018: ಬಳ್ಳಾರಿ ಟಕ್ಕರ್ಸ್ ವಿರುದ್ಧ ಬೆಂಗಳೂರಿಗೆ 7 ರನ್​ಗಳ ಭರ್ಜರಿ ಜಯ
news18
Updated: August 17, 2018, 10:41 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಆ. 17): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಪಿಎಲ್​​​​ನ ಮೂರನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್​ ತಂಡ ಬಳ್ಳಾರಿ ಟಕ್ಕರ್ಸ್​ ವಿರುದ್ಧ 7 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ಬ್ಲಾಸ್ಟರ್ಸ್​ ತಂಡ 20 ಓವರ್​​ನಲ್ಲಿ 8 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಿತು. 67 ರನ್​​ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಅರ್ಶ್​​ದೀಪ್ ಸಿಂಗ್ ನೆರವಾದರು. ಅರ್ಶ್​ದೀಪ್ ಹಾಗೂ ಭರತ್ ದೇವರಾಜ್ ಜೋಡಿ 7ನೇ ವಿಕೆಟ್​ಗೆ 48 ರನ್​ಗಳ ಕಾಣಿಕೆ ನೀಡಿದರು. ಕೊನೆ ಹಂತದ ವರೆಗೂ ಸ್ಪೋಟಕ ಬ್ಯಾಟಿಂಗ್ ನಡೆಸಿದ ಆದರ್ಶ್​​​ದೀಪ್ 34 ಎಸೆತಗಳಲ್ಲಿ 1 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸ್​​ನೊಂದಿಗೆ 68 ನರ್ ಬಾರಿಸಿ ಕೊನೆಯ ಒಂದು ಎಸೆತ ಬಾಕಿ ಇರುವಾಗ ಔಟ್ ಆದರು. ಈ ಮೂಲಕ ಬಳ್ಳಾರಿಗೆ ಗೆಲ್ಲಲು 169 ರನ್​ಗಳ ಟಾರ್ಗೆಟ್ ನೀಡಿತು. ಬಳ್ಳಾರಿ ಪರ ಪ್ರದೀಪ್ 3 ವಿಕೆಟ್ ಪಡೆದು ಮಿಂಚಿದರು.

169 ರನ್​ಗಳ ಗುರಿ ಬೆನ್ನಟ್ಟಿದ ಬಳ್ಳಾರಿ ಟಕ್ಕರ್ಸ್​ ತಂಡ ಉತ್ತಮ ಆರಂಭ ದೊರಕಿಲ್ಲವಾದರು ಬಳಿಕ ಜೊತೆಯಾದ ರೋಹನ್ ಹಾಗೂ ದೇವದತ್ ಅವರು 2ನೇ ವಿಕೆಟ್​ಗೆ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ರೋಹಿನ್ 31 ರನ್ ಗಳಿಸಿ ಔಟ್ ಆದರೆ, ದೇವದತ್ 19 ರನ್​ಗೆ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ಸಿಎಂ ಗೌತಮ್ ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೆ ಕೇವಲ 12 ರನ್​ಗೆ ತಮ್ಮ ಇನ್ನಿಂಗ್ಸ್ ಕೊನೆಗೊಳಿಸದರು. ಈ ಸಂದರ್ಭ ಖಾಜಿ ಜೊತೆಯಾದ ಅಭಿನವ್ ಮನೋಹರ್ ಸ್ಪೋಟಕ ಬ್ಯಾಟಿಂಗ್ ನಡೆಸಿದರಾದರು ಕೊನೆ ಕ್ಷಣದಲ್ಲಿ ಔಟ್ ಆಗಿ ತಂಡಕ್ಕೆ ಜಯ ತಂದುಕೊಡುವಲ್ಲಿ ವಿಫಲರಾದರು. 28 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸ್​ನೊಂದಿಗೆ 61 ರನ್ ಬಾರಿಸಿ ಮನೋಹರ್ ಔಟ್ ಆದರು. ಅಂತಿಮವಾಗಿ ಬಳ್ಳಾರಿ 20 ಓವರ್​ಗೆ 8 ವಿಕೆಟ್ ಕಳೆದುಕೊಂಡು 161 ರನ್​ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಬೆಂಗಳೂರು ತಂಡ 7 ರನ್​ಗಳ ಭರ್ಜರಿ ಜಯ ಸಾಧಿಸಿತು. ಬೆಂಗಳೂರು ಪರ ಮನೋಜ್ ಎಸ್ 2 ವಿಕೆಟ್ ಪಡೆದು ಮಿಂಚಿದರೆ, ಕೌಶಿಕ್ ಹಘಾಊ ದೇವರಾಜ್ ತಲಾ 2 ವಿಕೆಟ್ ಪಡೆದರು.
First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...