ಕೆಪಿಎಲ್ 2018: ಮೈಸೂರಿಗೆ ಸೋಲುಣಿಸಿ ಫೈನಲ್​​​ಗೆ ಲಗ್ಗೆ ಇಟ್ಟ ಉತ್ತಪ್ಪ ಪಡೆ

news18
Updated:September 5, 2018, 11:28 AM IST
ಕೆಪಿಎಲ್ 2018: ಮೈಸೂರಿಗೆ ಸೋಲುಣಿಸಿ ಫೈನಲ್​​​ಗೆ ಲಗ್ಗೆ ಇಟ್ಟ ಉತ್ತಪ್ಪ ಪಡೆ
news18
Updated: September 5, 2018, 11:28 AM IST
ನ್ಯೂಸ್ 18 ಕನ್ನಡ

ಕೆಪಿಎಲ್​​​ 2018ರ ಸೆಮಿಫೈನಲ್​​​ನ ಮೊದಲ ಪಂದ್ಯದಲ್ಲಿ ಮೈಸೂರು ವಾರಿಯರ್ಸ್​ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್​ ತಂಡ 20 ರನ್​ಗಳ ಜಯ ಸಾಧಿಸಿದ್ದು, ಫೈನಲ್​ಗೆ ಲಗ್ಗೆ ಇಟ್ಟಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಬೆಂಗಳೂರು ನಿಗದಿತ 20 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 138 ರನ್ ಕಲೆಹಾಕಿತು. ಆರಂಭಿಕರಾದ ಕೆಬಿ ಪವನ್(19) ಹಾಗೂ ಮಿತ್ರಕಾಂತ್(14) ಬೇಗನೆ ಔಟ್ ಆಗಿ ಆಘಾತ ನೀಡಿದರು. ಬಳಿಕ ಬಂದ ನಾಯಕ ರಾಬಿನ್ ಉತ್ತಪ್ಪ ಕೂಡ 23 ರನ್​ಗೆ ನಿರ್ಗಮಿಸುವ ಮೂಲಕ ನಿರಾಸೆ ಮೂಡಿಸಿದರು. ಇನ್ನುಳಿದ ಬ್ಯಾಟ್ಸ್​ಮನ್​ಗಳ ಪೈಕಿ ಮನೋಜ್ 34 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​​ಮನ್​​ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಪರಿಣಾಮ 138 ರನ್​​ ಗಳಿಸಿತು. ಮೈಸೂರು ಪರ ಕುಶಾಲ್ 3 ವಿಕೆಟ್ ಕಿತ್ತು ಮಿಂಚಿದರೆ, ಪ್ರತೀಕ್ ಹಾಗೂ ಜಗದೀಶ್ ತಲಾ 2 ವಿಕೆಟ್ ಪಡೆದರು.

139 ರನ್​​ಗಳ ಸುಲಭ ಗುರಿ ಬೆನ್ನಟ್ಟಿದ ಮೈಸೂರಿಗೆ ಭರ್ಜರಿ ಆರಂಭ ದೊರಕಿದ್ದು ಬಿಟ್ಟರೆ ಬಳಿಕ ನಾಟಕೀಯ ಕುಸಿತ ಕಂಡಿತು. ಮೊದಲನೇ ವಿಕೆಟ್​ಗೆ ಅರ್ಜುನ್ ಹಾಗೂ ರಾಜು ಭಟ್ಕಳ್  49 ರನ್​ಗಳ ಜೊತೆಯಾಟ ನೀಡಿದರು. ಇದರಲ್ಲಿ ರಾಜು ಬಾರಿಸಿದ್ದು ಕೇವಲ 6 ರನ್​ ಆದರೆ, ಅರ್ಜುನ್ ಅರ್ಧಶತಕ ಬಾರಿಸಿ ಔಟ್ ಆದರು. ಬಳಿಕ ಬಂದ ಬ್ಯಾಟ್ಸ್​ಮನ್​​ಗಳು ಒಬ್ಬರಹಿಂದೆ ಒಬ್ಬರಂತೆ ಪೆವಿಲಿಯನ್ ಹಾದಿ ಹಿಡಿದರು. ಅಲ್ಲದೆ ಅರ್ಜುನ್ 52 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​​ಗಳ ಸ್ಕೋರ್ 15ರ ಗಡಿ ದಾಟಲಿಲ್ಲ. ಈ ಮೂಲಕ 20 ಓವರ್​​​ನಲ್ಲಿ 9 ವಿಕೆಟ್ ಕಳೆದುಕೊಂಡು 118 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿದೆ. ಬೆಂಗಳೂರು ಪರ ಶ್ರೇಯಸ್ ಗೊಪಾಲ್ 3 ವಿಕೆಟ್ ಕಿತ್ತರೆ, ಆನಂದ್ 2 ವಿಕೆಟ್ ಪಡೆದರು.

ನಾಳೆ ನಡೆಯಲಿರುವ 2ನೇ ಸೆಮಿಫೈನಲ್​​ನಲ್ಲಿ ವಿನಯ್ ಕುಮಾರ್​​ರ ಹುಬ್ಳಿ ಟೈಗರ್ಸ್​ ಹಾಗೂ ಭರತ್ ಚಿಪ್ಲಿ ನೇತೃತ್ವದ ಬಿಜಾಪುರ ಬುಲ್ಸ್ ತಂಡಗಳು ಮುಖಾಮುಖಿ ಆಗಲಿದೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626