PKL 8- ಅತಿಹೆಚ್ಚು ಕನ್ನಡಿಗರನ್ನ ಹೊಂದಿರುವ ಈ ತಂಡವೇ ಪ್ರೋ ಕಬಡ್ಡಿ ಗೆಲ್ಲಲು ಫೇವರಿಟ್

Bengal Warriors: ಹಾಲಿ ಚಾಂಪಿಯನ್ ಬಂಗಾಲ್ ವಾರಿಯರ್ಸ್ ಈ ಬಾರಿಯೂ ಪಿಕೆಎಲ್ ಗೆಲ್ಲುವ ಫೇವರಿಟ್ ಟೀಮ್. ಕನ್ನಡಿಗ ಕೋಚ್, ಐದಕ್ಕೂ ಹೆಚ್ಚು ಕನ್ನಡಿಗ ಆಟಗಾರರನ್ನ ಹೊಂದಿರುವ ವಾರಿಯರ್ಸ್ ತಂಡಕ್ಕೆ ಒಳ್ಳೆಯ ಸಮತೋಲನ ಇದೆ.

ಬೆಂಗಾಲ್ ವಾರಿಯರ್ಸ್

ಬೆಂಗಾಲ್ ವಾರಿಯರ್ಸ್

  • News18
  • Last Updated :
  • Share this:
ಬೆಂಗಳೂರು, ಡಿ. 22: ಪ್ರೋಕಬಡ್ಡಿ ಲೀಗ್​ನ (Pro Kabaddi League) ಎಂಟನೇ ಸೀಸನ್ ಇಂದಿನಿಂದ ನಡೆಯುತ್ತಿದೆ. ಹನ್ನೆರಡು ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸುತ್ತಿವೆ. ಇಂದು ಸಂಜೆ 7:30ಕ್ಕೆ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ಪಂದ್ಯದ ಮೂಲಕ ಎಂಟನೇ ಸೀಸನ್ ಚಾಲನೆಗೊಳ್ಳಲಿದೆ. ಇಂದು ಒಂದೇ ದಿನ ಮೂರು ಪಂದ್ಯಗಳು ನಡೆಯಲಿವೆ. ಕನ್ನಡಿಗರು ಬೆಂಗಳೂರು ಬುಲ್ಸ್ ತಂಡದ ಅಭಿಮಾನಿಗಳಾಗಿರುವುದರ ಜೊತೆಗೆ ಬೇರೆ ಬೇರೆ ತಂಡಗಳಲ್ಲಿರುವ ಕರ್ನಾಟಕದ ಕಬಡ್ಡಿ ಸ್ಟಾರ್​ಗಳ ಆಟವನ್ನೂ ನೋಡಿ ಖುಷಿ ಪಡುವ ತವಕ.

ಐಪಿಎಲ್ ಕ್ರಿಕೆಟ್ ಟೂರ್ನಿಯಂತೆ ಪಿಕೆಎಲ್ ಟೂರ್ನಿಯಲ್ಲೂ ಕರ್ನಾಟಕದ ಆಟಗಾರರು ಹರಿದು ಹಂಚಿ ಹೋಗಿದ್ದಾರೆ. ಆದರೆ, ಕರ್ನಾಟಕದ ಆಟಗಾರರು ಹೆಚ್ಚು ಸೇರಿರುವುದು ಹಾಲಿ ಚಾಂಪಿಯನ್ಸ್ ಬಂಗಾಲ್ ವಾರಿಯರ್ಸ್ ತಂಡಕ್ಕೆ. ಇಲ್ಲಿ ಐದಕ್ಕೂ ಹೆಚ್ಚು ಕನ್ನಡಿಗರು ಆಡುತ್ತಿದ್ಧಾರೆ.

ಈ ಹಿಂದೆ ಅನೂಪ್ ಕುಮಾರ್ ನಾಯಕತ್ವದಲ್ಲಿ ಇದ್ದ ಯು ಮುಂಬಾ ತಂಡದಲ್ಲಿ ಮಿಂಚಿದ್ದ ರಿಷಾಂಕ್ ದೇವಾಡಿಗ ಈಗ ವಾರಿಯರ್ಸ್ ತಂಡದಲ್ಲಿದ್ಧಾರೆ. ತೆಲುಗು ಟೈಟಾನ್ಸ್ ತಂಡದ ಅನೇಕ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಸೈಲೆಂಟ್ ರೈಡರ್ ಸುಕೇಶ್ ಹೆಗ್ಡೆ ಕೂಡ ಬಂಗಾಳ ತಂಡದಲ್ಲಿದ್ದಾರೆ. ಕರ್ನಾಟಕ ಕರಾವಳಿ ಭಾಗದ ಮತ್ತೊಬ್ಬ ಆಟಗಾರ ಸಚಿನ್ ವಿಠಲ ಮತ್ತು ಉದಯೋನ್ಮುಖ ಪ್ರತಿಭೆಗಳಾದ ಮನೋಜ್ ಗೌಡ, ಆನಂದ್ ವಿ ಅವರು ಬಂಗಾಳ್ ವಾರಿಯರ್ಸ್ ತಂಡಕ್ಕೆ ಶಕ್ತಿ ತುಂಬಿದ್ಧಾರೆ.

ಇದನ್ನೂ ಓದಿ: Pro Kabaddi 2021: ಮತ್ತೆ ಬಂತು ಪ್ರೊ ಕಬಡ್ಡಿ.. ತೊಡೆ ತಟ್ಟಿ ಗುಮ್ಮೋಕೆ ರೆಡಿಯಾದ ಬೆಂಗಳೂರು ಬುಲ್ಸ್​!

ಕೋಚ್ ಬಿ. ಸಿ. ರಮೇಶ್ ಚಾಂಪಿಯನ್ ಆಟಗಾರರಾಗಿದ್ದವರು:

ಬಂಗಾಳ ವಾರಿಯರ್ಸ್ ತಂಡದ ಕೋಚ್ ಆಗಿರುವ ಬಿ.ಸಿ. ರಮೇಶ್ ಕಬಡ್ಡಿ ವಲಯದಲ್ಲಿ ಚಿರಪರಿಚಿತ ಹೆಸರು. ಇವರು ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್. ಕರ್ನಾಟಕದ ಅಪ್ಪಟ ಕಬಡ್ಡಿ ಪ್ರತಿಭೆ. ದಶಕಗಳ ಹಿಂದೆ ಬಿ.ಸಿ. ರಮೇಶ್, ಬಿ.ಸಿ. ಸುರೇಶ್ ಮತ್ತು ಹೊನ್ನಪ್ಪ ಕರ್ನಾಟಕ ಮತ್ತು ಟೀಮ್ ಇಂಡಿಯಾದ ತ್ರಿವಳಿ ರತ್ನಗಳೆನಿಸಿದ್ದವರು.

ಬಿ.ಸಿ. ರಮೇಶ್ ಆಟಗಾರನಾಗಿ ನಿವೃತ್ತರಾದ ಮೇಲೆ ಕೋಚಿಂಗ್​ಗೆ ಇಳಿದಿದ್ದಾರೆ. ಪ್ರೋ ಕಬಡ್ಡಿ ಲೀಗ್​ನಲ್ಲಿ ಬಂಗಾಳ ವಾರಿಯರ್ಸ್ ತಂಡ ಕಳೆದ ಬಾರಿಯ ಏಳನೇ ಸೀಸನ್​ನ ಚಾಂಪಿಯನ್ ಆಗಲು ತೆರೆಯ ಹಿಂದೆ ಕಾರ್ಯತಂತ್ರಗಳನ್ನ ರೂಪಿಸಿದ್ದು ಬಿ. ಸಿ. ರಮೇಶ್ ಅವರೆಯೇ.

ಸಮರ್ಥ ನಾಯಕ: ಬಂಗಾಳ ವಾರಿಯರ್ಸ್ ತಂಡಕ್ಕೆ ಬಿ.ಸಿ. ರಮೇಶ್ ಕೋಚ್ ಆಗಿ ಶಕ್ತಿ ತುಂಬಿದಂತೆ ತಂಡಕ್ಕೆ ಮಣಿಂದರ್ ಸಿಂಗ್ ಅವರ ನಾಯಕತ್ವ ಕೂಡ ಪ್ಲಸ್ ಪಾಯಿಂಟ್ ಎನಿಸಿದೆ. ಅದ್ಭುತ ರೇಡರ್ ಆಗಿರುವ ಮಣಿಂದರ್ ಸಿಂಗ್ ಕ್ಯಾಪ್ಟನ್ ಆಗಿಯೂ ಕುಶಾಗ್ರಮತಿ ಎನಿಸಿದ್ಧಾರೆ.

ಪ್ರಬಲ ವಿದೇಶೀ ಆಟಗಾರರು: ಬಂಗಾಲ್ ವಾರಿಯರ್ಸ್ ತಂಡದಲ್ಲಿ ಈ ಬಾರಿ ಇಬ್ಬರು ಸಮರ್ಥ ವಿದೇಶಿ ಆಟಗಾರರು ಇದ್ದಾರೆ. ಇಬ್ಬರೂ ಇರಾನ್ ದೇಶದ ಕಬಡ್ಡಿ ಆಟಗಾರರು. ಅಬೋಜರ್ ಮಿಘಾನಿ ಅಮೋಘ ಡಿಫೆಂಡರ್ ಎನಿಸಿದ್ದಾರೆ. ಮೊಹಮ್ಮದ್ ನಬಿಬಕ್ಷ್ ಅವರು ಕಳೆದ ಸೀಸನ್​ನ ಚಾಂಪಿಯನ್ ಆಟಗಾರ ಎನಿಸಿದ್ದರು. ಬಂಗಾಳ ತಂಡ ಚಾಂಪಿಯನ್ ಆಗಲು ನಬಿಭಕ್ಷ್ ಅವರ ಆಲ್​ರೌಂಡ್ ಆಟ ಪ್ರಮುಖವಾಗಿ ಕಾರಣವಾಗಿತ್ತು.

ಇದನ್ನೂ ಓದಿ: Bengaluru Bulls- ನಾನೇ ಸ್ಟಾರ್ಸ್ ಹುಟ್ಟುಹಾಕ್ತೀನಿ ಎಂದ ಬೆಂಗಳೂರು ಬುಲ್ಸ್ ಕೋಚ್ ರಣಧೀರ್ ಶೆರಾವತ್

ಫೇವರಿಟ್ ತಂಡ:

ಈ ಬಾರಿ ಪಿಕೆಎಲ್ ಟೂರ್ನಿ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಬಂಗಾಳ್ ವಾರಿಯರ್ಸ್ ಪ್ರಮುಖವಾದುದು. ಹಾಲಿ ಚಾಂಪಿಯನ್ ಆಗಿರುವ ವಾರಿಯರ್ಸ್ ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದರೆ ಅಚ್ಚರಿ ಇಲ್ಲ. ಒಳ್ಳೆಯ ರೇಡರ್ಸ್, ಒಳ್ಳೆಯ ಡಿಫೆಂಡರ್ಸ್ ಮತ್ತು ಆಲ್​ರೌಂಡರ್​ಗಳಿಂದ ಕೂಡಿರುವ ಬಂಗಾಳ್ ವಾರಿಯರ್ಸ್ ತಂಡ ಸಮತೋಲಿತವಾಗಿದೆ.

ಬಂಗಾಲ್ ವಾರಿಯರ್ಸ್ ತಂಡ:

ರೇಡರ್ಸ್: ಮಣಿಂದರ್ ಸಿಂಗ್ (ನಾಯಕ), ರಿಷಾಂಕ್ ದೇವಾಡಿಗ (ಕರ್ನಾಟಕ), ಸುಕೇಶ್ ಹೆಗ್ಡೆ (ಕರ್ನಾಟಕ), ರವೀಂದ್ರ ಕುಮಾವತ್, ಆನಂದ್ ವಿ (ಕರ್ನಾಟಕ), ಆಕಾಶ್ ಪಿಕಲಮುಂಡೆ,

ಡಿಫೆಂಡರ್ಸ್: ವಿಜಿನ್ ತಂಗದುರೈ, ಅಮಿತ್, ಅಬೋಜರ್ ಮಿಘಾನಿ (ಇರಾನ್), ರಿಂಕು ನರವಾಲ್, ದರ್ಶನ್ ಜೆ., ಸಚಿನ್ ವಿಟ್ಟಲ (ಕರ್ನಾಟಕ), ಪರ್ವೀನ್, ರೋಹಿತ್ ಬಾನ್ನೆ,

ಆಲ್​ರೌಂಡರ್ಸ್: ತಪಸ್ ಪಾಲ್, ಮೊಹಮ್ಮದ್ ನಬಿಬಕ್ಷ್ (ಇರಾನ್), ಮನೋಜ್ ಗೌಡ (ಕರ್ನಾಟಕ)
Published by:Vijayasarthy SN
First published: