ಪ್ರೋ ಕಬಡ್ಡಿ: ಬೆಂಗಾಲ್ ವಿರುದ್ಧ ರೋಚಕ ಪಂದ್ಯ: ಬೆಂಗಳೂರಿಗೆ ಸೋಲು

ರೋಚಕ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದರು. ಬೆಂಗಳುರು ಪರ ಪವನ್ ಕುಮಾರ್ 11, ರೋಹಿತ್ ಕುಮಾರ್ 9 ಹಾಗೂ ಕಾಶಿಲಿಂಗ್ ಅಡಿಕೆ 5 ಅಂಕಗಳಿಸಿ ಎದುರಾಳಿಗೆ ಕಠಿಣ ಪೈಪೋಟಿ ನೀಡಿದರು.

Vinay Bhat | news18
Updated:November 24, 2018, 12:49 PM IST
ಪ್ರೋ ಕಬಡ್ಡಿ: ಬೆಂಗಾಲ್ ವಿರುದ್ಧ ರೋಚಕ ಪಂದ್ಯ: ಬೆಂಗಳೂರಿಗೆ ಸೋಲು
ಬೆಂಗಳೂರು ಬುಲ್ಸ್​ ತಂಡದ ಆಟಗಾರ
  • News18
  • Last Updated: November 24, 2018, 12:49 PM IST
  • Share this:
ಪುಣೆ: ಇಲ್ಲಿನ ಶಿವ ಛತ್ರಪತಿ ಸ್ಪೋರ್ಟ್ಸ್​​​​​​ ಕಾಂಪ್ಲೆಕ್ಸ್​​ನಲ್ಲಿ ನಡೆದ ಪ್ರೋ ಕಬಡ್ಡಿ ಪಂದ್ಯದ ಬೆಂಗಾಲ್ ವಾರಿಯರ್ಸ್​​ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ ತಂಡ ಸೋಲುಕಂಡಿದೆ. ಕೊನೇಕ್ಷಣದ ವರೆಗೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ಪಂದ್ಯದಲ್ಲಿ ಅಂತಿಮವಾಗಿ ಬೆಂಗಾಲ್ ವಾರಿಯರ್ಸ್​ ತಂಡ 33-31 ಅಂಕಗಳ ಅಂತರದಿಂದ ಗೆದ್ದು ಕೊಂಡಿದೆ.

ಇದನ್ನೂ ಓದಿಇಂಟರ್​​​​ನೆಟ್​​ನಲ್ಲಿ ಹರಿದಾಡುತ್ತಿದೆ ದಿನೇಶ್ ಕಾರ್ತಿಕ್​​ರ ಈ ವಿಡಿಯೋ..!

ಈ ರೋಚಕ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದರು. ಬೆಂಗಳೂರು ಪರ ಪವನ್ ಕುಮಾರ್ 11, ರೋಹಿತ್ ಕುಮಾರ್ 9 ಹಾಗೂ ಕಾಶಿಲಿಂಗ್ ಅಡಿಕೆ 5 ಅಂಕಗಳಿಸಿ ಎದುರಾಳಿಗೆ ಕಠಿಣ ಪೈಪೋಟಿ ನೀಡಿದರು. ಆದರೆ, ಬೆಂಗಾಲಿಗರ ಸಂಘಟಿತ ಹೋರಾಟದ ನಡುವೆ ಬೆಂಗಳೂರಿಗರು ಮಂಕಾದರು. ಬೆಂಗಾಲ್ ಪರ ರವೀಂದ್ರ ರಮೇಶ್ ಹಾಗೂ ರಣ್​​ಸಿಂಗ್ ತಲಾ 3, ಅಮಿತ್ ನಗಾರ್ 2 ಅಂಕ ಗಳಿಸಿ ಮಿಂಚಿದರು.

ಬೆಂಗಳೂರು ಬುಲ್ಸ್​ಗೆ ಈ ಟೂರ್ನಿಯಲ್ಲಿ ಆಡಿದ 11 ಪಂದ್ಯದಲ್ಲಿ ಇದು ಮೂರನೇ ಸೋಲಾಗಿದೆ. ಆದರೂ ಪಾಯಿಂಟ್ ಪಟ್ಟಿಯಲ್ಲಿ ಬೆಂಗಳೂರು ಬುಲ್ಸ್​ ತಂಡ 41 ಅಂಕದೊಂದಿಗೆ ಅಗ್ರಸ್ಥಾನದಲ್ಲಿ ಭದ್ರವಾಗಿದೆ.

First published: November 24, 2018, 12:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading