PKL 8: ಬೆಂಗಾಲ್ ವಿರುದ್ದ ಟೈಟಾನ್ಸ್​ಗೆ ವೀರೋಚಿತ ಸೋಲು; ಪಲ್ಟನ್​ಗೆ ಸೋಲುಣಿಸಿದ ಯೋದ್ಧಾ

Pro Kabaddi League 2022: ಪುಣೇರಿ ಪಲ್ಟನ್ ವಿರುದ್ಧ ಯುಪಿ ಯೋದ್ಧಾ 50-40 ಅಂಕಗಳಿಂದ ಸೋಲಿಸಿದರೆ, ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್ 27-28 ಅಂಕಗಳಿಂದ ಚಾಂಪಿಯನ್ಸ್ ಬೆಂಗಾಲ್ ವಾರಿಯರ್ಸ್ ಎದುರು ಮಂಡಿಯೂರಿತು. ಈ ಸೀಸನ್​ನಲ್ಲಿ ಟೈಟಾನ್ಸ್​ಗೆ ಒಂದೂ ಗೆಲುವು ಸಿಕ್ಕಿಲ್ಲ.

ತೆಲುಗು ಟೈಟಾನ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ಪಂದ್ಯದ ದೃಶ್ಯ

ತೆಲುಗು ಟೈಟಾನ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ಪಂದ್ಯದ ದೃಶ್ಯ

  • News18
  • Last Updated :
  • Share this:
    ಬೆಂಗಳೂರು, ಜ. 17: ಪ್ರೋಕಬಡ್ಡಿ ಬಾಹುಬಲಿ ಸಿದ್ಧಾರ್ಥ್ ದೇಸಾಯಿ ಇಲ್ಲದೇ ತೆಲುಗು ಟೈಟಾನ್ಸ್ ತಂಡದ ಗೆಲುವು ರಹಿತ ಓಟ ಮುಂದುವರಿದಿದೆ. ಇಂದು ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಬೆಂಗಾಲ್ ವಾರಿಯರ್ಸ್ ಎದುರು ತೆಲುಗು ಟೈಟಾನ್ಸ್ 27-28 ಅಂಕಗಳಿಂದ ವೀರೋಚಿತ ಸೋಲುಂಡಿತು.

    ಬಿ ಸಿ ರಮೇಶ್ ಕೋಚ್ ಆಗಿರುವ ಬೆಂಗಾಲ್ ವಾರಿಯರ್ಸ್ ತಂಡದ ಗೆಲುವಿನಲ್ಲಿ ಕ್ಯಾಪ್ಟನ್ ಮಣಿಂದರ್ ಸಿಂಗ್ ಮತ್ತೆ ಪ್ರಮುಖ ಪಾತ್ರ ವಹಿಸಿದರು. ಆದರೆ, ಅವರು 10 ಅಂಕಗಳನ್ನ ಗಳಿಸಲು 21 ರೇಡ್​ಗಳು ಬೇಕಾಯಿತು. ಇದು ಅವರ ಸತತ 9ನೇ ಸುಪರ್10 ರೇಡ್. ಕರ್ನಾಟಕದ ಸುಕೇಶ್ ಹೆಗ್ಡೆ 9 ರೇಡ್ ಮಾಡಿ 5 ಅಂಕ ಗಳಿಸಿದರು.

    ತೆಲುಗು ಟೈಟಾನ್ಸ್ ಪರ ರೇಡರ್ ರಜನೀಶ್ 11 ಅಂಕ ಗಳಿಸಿ ಸೈ ಎನಿಸಿದರು. ಆದರೆ, ಟೂರ್ನಿಯಲ್ಲಿ ತಂಡಕ್ಕೆ ಚೊಚ್ಚಲ ಗೆಲುವು ತಂದುಕೊಡಬಲ್ಲ ಆಟ ಬರಲಿಲ್ಲ. ತೆಲುಗು ಟೈಟಾನ್ಸ್ ಈ ಸೀಸನ್​ನಲ್ಲಿ ಆಡಿರುವ 10 ಪಂದ್ಯಗಳಲ್ಲಿ ಒಂದೂ ಗೆಲುವು ಸಿಕ್ಕಿಲ್ಲ.

    ಬೆಂಗಾಲ್ ವಾರಿಯರ್ಸ್ ಈ ಪಂದ್ಯದ ಗೆಲುವಿನೊಂದಿಗೆ 5 ಅಂಕ ಗಳಿಸಿತು. ಒಟ್ಟು 30 ಅಂಕಗಳೊಂದಿಗೆ ವಾರಿಯರ್ಸ್ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಏರಿತು.

    ಇದನ್ನೂ ಓದಿ: PKL 8: ಬೆಂಗಳೂರು ಬುಲ್ಸ್​ಗೆ ಸೋಲುಣಿಸಿದ ಪೈರೇಟ್ಸ್; ಜೈಪುರ್-ತಲೈವಾಸ್ ಪಂದ್ಯ ಡ್ರಾ

    ಪುಣೇರಿ ಪಲ್ಟನ್ ವಿರುದ್ಧ ಯು ಪಿ ಯೋದ್ಧಾಗೆ ಗೆಲುವು:

    ಇದಕ್ಕೆ ಮುನ್ನ ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಯು ಪಿ ಯೋದ್ಧಾ 50-40 ಅಂಕಗಳಿಂದ ಗೆಲುವು ಪಡೆಯಿತು. ಸುರೇಂದರ್ ಗಿಲ್ ಸೂಪರ್20 ರೇಡ್ ಯು ಪಿ ಯೋದ್ಧಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಗಿಲ್ ಅವರು ಮಾಡಿದ್ದು ಕೇವಲ 18 ರೇಡ್ ಆದರೂ 21 ಅಂಕ ಗಳಿಸಿದರು. ಗಿಲ್ ಅವರನ್ನ ಹಿಡಿಯಲು ಪುಣೇರಿ ಡಿಫೆಂಡರ್ಸ್ ಸಫಲರಾಗಿದ್ದು ಒಮ್ಮೆ ಮಾತ್ರ. ಪ್ರದೀಪ್ ನರ್ವಾಲ್ ಕೂಡ 10 ಅಂಕ ಗಳಿಸಿದರು.

    ಇನ್ನೊಂದೆಡೆ ಪುಣೇರಿ ಪಲ್ಟನ್ ರೇಡರ್​ಗಳಾದ ಮೋಹಿತ್ ಗೋಯತ್ 13 ಮತ್ತು ಅಸ್ಲಮ್ ಇನಾಮ್ದಾರ್ 16 ಅಂಕ ಗಳಿಸಿದರು. ಆದರೆ, ಪುಣೇರಿಗೆ ಈ ಪಂದ್ಯದಲ್ಲಿ ಕೈಕೊಟ್ಟಿದ್ದು ಅದರ ಡಿಫೆಂಡರ್ಸ್. ಹಿಂದಿನ ಅನೇಕ ಪಂದ್ಯಗಳಲ್ಲಿ ಪುಣೇರಿ ಡಿಫೆನ್ಸ್ ಪ್ರಬಲವಾಗಿತ್ತು. ಈ ಪಂದ್ಯದಲ್ಲಿ ಹೆಚ್ಚು ಯಶಸ್ಸು ಕಾಣಲಿಲ್ಲ. ಸುರೇಂದರ್ ಗಿಲ್ ಅವರನ್ನ ಹಿಡಿಯಲು ಪ್ರಯತ್ನಿಸಿದಷ್ಟೂ ಪಲ್ಟನ್ ವೈಫಲ್ಯ ಕಾಣುತ್ತಾ ಹೋಯಿತು. ಮೊದಲ ಅರ್ಧದಲ್ಲಿ ಎರಡೂ ತಂಡಗಳು ಸಮಾನ ಸ್ಕೋರ್ ಮಾಡಿದ್ದವು. ಆದರೆ, ಎರಡನೇ ಅವಧಿಯಲ್ಲಿ ಗಿಲ್ ಅಲೆ ಎದ್ದಿತು. ಪುಣೇರಿ ರಕ್ಷಣಾ ಕೋಟೆ ಛಿದ್ರಗೊಂಡಿತು. ಅಂತಿಮವಾಗಿ ಯೋದ್ಧಾ ಗೆಲುವಿನ ನಗೆ ಬೀರಿದರು.

    ಇದನ್ನೂ ಓದಿ: U19 World Cup: ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಜಯಭೇರಿ; ಇಲ್ಲಿವೆ ಮುಂದಿನ ಪಂದ್ಯಗಳು

    ಯು ಪಿ ಯೋದ್ಧಾ ತಂಡ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಏರಿದೆ. ಪುಣೇರಿ ಪಲ್ಟನ್ 10ನೇ ಸ್ಥಾನದಲ್ಲಿ ಮುಂದುವರಿದಿದೆ.

    ನಾಳೆಯ ಪಂದ್ಯಗಳು:

    1) ದಬಂಗ್ ಡೆಲ್ಲಿ vs ಪಟ್ನಾ ಪೈರೇಟ್ಸ್, ಸಮಯ ಸಂಜೆ 7:30ಕ್ಕೆ

    2) ಗುಜರಾತ್ ಜೈಂಟ್ಸ್ vs ಯು ಮುಂಬಾ, ಸಮಯ ರಾತ್ರಿ 8:30ಕ್ಕೆ

    ಇದನ್ನೂ ಓದಿ: ಟೀಮ್ ಇಂಡಿಯಾ ಟೆಸ್ಟ್ ನಾಯಕತ್ವಕ್ಕೆ ಮೂವರ ಹೆಸರು; ಯಾರ ಒಲವು ಯಾರತ್ತ, ಒಂದು ನೋಟ

    ಅಂಕಪಟ್ಟಿ:

    1) ಬೆಂಗಳೂರು ಬುಲ್ಸ್: 39 ಅಂಕ
    2) ಪಟ್ನಾ ಪೈರೇಟ್ಸ್: 39 ಅಂಕ
    3) ದಬಂಗ್ ಡೆಲ್ಲಿ: 37 ಅಂಕ
    4) ಯು ಪಿ ಯೋದ್ಧಾ: 33 ಅಂಕ
    5) ಜೈಪುರ್ ಪಿಂಕ್ ಪ್ಯಾಂಥರ್ಸ್: 31 ಅಂಕ
    6) ತಮಿಳ್ ತಲೈವಾಸ್: 30 ಅಂಕ
    7) ಬೆಂಗಾಲ್ ವಾರಿಯರ್ಸ್: 30 ಅಂಕ
    8) ಯು ಮುಂಬಾ: 28 ಅಂಕ
    9) ಹರ್ಯಾಣ ಸ್ಟೀಲರ್ಸ್: 24 ಅಂಕ
    10) ಪುಣೇರಿ ಪಲ್ಟನ್: 21 ಅಂಕ
    11) ಗುಜರಾತ್ ಜೈಂಟ್ಸ್: 20 ಅಂಕ
    12) ತೆಲುಗು ಟೈಟಾನ್ಸ್: 12 ಅಂಕ
    Published by:Vijayasarthy SN
    First published: