ಭುವನೇಶ್ವರ್: ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿಯುವ ಬೆಲ್ಜಿಯಂ ತಂಡದ ಕನಸು ಕೊನೆಗೂ ನನಸಾಗಿದೆ. ಅತ್ಯಂತ ರೋಚಕತೆಯಿಂದ ಕೂಡಿದ್ದ ಹಾಕಿ ವಿಶ್ವಕಪ್ ಫೈನಲ್ ಪಂದ್ಯ ಪೆನಾಲ್ಟಿ ಶೂಟೌಟ್ನಲ್ಲಿ ಕೊನೆಗೊಂಡಿತು.
ಬಲಿಷ್ಠ ನೆದರ್ಲೆಂಡ್ ತಂಡವನ್ನು ಎದುರಿಸಿದ ಬೆಲ್ಜಿಯಂ ತಂಡ ನಿಗದಿತ ಸಮಯದಲ್ಲಿ ಗೋಲ್ ಬಾರಿಸಲು ಸಾಧ್ಯವಾಗಿಲ್ಲ. ಉಭಯ ತಂಡಗಳು ಚೆಂಡನ್ನು ನೆಟ್ನೊಳಗೆ ಅಟ್ಟಲು ಹರಸಾಹಸ ಪಟ್ಟರಾದರು ಯಾವುದೇ ಗೋಲು ಕಾಣದೆ ಡ್ರಾನಲ್ಲಿ ಅಂತ್ಯಕಂಡಿತ್ತು. ಹೀಗಾಗಿ ಕೊನೆಗೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಇದನ್ನೂ ಓದಿ: IPL 2019 ಹರಾಜು: ಎಲ್ಲಿ?, ಯಾವಾಗ? ಎಷ್ಟು ಆಟಗಾರರು: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಪೆನಾಲ್ಟಿ ಶೂಟೌಟ್ನಲ್ಲಿ ಬೆಲ್ಜಿಯಂ ತಂಡ 3-2 ಗೋಲ್ಗಳ ಅಂತರದಿಂದ ಗೆದ್ದು ಬೀಗಿ ಇದೇ ಮೊದಲ ಬಾರಿಗೆ ಹಾಕಿ ವಿಶ್ವಕಪ್ ಪ್ರಶಸ್ತಿಗೆ ಮುತ್ತಿಕ್ಕಿತು. ಇತ್ತ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ನೆದರ್ಲೆಂಡ್ ಕನಸು ನುಚ್ಚುನೂರಾಯಿತು.
🏑 | LIVE | @BELRedLions are the new World Champions! Take it away, boys. #HWC2018 #Odisha2018
🇧🇪 #BELvNED 🇳🇱 pic.twitter.com/CnwdxHC4HQ
— Hockey World Cup 2018 - Host Partner (@sports_odisha) December 16, 2018
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ