ಕ್ರಿಕೆಟ್ ಮೈದಾನದಲ್ಲಿ ನೀವು ಅನೇಕ ಆಶ್ಚರ್ಯಕರ ಕ್ಯಾಚ್‌ಗಳನ್ನು ನೋಡಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಟೆನಿಸ್ ಬಾಲ್ (Tennis Ball )ಕ್ರಿಕೆಟಿಗನೊಬ್ಬನ ಕ್ಯಾಚ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ವಿಡಿಯೋವನ್ನು ಸ್ವತಃ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar ) ಟ್ವೀಟ್ ಮಾಡಿದ್ದಾರೆ. ಈ ಕ್ರಿಕೆಟಿಗ ಟೆನಿಸ್ ಬಾಲ್ ಪಂದ್ಯಾವಳಿಯಲ್ಲಿ ಬೌಂಡರಿಯಲ್ಲಿ ಅದ್ಭುತ ಕ್ಯಾಚ್ (Cath) ಹಿಡಿಯುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಅಲ್ಲದೇ ಸಚಿನ್ ಅವರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಆದರೆ ಈ ಯುವ ಯಾರು? ಈತನ ಹಿನ್ನಲೆ ಏನು? ಇಲ್ಲಿದೆ ನೋಡಿ ಬೆಳಗಾವಿ ಯುವಕ ಮಾಹಿತಿ.
ಬೆಳಗಾವಿಯ ಯುವ ಕಿರಣ್:
ಕರ್ನಾಟಕದ ಬೆಳಗಾವಿಯ ಕಿರಣ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದಾರೆ. ಇದಕ್ಕೆ ಕಾರಣ ಟೆನಿಸ್ ಬಾಲ್ ಕ್ರಿಕೆಟ್ ಮ್ಯಾಚ್‌ನಲ್ಲಿ ಹಿಡಿದ ಕ್ಯಾಚ್. ಇದರಲ್ಲಿ ಅವರು ಫುಟ್‌ಬಾಲ್ ಆಟಗಾರನಂತೆ ಕಾಳಿನ ಮೂಲಕ ಬಾಲ್ ಒದ್ದು ಅದ್ಭುತ ರೀತಿಯಲ್ಲಿ ಕ್ಯಾಚ್ ಪಡೆದಿದ್ದಾರೆ. ಅಂದಿನಿಂದ ಕಿರಣ್ ಫೋನ್ ನಲ್ಲಿ ಶುರುವಾದ ಶುಭಾಶಯಗಳ ಸರಮಾಲೆ ಇಲ್ಲಿಯವರೆಗೂ ಮುಂದುವರೆದಿದೆ ಎಂದರೂ ತಪ್ಪಾಗಲಾರದು. ಈ ವಿಡಿಯೋವನ್ನು ಸಚಿನ್ ತೆಂಡೂಲ್ಕರ್ ಸೇರಿದಂತೆ ವಿಶ್ವದ ಎಲ್ಲಾ ದಿಗ್ಗಜ ಕ್ರಿಕೆಟಿಗರು ಹಂಚಿಕೊಂಡಿದ್ದಾರೆ. ಈ ಮೂಲಕ ಕಿರಣ್ 2-3 ದಿನಗಳಲ್ಲಿ ಸಾಮಾಜಿಕ ಮಾಧ್ಯಮದ ಸೆಲೆಬ್ರಿಟಿಯಾಗಿದ್ದಾರೆ.
This is what happens when you bring a guy who also knows how to play football!! ⚽️ 🏏 😂 https://t.co/IaDb5EBUOg
— Sachin Tendulkar (@sachin_rt) February 12, 2023
ಸಚಿನ್ ಈ ಯುವಕನ ಅದ್ಭುತ ಕ್ಯಾಚ್ನ ವಿಡಿಯೋವನ್ನು ಹಂಚಿಕೊಂಡ ನಂತರ ಈ ಕುರಿತು ಮಾತನಾಡಿರುವ ಕಿರಣ್, ‘ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನನ್ನ ಕ್ಯಾಚ್ ಅನ್ನು ಇಷ್ಟಪಟ್ಟಿದ್ದಾರೆ. ಈಗ ನನಗೆ ಜೀವನದಲ್ಲಿ ಬೇರೆ ಏನೂ ಬೇಡ‘ ಎಂದು ಹೇಳಿದ್ದಾರೆ. ಕಿರಣ್ ತಮ್ಮ ಕ್ಯಾಚ್ ಬಗ್ಗೆ ಹೇಳಿದ್ದು, ಯಾವುದೇ ಸಂದರ್ಭದಲ್ಲೂ ಆ ಬಾಲ್ ಸಿಕ್ಸರ್ ಆಗದಂತೆ ನೋಡಿಕೊಳ್ಳುವುದು ನನ್ನ ಯೋಜನೆಯಾಗಿತ್ತು. ಆದರೆ ಚೆಂಡು ಬೌಂಡರಿ ದಾಟಿದಾಗ, ಗಾಳಿಯಲ್ಲಿ ಹಾರಿ, ಚೆಂಡನ್ನು ಒದ್ದು ಫ್ಲೈಯಿಂಗ್ ಕಿಕ್ ಹೊಡೆಯುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಅದೃಷ್ಟವಶಾತ್ ಚೆಂಡು ನೇರವಾಗಿ ಸಹ ಫೀಲ್ಡರ್ ಕೈ ಸೇರಿತು ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ICC Rankings: ಮತ್ತೆ ಐಸಿಸಿ ಎಡವಟ್ಟು, ನಂಬರ್ 1 ಪಟ್ಟದಿಂದ ಟೀಂ ಇಂಡಿಯಾ ಔಟ್!
ಟೆನಿಸ್ ಬಾಲ್ ಕ್ರಿಕೆಟ್‌ನಿಂದ ಹಣ:
ಕಿರಣ್ ಅವರಿಗೆ ಟೆನಿಸ್ ಬಾಲ್ ಕ್ರಿಕೆಟ್ ಆಡುವುದು ಒಂದು ವೃತ್ತಿಯಾಗಿದೆ. ಪಂದ್ಯಾವಳಿಗಳನ್ನು ಆಡುವ ಮೂಲಕ ಅವರು ಹಣ ಗಳಿಸುತ್ತಿದ್ದಾರೆ. ಈ ಹಣವನ್ನು ತನ್ನ ಕಾಲೇಜು ಶುಲ್ಕವನ್ನು ಪಾವತಿಸಲು ಬಳಸುತ್ತಾರಂತೆ. ಜೊತೆಗೆ ಉಳಿದ ಹಣವನ್ನು ತಾಯಿಗೆ ನೀಡುತ್ತಾರಂತೆ. ಇನ್ನು, ಕಿರಣ್ ಅವರ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರಂತೆ. 2019 ರಲ್ಲಿ, ಕಿರಣ್ ಅವರು ಇಶಾನ್ ಕಿಶನ್, ಪ್ರಿಯಾಂಕ್ ಪಾಂಚಾಲ್ ಅವರನ್ನು ನೆಟ್ಸ್‌ನಲ್ಲಿ ಬೌಲ್ಡ್ ಮಾಡಿದ್ದರು. ಆಗ ಈ ಇಬ್ಬರೂ ಆಟಗಾರರು ಭಾರತ-ಎ ಮತ್ತು ಶ್ರೀಲಂಕಾ-ಎ ನಡುವಿನ ಪಂದ್ಯಕ್ಕಾಗಿ ಬೆಳಗಾವಿಗೆ ಬಂದಿದ್ದರು.
ಒಂದು ಕ್ಯಾಚ್‌ನಿಂದ ಕಿರಣ್ ಜೀವನವೇ ಬದಲು:
ಇನ್ನು, ಒಂದು ಕ್ಯಾಚ್‌ನಿಂದ ಕಿರಣ್ ಅವರ ಜೀವನವೇ ಬದಲಾಗಿದೆ. ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟಿದ್ದಾರೆ. ಆದರೆ ಅವರಿಗೆ ಒಂದೇ ಒಂದು ಆಸೆ ಇದೆ, ಅದು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಬೇಕು. ಇದೀಗ ಸಚಿನ್ ಸರ್ ಟ್ವೀಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇನ್ನು, ಸಚಿನ್ ಇದಕ್ಕೂ ಮೊದಲು ಒಮ್ಮೆ ಬೆಳಗಾವಿಯ ಟೀ ಸ್ಟಾಲ್ ಯುವನ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ಮೂಲಕ ಅವರು ಗಡಿ ಭಾಗವಾದ ಬೆಳಗಾವಿಯ ಯುವಕರ ಪ್ರತಿಭೆಗಳಿಗೆ ಹೆಚ್ಚು ಮನ್ನಣೆ ನೀಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹೇಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ