ಕೆಪಿಎಲ್ 2018: ಲಯನ್ಸ್​​ಗಳನ್ನು ಬಗ್ಗುಬಡಿದ ಬಿನ್ನಿ ಪಡೆ

news18
Updated:August 29, 2018, 10:11 PM IST
ಕೆಪಿಎಲ್ 2018: ಲಯನ್ಸ್​​ಗಳನ್ನು ಬಗ್ಗುಬಡಿದ ಬಿನ್ನಿ ಪಡೆ
news18
Updated: August 29, 2018, 10:11 PM IST
ನ್ಯೂಸ್ 18 ಕನ್ನಡ  

ಮೈಸೂರು (ಆ. 29): ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಕೆಪಿಎಲ್​ನ ಇಂದಿನ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್​ ವಿರುದ್ಧ ಬೆಳಗಾವಿ ಪ್ಯಾಂಥರ್ಸ್​ ತಂಡ 5 ವಿಕೆಟ್​ಗಳ ಗೆಲುವು ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶಿವಮೊಗ್ಗ ನಿಗದಿತ 20 ಓವರ್​​ನಲ್ಲಿ 8 ವಿಕೆಟ್ ಕಳೆದುಕೊಂಡು 163 ರನ್​ ಕಲೆಹಾಕಿತು. ಅನಿರುದ್ಧ್ ಜೋಷಿ ಭರ್ಜರಿ ಅರ್ಧಶತಕ 54 ರನ್ ಬಾರಿಸಿ ತಂಡಕ್ಕೆ ನೆರವಾದರೆ, ನಿಹಾಲ್ ಉಳ್ಳಾಲ್ 34 ಹಾಗೂ ಅಭಿಮನ್ಯು ಮಿಥುನ್ 23 ರನ್​ ಬಾರಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು. ಬೆಳಗಾವಿ ಪರ ನಿಸಾರ್ ಹಾಗೂ ಸ್ಟುವರ್ಟ್​ ಬಿನ್ನಿ ತಲಾ 2 ವಿಕೆಟ್ ಪಡೆದು ಮಿಂಚಿದರು. ಇತ್ತ 164 ರನ್​​ಗಳ ಗುರಿ ಬೆನ್ನಟ್ಟಿದ ಪ್ಯಾಂಥರ್ಸ್​ ತಂಡ ಉತ್ತಮ ಆರಂಭ ಪಡೆದುಕೊಂಡಿಲ್ಲವಾದರು 3ನೇ ವಿಕೆಟ್​​ಗೆ ಜೊತೆಯಾದ ನಾಯಕ ಸ್ಟುವರ್ಟ್​ ಬಿನ್ನಿ ಹಾಗೂ ದಿಕ್ಷನ್​​​​ಶು ನೇಗಿ 56 ರನ್​​ಗಳ ಜೊತೆಯಾಟ ತಂಡಕ್ಕೆ ನೆರವಾಯಿತು. ಆದರೆ ನೇಗಿ 54 ರನ್​ಗೆ ಔಟ್ ಆದರೆ, ಇದರ ಬೆನ್ನಲ್ಲೆ ಬಿನ್ನಿ ಕೂಡ 32 ರನ್​​ ಗಳಿಸಿ ಇನ್ನಿಂಗ್ಸ್​ ಕೊನೆಗೊಳಿಸಿದರು. ಕೊನೆಯಲ್ಲಿ ಅವಿನಾಶ್ ಸ್ಪೋಟಕ 35 ರನ್​ ಸಿಡಿಸಿ ತಂಡಕ್ಕೆ ಜಯ ತಂದು ಕೊಟ್ಟರು. ಈ ಮೂಲಕ ಇನ್ನು 3 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ ಕಳೆದುಕೊಂಡು 166 ರನ್ ಬಾರಿಸಿ ಬೆಳಗಾವಿ ಜಯ ಸಾಧಿಸಿತು.
First published:August 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ