ಕೆಪಿಎಲ್ 2018: ಟಸ್ಕರ್ಸ್​​ಗೆ ಟಕ್ಕರ್ ಕೊಟ್ಟ ಪ್ಯಾಂಥರ್ಸ್​​

news18
Updated:August 25, 2018, 7:00 PM IST
ಕೆಪಿಎಲ್ 2018: ಟಸ್ಕರ್ಸ್​​ಗೆ ಟಕ್ಕರ್ ಕೊಟ್ಟ ಪ್ಯಾಂಥರ್ಸ್​​
news18
Updated: August 25, 2018, 7:00 PM IST
ನ್ಯೂಸ್ 18 ಕನ್ನಡ

ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಆರು ಪಂದ್ಯಗಳನ್ನು ಮಳೆಯ ಕಾರಣ ಮೈಸೂರಿಗೆ ಸ್ಥಳಾಂತರಿಸಲಾಗಿದ್ದು, ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಬೆಳಗಾವಿ ಪ್ಯಾಂಥರ್ಸ್​​ ಹಾಗೂ ಬಳ್ಳಾರಿ ಟಸ್ಕರ್ಸ್​ ನಡುವೆ ಮೊದಲ ಪಂದ್ಯ ನಡೆದಿದೆ. ಬೆಳಗಾವಿ ನೀಡಿದ್ದ 158 ರನ್​​ಗಳ ಸವಾಲನ್ನು ಬೆನ್ನಟ್ಟುವಲ್ಲಿ ಬಳ್ಳಾರಿ ವಿಫಲವಾಗಿದ್ದು 22 ರನ್​​ಗಳ ಸೋಲುಂಡಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬೆಳಗಾವಿ ಪ್ಯಾಂಥರ್ಸ್​ ತಂಡ ಸ್ಟಾಲಿನ್ ಹೂವೆರ್ 38, ನಾಯಕ ಸ್ಟುವರ್ಟ್​​ ಬಿನ್ನಿ 31 ರನ್ ಹಾಗೂ ಕೊನೆಯಲ್ಲಿ ಅಬ್ಬರಿಸಿದ ಪ್ರಶಾಂತ್(18) ಅವರ ನೆರವಿನಿಂದ 20 ಓವರ್​​​ನಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್ ಬಾರಿಸಿತು. ಬಳ್ಳಾರಿ ಪರ ಪ್ರದೀಪ್ ಹಾಗೂ ರಿತೇಶ್ ಭಟ್ಕಳ್ 2 ವಿಕೆಟ್ ಪಡೆದರು. 158 ರನ್​​ಗಳ ಗುರಿ ಬೆನ್ನಟ್ಟಿದ ಬಳ್ಳಾರಿ ಟಸ್ಕರ್ಸ್​ಗೆ ಕಾರ್ತಿಕ್(31) ನಾಯಕ ಗೌತಮ್(24) ಹಾಗೂ ದೇವದತ್(23) ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​​ಗಳು ಬೇಗನೆ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಅಂತಿಮವಾಗಿ 18.5 ಓವರ್​​ನಲ್ಲಿ 135 ರನ್​​ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಬೆಳಗಾವಿ ಪರ ಅವಿನಾಶ್ 3 ವಿಕೆಟ್ ಕಿತ್ತು ಮಿಂಚಿದರೆ, ಸ್ಟುವರ್ಟ್​ ಬಿನ್ನಿ ಹಾಗೂ ನಿಸಾರ್ ತಲಾ 2 ವಿಕೆಟ್ ಪಡೆದರು.

ಈ ಮೂಲಕ ಬೆಳಗಾವಿ ಪ್ಯಾಂಥರ್ಸ್​​ ತಂಡ 22 ರನ್​​ಗಳ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿದ ನಾಯಕ ಸ್ಟುವರ್ಟ್​​ ಬಿನ್ನಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...