'ಬಾಲ್ಯದಲ್ಲಿ ಪ್ರತಿ ದಿನ ವಿಶ್ವಕಪ್​ ಗೆಲುವನ್ನೆ ನೆನೆಸಿಕೊಳ್ಳುತ್ತಿದ್ದೆ': ನೋವುಗಳ ಕನಸನ್ನು ಬಿಚ್ಚಿಟ್ಟ ಗಂಭೀರ್

ನನಗೆ ಎರಡು ವರ್ಷ ಇದ್ದಾಗ ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಬೀಗಿತ್ತು. ಆಗಿನಿಂದಲು ಭಾರತ ವಿಶ್ವಕಪ್ ಗೆದ್ದಾಗ ಆ ತಂಡದಲ್ಲಿ ನಾನಿರಬೇಕೆಂಬುದು ನನ್ನ ದೊಡ್ಡ ಕನಸು- ಗೌತಮ್ ಗಂಭೀರ್

Vinay Bhat | news18
Updated:February 5, 2019, 10:24 PM IST
'ಬಾಲ್ಯದಲ್ಲಿ ಪ್ರತಿ ದಿನ ವಿಶ್ವಕಪ್​ ಗೆಲುವನ್ನೆ ನೆನೆಸಿಕೊಳ್ಳುತ್ತಿದ್ದೆ': ನೋವುಗಳ ಕನಸನ್ನು ಬಿಚ್ಚಿಟ್ಟ ಗಂಭೀರ್
ಗೌತಮ್ ಗಂಭೀರ್ (ಮಾಜಿ ಕ್ರಿಕೆಟಿಗ)
Vinay Bhat | news18
Updated: February 5, 2019, 10:24 PM IST
ಡಿಸೆಂಬರ್ 03, 2018 ರಂದು ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಗೌತಮ್ ಗಂಭೀರ್ ಸದ್ಯ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಮಾಜಿ ಯೋಧರೊಬ್ಬರ ನೆರವಿಗೆ ನಿಲ್ಲುವ ಮೂಲಕ ಮಾನವೀಯತೆ ಮೆರೆದಿದ್ದರು.

ಈ ಮಧ್ಯೆ ಗಂಭೀರ್ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಜೊತೆ ಮನಬಿಚ್ಚಿ ಮಾತನಾಡಿದ್ದು, ತನ್ನ ಬಾಲ್ಯದ ಕನಸು, ನಡೆದು ಬಂದ ಹಾದಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

'ನನಗೆ ಕ್ರಿಕೆಟ್ ಜೀವನ ಸಂಪೂರ್ಣ ತೃಪ್ತಿ ನೀಡಿದೆ. ವಿಶ್ವಕಪ್ ಗೆಲ್ಲಬೇಕೆಂಬುದು ನನ್ನ ಬಾಲ್ಯದ ಕನಸಾಗಿತ್ತು. ಆದರೆ, ಆ ಕನಸು ನನಸಾಗಲು ದೀರ್ಘಕಾಲ ಕಾಯಬೇಕಾಯಿತು. ಕೊನೆಗೂ ವಿಶ್ವಕಪ್​ ಗೆಲುವಿನ ತಂಡದಲ್ಲಿ ನಾನು ಇದ್ದೆ ಎಂಬುದೆ ಸಂತಸದ ವಿಷಯ. ನನ್ನ ಕ್ರಿಕೆಟ್ ಜೀವನದ ಬೆಸ್ಟ್​​ ಪಾರ್ಟ್​ ಎಂದರೆ ವಿಶ್ವಕಪ್ ಗೆದ್ದಿರುವುದು' ಎಂದಿದ್ದಾರೆ.

ಇದನ್ನೂ ಓದಿ: 'ವಿಶ್ವಕಪ್​​ನಲ್ಲಿ ಭಾರತ 3 ವಿಕೆಟ್ ಕೀಪರ್ಸ್​​ ಜೊತೆ ಕಣಕ್ಕಿಳಿಯಬೇಕು': ಇದು ಕ್ರಿಕೆಟ್ ದಿಗ್ಗಜನ ಮಾತು

'ನನಗೆ ಎರಡು ವರ್ಷ ಇದ್ದಾಗ ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಬೀಗಿತ್ತು. ಆಗಿನಿಂದಲು ಭಾರತ ವಿಶ್ವಕಪ್ ಗೆದ್ದಾಗ ಆ ತಂಡದಲ್ಲಿ ನಾನಿರಬೇಕೆಂಬುದು ನನ್ನ ದೊಡ್ಡ ಕನಸು. ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ವಿಶ್ವಕಪ್​ ಗೆಲುವನ್ನೆ ನೆನೆಸಿಕೊಳ್ಳುತ್ತಿದ್ದೆ' ಎಂದು ಗಂಭೀರ್ ಬಾಲ್ಯದ ನೆನಪನ್ನು ಮೆಲುಕು ಹಾಕಿದ್ದಾರೆ.

ಇನ್ನು 'ವಿಶ್ವಕಪ್​​ ಫೈನಲ್​ನಲ್ಲಿ 97 ರನ್​​ಗೆ ಔಟ್ ಆಗಿದ್ದು ತುಂಬಾನೆ ಬೇಸರ ತಂದಿದೆ. ಅದಕ್ಕಿಂತಲು ಪಂದ್ಯದ ಕೊನೆಯವರೆಗೂ ನಿಂತು ವಿನ್ನಿಂಗ್ ಶಾಟ್ ಹೊಡೆಯಲು ಮಿಸ್ ಆಗಿದ್ದು ಇನ್ನೂ ನೋವುಂಟು ಮಾಡಿತು. ಆದರೆ, ದೇಶಕ್ಕೋಸ್ಕರ ಪಂದ್ಯದಲ್ಲಿ ವಿಶ್ವಕಪ್​​ ಗೆಲ್ಲಲು ನನ್ನ 97 ರನ್ ಸಹಾಯವಾಗಿದೆ ಎಂಬುದು ಸಂತಸ ನೀಡಿದೆ' ಎಂದಿದ್ದಾರೆ.

ಇದನ್ನೂ ಓದಿ: ನಾಳೆಯಿಂದ ಭಾರತ-ನ್ಯೂಜಿಲೆಂಡ್ ಚುಟುಕು ಸಮರ; ಶುಭಾರಂಭದ ನಿರೀಕ್ಷೆಯಲ್ಲಿ ರೋಹಿತ್ ಪಡೆ
Loading...

ಗಂಭೀರ್ ಅವರು 147 ಅಂತರಾಷ್ಟ್ರೀಯ ಏಕದಿನ ಪಂದ್ಯನ್ನಾಡಿದ್ದು 5238 ರನ್ ಬಾರಿಸಿದ್ದಾರೆ. ಇದರಲ್ಲಿ 34 ಅರ್ಧಶತಕ ಹಾಗೂ 11 ಶತಕ ಸಿಡಿಸಿದ್ದಾರೆ.

 First published:February 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...