T20 World Cup 2022: ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟಿಸಲು ದಿನಾಂಕ ನಿಗದಿ, ಯಾರಿಗೆ ಅವಕಾಶ, ಯಾರು ಔಟ್?

T20 World Cup 2022: ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲಿದೆ. ಇದರ ನಡುವೆ ಬಿಸಿಸಿಐ ಸೆಪ್ಟೆಂಬರ್ 16 ರಂದು ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾವನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಭಾರತ ತಂಡ

ಭಾರತ ತಂಡ

  • Share this:
ಟೀಂ ಇಂಡಿಯಾದಿಂದ ಏಷ್ಯಾಕಪ್ (Asia Cup) ಟೂರ್ನಿಯಿಂದ ಈಗಾಗಲೇ ಹೊರಬಿದ್ದಿದೆ. ನಿನ್ನೆ ನಡೆದ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಭಾರತ ಅಫ್ಘಾನ್ (IND vs AFG) ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ಏಷ್ಯಾ ಕಪ್​ 2022ಗೆ ಗೆಲುವಿನ ವಿದಾಯ ಹೇಳಿದೆ. ಆದರೆ ಇದೀಗ ತಂಡ ಟಿ20 ವಿಶ್ವಕಪ್ (T20 World Cup) ಗೆಲ್ಲುವ ಗುರಿ ಹೊಂದಿದೆ. ಸದ್ಯ ಟೀಂ ಇಂಡಿಯಾದ (Team India) 5 ಆಟಗಾರರು ಗಾಯ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾದರೆ ಅವರಲ್ಲಿ ಯಾರು ವಿಶ್ವಕಪ್‌ಗೆ ಆಡುತ್ತಾರೆ? ಟೀಂ ಇಂಡಿಯಾದಿಂದ ಯಾರನ್ನು ಕೈ ಬಿಡುತ್ತಾರೆ ಅನ್ನೋದು ಸದ್ಯದಲ್ಲೇ ನಿರ್ಧಾರವಾಗಲಿದೆ. ಹೌದು, ಈಗಾಗಲೇ ಟಿ20 ವಿಶ್ವಕಪ್​ಗಾಗಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡಗಳು ತಮ್ಮ ಟೀಂ ಗಳನ್ನು ಘೊಷಣೆ ಮಾಡಿದೆ. ಆದರೆ ಈವರೆಗೂ ಭಾರತ ತಮಡವನ್ನು ಬಿಸಿಸಿಐ ಘೋಷಿಸಿಲ್ಲ. ಆದರೆ ಇದೀಗ BCCI ಯಾವಾಗ ತಂಡವನ್ನು ಪ್ರಕಟಿಸಲಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ದೊರಕಿದೆ.

ಇನ್ನೊಂದು ವಾರದಲ್ಲಿ ವಿಶ್ವಕಪ್​ಗೆ ಟಿಂ ಇಂಡಿಯಾ ಪ್ರಕಟ:

ಹೌದು, ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲಿದೆ. ಇದರ ನಡುವೆ ಬಿಸಿಸಿಐ ಸೆಪ್ಟೆಂಬರ್ 16 ರಂದು ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾವನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಹೀಗಾಗಿ ರವೀಂದ್ರ ಜಡೇಜಾ, ಬುಮ್ರಾ ಬೇಗ ಗುಣಮುಖರಾಗಿ ಮೈದಾನಕ್ಕೆ ಮರಳಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ರವೀಂದ್ರ ಜಡೇಜಾ ಇತ್ತೀಚೆಗೆ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಅವರು ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನು, ಜಸ್ಪ್ರೀತ್ ಬುಮ್ರಾ ಅವರ ಬೆನ್ನು ನೋವಿನ ಕಾರಣದಿಂದ ಟಿ20 ವಿಶ್ವಕಪ್ ಆಡುತ್ತಾರೋ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಅಕ್ಟೋಬರ್ 16 ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ನವೆಂಬರ್ 13 ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ಗೆ ಭುವಿ ಅನ್ನು ಕೈಬಿಟ್ಟ ಮಾಜಿ ಆಟಗಾರರು, ಹೇಗಿದೆ ನೋಡಿ ಶಾಸ್ತ್ರಿ-ಗಂಭೀರ್​ ವರ್ಲ್ಡ್ ಕಪ್ ಟೀಂ

ವಿಶ್ವಕಪ್​ಗೆ ಯಾರು ಇನ್? ಯಾರು ಔಟ್​?

ಇದೀಗ ಇಂತಹದೊಂದು ಪ್ರಶ್ನೆ ಎಲ್ಲಡೆ ಹರಿದಾಡುತ್ತಿದೆ. ಅದರಂತೆ ಯಜುವೇಂದ್ರ ಚಹಾಲ್, ದೀಪಕ್ ಚಹಾರ್ ಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುತ್ತಾ? ಈ ಪಟ್ಟಿಯಲ್ಲಿ ರವಿ ಬಿಷ್ಣೋಯ್ ಕೂಡ ಇದ್ದಾರೆ. ಯಾವ ಹೊಸ ಆಟಗಾರರಿಗೆ ಅವಕಾಶ ಸಿಗುತ್ತದೆ ಎಂಬುದು ಮುಖ್ಯ. 5 ಆಟಗಾರರು ಗಾಯಗೊಂಡಿರುವ ಕಾರಣ ರೋಹಿತ್ ಶರ್ಮಾ ಅವರ ಟೆನ್ಷನ್ ಹೆಚ್ಚಾಗಿದೆ.

ಸೂಪರ್ 12 ಪಂದ್ಯಗಳು ಅಕ್ಟೋಬರ್ 22 ರಿಂದ ಪ್ರಾರಂಭವಾಗಲಿವೆ. ಏತನ್ಮಧ್ಯೆ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಇಡೀ ಟೂರ್ನಿಯಲ್ಲಿ ಭಾರತ ಒಟ್ಟು ಐದು ಪಂದ್ಯಗಳನ್ನು ಆಡಲಿದೆ. ಮೊದಲ ಪಂದ್ಯ ಅಕ್ಟೋಬರ್ 23 ರಂದು ಪಾಕಿಸ್ತಾನ ವಿರುದ್ಧ, ಎರಡನೇ ಪಂದ್ಯ ಅಕ್ಟೋಬರ್ 27 ರಂದು ಎ ಗುಂಪಿನ ರನ್ನರ್ ಅಪ್ ವಿರುದ್ಧ, ಮೂರನೇ ಪಂದ್ಯ ಅಕ್ಟೋಬರ್ 30 ರಂದು ದಕ್ಷಿಣ ಆಫ್ರಿಕಾ ವಿರುದ್ಧ, ನಂತರ ನಾಲ್ಕನೇ ಪಂದ್ಯ ಬಾಂಗ್ಲಾದೇಶ ವಿರುದ್ಧ ನವೆಂಬರ್ 2 ಮತ್ತು ಐದನೇ ಪಂದ್ಯ ವಿಜೇತ ತಂಡದ ಜೊತೆ ಆಡಲಿದೆ.

ಇದನ್ನೂ ಓದಿ: Virat Kohli: ಒಂದೇ ಶತಕಕ್ಕೆ ದಾಖಲೆಗಳೆಲ್ಲಾ ಅಳಿಸಿ ಹಾಕಿದ ವಿರಾಟ್​​, ಕಿಂಗ್​ ಈಸ್​ ಬ್ಯಾಕ್​ ಎಂದ ಫ್ಯಾನ್ಸ್

T20 ವಿಶ್ವಕಪ್​ಗೆ ಭಾರತದ ಸಂಭಾವ್ಯ ತಂಡ:

ರೋಹಿತ್ ಶರ್ಮಾ (ಸಿ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಹರ್ಷದ್ ಪಟೇಲ್, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಜಸ್ಪ್ರಿತ್ ಬುಮ್ರಾ, ಯಜುವೇಂದ್ರ ಚಾಹಲ್, ದೀಪಕ್ ಚಾಹರ್, ಆರ. ಅಶ್ವೀನ್​.
Published by:shrikrishna bhat
First published: