ಇಂಗ್ಲೆಂಡ್​ನಲ್ಲಿ ಪತ್ನಿ-ಪ್ರೇಯಸಿ ಜೊತೆ ಟೀಂ ಇಂಡಿಯಾ ಆಟಗಾರರ ಮೋಜು-ಮಸ್ತಿ: ಬಿಸಿಸಿಐ ಖಡಕ್ ವಾರ್ನಿಂಗ್

news18
Updated:July 24, 2018, 10:40 PM IST
ಇಂಗ್ಲೆಂಡ್​ನಲ್ಲಿ ಪತ್ನಿ-ಪ್ರೇಯಸಿ ಜೊತೆ ಟೀಂ ಇಂಡಿಯಾ ಆಟಗಾರರ ಮೋಜು-ಮಸ್ತಿ: ಬಿಸಿಸಿಐ ಖಡಕ್ ವಾರ್ನಿಂಗ್
news18
Updated: July 24, 2018, 10:40 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್ ವಿರುದ್ಧ ಟಿ-20 ಸರಣಿಯನ್ನು ಗೆದ್ದು ಬೀಗಿ, ಏಕದಿನ ಸರಣಿಯಲ್ಲಿ ಮುಗ್ಗರಿಸಿದ್ದ ಕೊಹ್ಲಿ ಪಡೆ ನಾಲ್ಕು ದಿನ ವಿಶ್ರಾಂತಿ ದಿನವನ್ನು ಫುಲ್​ ಬಿಂದಾಸ್ ಆಗಿ ಕಳೆಯಿತು. ಟೀಮ್ ಇಂಡಿಯಾದ ಆಟಗಾರರು ಅವರವರ ಪತ್ನಿ, ಪ್ರೇಯಸಿಯರ​​ ಜೊತೆಗೆ ಸುತ್ತಿದ್ದೇ ಸುತ್ತಿದ್ದು, ಸೆಲ್ಫಿ ತೆಗೆದಿದ್ದೇ ಬಂತು. ಆದರೀಗ ಈ ಮೋಜು-ಮಸ್ತಿಗೆ ಬ್ರೇಕ್​ ಬಿದ್ದಿದೆ. ಫುಲ್​ ಎಂಜಾಯ್​ ಮಾಡುತ್ತಿದ್ದ ಕ್ರಿಕೆಟಿಗರಿಗೆ ಬಿಸಿಸಿಐ ಕಟ್ಟಪ್ಪಣೆ ಹೊರಡಿಸಿದೆ.

ಇಂಗ್ಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿ ಟೀಮ್ ಇಂಡಿಯಾಕ್ಕೆ ಕಬ್ಬಿಣದ ಕಡಲೆಯಾಗಿದೆ. ಹೀಗಾಗೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತೀಯ ಆಟಗಾರರು, ಪತ್ನಿ ಅಥವಾ ಪ್ರೇಯಸಿಯನ್ನು ಭೇಟಿಯಾಗುವಂತಿಲ್ಲ. ಮೂರು ಟೆಸ್ಟ್ ಪಂದ್ಯ ಮುಗಿಯುವವರೆಗೂ ಪ್ರೇಯಸಿ ಅಥವಾ ಪತ್ನಿಗೆ ಕ್ಯಾಂಪ್ ನಲ್ಲಿ ಪ್ರವೇಶವಿಲ್ಲವೆಂಬ ಸೂಚನೆ ಹೊರಬಿದ್ದಿದೆ. ಆಟಗಾರರು ಟೆಸ್ಟ್​ಗೆ ಸಿದ್ಧವಾಗುವ ಅಗತ್ಯವಿದೆ. ಹಾಗಾಗಿ ಕೆಲ ಆಟಗಾರರ ಪತ್ನಿ ಹಾಗೂ ಪ್ರೇಯಸಿಯರಿಗೆ ಜಾಗ ಬಿಡುವಂತೆ ಸೂಚನೆ ನೀಡಲಾಗಿದೆಯಂತೆ.

ಏಕದಿನ ಪಂದ್ಯದ ನಂತರ ಸಾಮಾಜಿಕ ಜಾಲತಾಣದಲ್ಲಿ ಆಟಗಾರರ ಫೋಟೋಗಳು ಹರಿದಾಡುತ್ತಿದ್ದವು. ಇದರಿಂದ ಆಟಗಾರರು ತರಬೇತಿ ಪಡೆಯುತ್ತಿದ್ದಾರಾ ಅಥವಾ ಪ್ರವಾಸಕ್ಕೆ ತೆರಳಿದ್ದಾರಾ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳನ್ನು ಕಾಡಿತ್ತು. ಸದ್ಯ ಆಟಗಾರರು ತರಬೇತಿ ಪ್ರಾರಂಭಿಸಿದ್ದು, ಬಿಸಿಸಿಐ  ಜಾರಿಗೊಳಿಸಿರುವ ಈ ನಿಯಮ ಮುಂಬರುವ ಟೆಸ್ಟ್​ ಸರಣಿಯ ಗಂಭೀರತೆಗೆ ನಿದರ್ಶನವಾಗಿದೆ.
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...