'ಇದೊಂದು ತಲೆ ಇಲ್ಲದ ನಿರ್ಧಾರ': ಏಷ್ಯಾಕಪ್ 2018 ವೇಳಾಪಟ್ಟಿ ವಿರುದ್ಧ ಕಿಡಿಕಾರಿದ ಬಿಸಿಸಿಐ

news18
Updated:July 26, 2018, 3:36 PM IST
'ಇದೊಂದು ತಲೆ ಇಲ್ಲದ ನಿರ್ಧಾರ': ಏಷ್ಯಾಕಪ್ 2018 ವೇಳಾಪಟ್ಟಿ ವಿರುದ್ಧ ಕಿಡಿಕಾರಿದ ಬಿಸಿಸಿಐ
news18
Updated: July 26, 2018, 3:36 PM IST
ನ್ಯೂಸ್ 18 ಕನ್ನಡ

ನವ ದೆಹಲಿ (ಜುಲೈ. 26): ಸೆಪ್ಟೆಂಬರ್​​​ 19 ರಂದು ನಡೆಯಲಿರುವ ಏಷ್ಯಾಕಪ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಮುಖಾಮುಖಿಗೆ ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಈ ಪಂದ್ಯಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಿಡಿ ಕಾರಿದೆ.

ಮೊನ್ನಯಷ್ಟೆ 2018ರ ಏಷ್ಯಾಕಪ್​​ ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಗೊತ್ತು ಮಾಡಿದ ವೇಳಾಪಟ್ಟಿಯ ಬಗ್ಗೆ ಬಿಸಿಸಿಐ ಇದೊಂದು ಮೈಂಡ್​​​​ಲೆಸ್​​​(ತಲೆ ಇಲ್ಲದ ನಿರ್ಧಾರ) ಎಂದು ತೀವ್ರ ವಿರೋಧ ವ್ಯಕ್ತಪಡಿಸಿದೆ. ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತಕ್ಕೆ ಕ್ವಾಲಿಫೈಯರ್ ಪಂದ್ಯವನ್ನು ನಿಗದಿ ಪಡಿಸಲಾಗಿದ್ದು, ಎರಡು ದಿನ ಎಡೆಬಿಡದೆ ಪಂದ್ಯವನ್ನು ಆಯೋಜಿಸಲಾಗಿದೆ. ಇದನ್ನು ಯಾವುದೇ ಕಾರಣಕ್ಕೆ ಒಪ್ಪಲಾಗುವುದಿಲ್ಲ. ವೇಳಾಪಟ್ಟಿ ತಯಾರಿಸುವಾಗ ಒಂದೇ ರೀತಿಯಲ್ಲಿ ತಯಾರಿಸಬೇಕು, ಬಿಡುಗಡೆಯಾಗಿರುವ ವೇಳಾಪಟ್ಟಿಯನ್ನು ಬದಲಿಸಬೇಕೆಂದು ಬಿಸಿಸಿಐಯ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನ ತಂಡ ಸೆಪ್ಟೆಂಬರ್ 16 ರಂದು ಕ್ವಾಲಿಫೈಯರ್ ಪಂದ್ಯವಾಡಿದರೆ ಮುಂದಿನ ಪಂದ್ಯ ಸೆ. 18ಕ್ಕೆ ಭಾರತದ ವಿರುದ್ಧ. ಆದರೆ ಭಾರತ ಸೆ. 18ರಂದು ಕ್ವಾಲಿಫೈರ್ ಪಂದ್ಯವಾಡಿ ಮುಂದಿನ ದಿನವೇ(ಸೆ. 19) ಪಾಕ್ ವಿರುದ್ಧ ಕಾದಾಟ ನಡೆಸಬೇಕಿದೆ. ಇಲ್ಲಿ ಪಾಕಿಸ್ತಾನಕ್ಕೆ ಎರಡು ದಿನಗಳ ವಿಶ್ರಾಂತಿ ದೊರೆಯುತ್ತದೆ, ಆದರೆ ಭಾರತ ಮುಂದಿನ ದಿನವೇ ಮತ್ತೊಂದು ಕಠಿಣ ಸವಾಲು ಎದುರಿಸಬೇಕಿದೆ. ಹೀಗಾಗಿ ಈ ವೇಳಾಪಟ್ಟಿ ಸರಿಯಿಲ್ಲ ಎಂದು ಬಿಸಿಸಿಐ ಆಕ್ರೋಶ ವ್ಯಕ್ತ ಪಡಿಸಿದೆ.

ಏಷ್ಯಾಕಪ್ ಪಂದ್ಯಾವಳಿಯ ವೇಳಾ ಪಟ್ಟಿ:

ಗ್ರೂಪ್ ಹಂತ:
Loading...

15 ಸೆ. - ಬಾಂಗ್ಲಾದೇಶ vs ಶ್ರೀಲಂಕಾ

16 ಸೆ. - ಪಾಕಿಸ್ತಾನ vs ಕ್ವಾಲಿಫೈಯರ್

17 ಸೆ. - ಶ್ರೀಲಂಕಾ vs ಅಫ್ಘಾನಿಸ್ತಾನ

18 ಸೆ. - ಭಾರತ vs ಕ್ವಾಲಿಫೈಯರ್

19 ಸೆ. - ಭಾರತ vs ಪಾಕಿಸ್ತಾನ

20 ಸೆ. - ಬಾಂಗ್ಲಾದೇಶ vs ಅಫ್ಘಾನಿಸ್ತಾನ

ಸೂಪರ್ ಫೋರ್:

21 ಸೆ. - ಗ್ರೂಪ್ ಎ ವಿನ್ನರ್ vs ಗ್ರೂಪ್ ಬಿ ರನ್ನರ್​​​​​ ಅಪ್

21 ಸೆ. - ಗ್ರೂಪ್ ಬಿ ವಿನ್ನರ್ vs ಗ್ರೂಪ್ ಎ ರನ್ನರ್​​​​​ ಅಪ್

23 ಸೆ. - ಗ್ರೂಪ್ ಎ ವಿನ್ನರ್ vs ಗ್ರೂಪ್ ಎ ರನ್ನರ್​​​​​ ಅಪ್

23 ಸೆ. - ಗ್ರೂಪ್ ಬಿ ವಿನ್ನರ್ vs ಗ್ರೂಪ್ ಬಿ ರನ್ನರ್​​​​​ ಅಪ್

25 ಸೆ. - ಗ್ರೂಪ್ ಎ ವಿನ್ನರ್ vs ಗ್ರೂಪ್ ಬಿ ರನ್ನರ್​​​​​

26 ಸೆ. - ಗ್ರೂಪ್ ಎ ವಿನ್ನರ್ ಅಪ್ vs ಗ್ರೂಪ್ ಬಿ ರನ್ನರ್​​​​​ ಅಪ್

ಫೈನಲ್:

28 ಸೆ. - ಏಷ್ಯಾಕಪ್ ಫೈನಲ್
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...