• Home
  • »
  • News
  • »
  • sports
  • »
  • T20 World Cup 2022: ಟೀಂ ಇಂಡಿಯಾಗೆ ಬಿಗ್​ ಶಾಕ್​, ಟಿ20 ವಿಶ್ವಕಪ್‌ನಿಂದ ಬುಮ್ರಾ ಔಟ್​

T20 World Cup 2022: ಟೀಂ ಇಂಡಿಯಾಗೆ ಬಿಗ್​ ಶಾಕ್​, ಟಿ20 ವಿಶ್ವಕಪ್‌ನಿಂದ ಬುಮ್ರಾ ಔಟ್​

ಟೀಂ ಇಂಡಿಯಾ

ಟೀಂ ಇಂಡಿಯಾ

T20 World Cup 2022: ಐಸಿಸಿ ಟಿ20 ವಿಶ್ವಕಪ್‌ಗೂ (T20 World Cup 2022) ಮುನ್ನವೇ ಭಾರತ ಕ್ರಿಕೆಟ್ ತಂಡ (Team India) ಭಾರೀ ಹಿನ್ನಡೆ ಅನುಭವಿಸಿದೆ. ಗಾಯದಿಂದ ಚೇತರಿಸಿಕೊಂಡ ನಂತರ ಪುನರಾಗಮನ ಮಾಡಿದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತೆ ಗಾಯಗೊಂಡಿದ್ದಾರೆ. 

ಮುಂದೆ ಓದಿ ...
  • Share this:

ಐಸಿಸಿ ಟಿ20 ವಿಶ್ವಕಪ್‌ಗೂ (T20 World Cup 2022) ಮುನ್ನವೇ ಭಾರತ ಕ್ರಿಕೆಟ್ ತಂಡ (Team India) ಭಾರೀ ಹಿನ್ನಡೆ ಅನುಭವಿಸಿದೆ. ಗಾಯದಿಂದ ಚೇತರಿಸಿಕೊಂಡ ನಂತರ ಪುನರಾಗಮನ ಮಾಡಿದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತೆ ಗಾಯಗೊಂಡಿದ್ದಾರೆ. ಬೆನ್ನುನೋವಿನ ಕಾರಣ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಗೆ ಗೈರುಹಾಜರಾಗಿದ್ದರು. ಆದರೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಇತ್ತೀಚಿನ ಗಾಯದಿಂದ ಬುಮ್ರಾ ಚೇತರಿಸಿಕೊಳ್ಳಲು ನಾಲ್ಕರಿಂದ ಆರು ತಿಂಗಳು ತೆಗೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಅವರು ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯಲಿದ್ದಾರೆ ಎಂಬ ವರದಿಗಳಿವೆ. ಹೀಗಾಗಿ ಮೂಲಗಳು ತಿಳಿಸಿರುವ ಹಾಗೆ ಬುಮ್ರಾ ಟಿ20 ವಿಶ್ವಕಪ್​ಗೆ ಗೈರಾಗುವ ಎಲ್ಲಾ ಸಾಧ್ಯತೆಗಳಿದ್ದು, ಆದರೆ ಯಾವುದೇ ಅಧಿಕೃತ ಮಾಹಿತಿ ಲಭ್ಯ ವಾಗಿಲ್ಲ.


ವಿಶ್ವಕಪ್​​ನಿಂದ ಹೊರನಡೆದ ಬುಮ್ರಾ?:


ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಿಂದಲೇ ಬುಮ್ರಾ ಹೊರಗುಳಿದಿದ್ದರು. ಬಿಸಿಸಿಐ ಮೂಲಗಳ ಪ್ರಕಾರ, ಈಗ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಿಂದ ಬುಮ್ರಾ ಹೊರಗುಳಿದಿದ್ದಾರೆ ಎಂದು ಪಿಟಿಐ ತಿಳಿಸಿದೆ. ಮಂಡಳಿಯಲ್ಲಿ ಅವರ ಗಾಯದ ಬಗ್ಗೆ, ವೈದ್ಯಕೀಯ ತಂಡವು ಅದರ ಮೇಲೆ ಕಣ್ಣಿಟ್ಟಿದೆ ಎಂದು ತಿಳಿದುಬಂದಿದೆ.ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ ಸರಣಿಯ ವೇಳೆ ಗಾಯಗೊಂಡಿದ್ದರು. ಅಂದಿನಿಂದ ಅವರು ರಿಹ್ಯಾಬ್‌ನಲ್ಲಿದ್ದರು ಮತ್ತು ಏಷ್ಯಾ ಕಪ್‌ನಲ್ಲಿಯೂ ಆಡಲಿಲ್ಲ. ಅದೇ ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸ್ವದೇಶಿ ಟಿ20 ಸರಣಿಯಲ್ಲಿ ಅವರು ಗಾಯದಿಂದ ಮರಳಿದರು. ಈ ಸರಣಿಯಲ್ಲಿ ಅವರು ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದ್ದರು.


ಇದನ್ನೂ ಓದಿ: Litton Das: ದುರ್ಗಾ ಪೂಜೆಗೆ ಶುಭಕೋರಿ ಸಂಕಷ್ಟಕ್ಕೆ ಸಿಲುಕಿದ ಕ್ರಿಕೆಟರ್​, ಮತಾಂತರವಾಗುವಂತೆ ಬೆದರಿಕೆ!


ಮೊತ್ತೊಮ್ಮೆ ಗಾಯಗೊಂಡ ಬುಮ್ರಾ:


ಬೆನ್ನುನೋವಿನಿಂದಾಗಿ ಜಸ್ಪ್ರೀತ್ ಬುಮ್ರಾ ಏಷ್ಯಾಕಪ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ.  ಇದು ಟೀಂ ಇಂಡಿಯಾಗೆ ಹೆಚ್ಚು ಹೊಡೆತ ಬಿದ್ದಿತು. ಏಕೆಂದರೆ ಭಾರತ ತಂಡ ಏಷ್ಯಾ ಕಪ್ ಅನ್ನು ಸೂಪರ್ ಫೋರ್ ಸುತ್ತಿನಲ್ಲಿಯೇ ಹೊರಬಂದಿತು. ಆದರೆ ನಂತರ ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಬುಮ್ರಾ ಪುನರಾಗಮನ ಮಾಡಿದರು. ಆ ಬಳಿಕ ಹೈದರಾಬಾದ್ ಪರ ಕೊನೆಯ ಟಿ20ಯಲ್ಲಿ ಆಡಿದ್ದರು. ಆದರೆ ಈ ಎರಡು ಪಂದ್ಯಗಳ ಬಳಿಕ ಬುಮ್ರಾ ಗಾಯದ ಸಮಸ್ಯೆ ಮತ್ತೊಮ್ಮೆ ಒಳಗಾಗಿದ್ದಾರೆ.2022 ರಲ್ಲಿ ಕೇವಲ 5 ಪಂದ್ಯಗಳು:


ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಸಮಸ್ಯೆಯಿಂದಾಗಿ, ಅವರು ಈ ವರ್ಷ ಕೆಲವೇ ಕೆಲವು ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧ ಎರಡು, ಆಗಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಒಂದು ಮತ್ತು ಇತ್ತೀಚಿನ ಆಸ್ಟ್ರೇಲಿಯಾ ವಿರುದ್ಧದ ಎರಡು ಸರಣಿ ಸೇರಿದಂತೆ ಈ ವರ್ಷ ಒಟ್ಟು 5 ಟಿ20 ಪಂದ್ಯಗಳನ್ನು ಆಡಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಲ್ಲಿ ಟೀಂ ಇಂಡಿಯಾದ ಈ ಸ್ಟಾರ್ ಬೌಲರ್ ಫಿಟ್ನೆಸ್ ಬಗ್ಗೆ ಚಿಂತೆ ಹೆಚ್ಚಾಗಿದೆ.

Published by:shrikrishna bhat
First published: