• Home
  • »
  • News
  • »
  • sports
  • »
  • BCCI: ಬಿಸಿಸಿಐ ಐತಿಹಾಸಿಕ ನಿರ್ಧಾರ, ಮಹಿಳಾ ಕ್ರಿಕೆಟಿಗರಿಗೂ ಪುರುಷರಷ್ಟೇ ಸಮಾನ ವೇತನ

BCCI: ಬಿಸಿಸಿಐ ಐತಿಹಾಸಿಕ ನಿರ್ಧಾರ, ಮಹಿಳಾ ಕ್ರಿಕೆಟಿಗರಿಗೂ ಪುರುಷರಷ್ಟೇ ಸಮಾನ ವೇತನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

BCCI: ಭಾರತೀಯ ಪುರುಷ ಮತ್ತು ಮಹಿಳಾ ಆಟಗಾರರಿಗೆ ಸಂಬಂಧಿಸಿದಂತೆ ಇಂದು ಬಿಸಿಸಿಐ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಮಹಿಳಾ ಮತ್ತು ಪುರುಷ ಕ್ರಿಕೆಟಿಗರಿಗೆ ಸಮಾನ ಸಂಭಾವನೆ ಸಿಗಲಿದೆ.

  • Share this:

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಂದರೆ ಬಿಸಿಸಿಐ (BCCI) ಐತಿಹಾಸಿಕ ನಿರ್ಧಾರ ಕೈಗೊಂಡಿದೆ. BCCI ಕಾರ್ಯದರ್ಶಿ ಜಯ್ ಶಾ (Jay Shah) ಅವರು ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ಸಂಭಾವನೆ ಘೋಷಿಸಿದ್ದಾರೆ. ನ್ಯೂಜಿಲೆಂಡ್ ನಂತರ ಇಂತಹ ಘೋಷಣೆ ಮಾಡಿದ ಎರಡನೇ ಕ್ರಿಕೆಟ್ ಮಂಡಳಿ BCCI ಆಗಿದೆ. ಬಿಸಿಸಿಐ ಇಂದು ಈ ಐತಿಹಾಸಿಕ ನಿರ್ಧಾರ ಪ್ರಕಟಿಸಿದೆ. ಅದರಂತೆ BCCI ಜತೆ ಒಪ್ಪಂದ ಮಾಡಿಕೊಂಡಿರುವ ಮಹಿಳಾ ಕ್ರಿಕೆಟಿಗರು ಪುರುಷ ಕ್ರಿಕೆಟಿಗರಿಗೆ ಸಿಗುವ ವೇತನವನ್ನೇ ಪಡೆಯಲಿದ್ದಾರೆ.


ಜೈ ಶಾ ಹೇಳಿದ್ದೇನು?:


BCCI ಕಾರ್ಯದರ್ಶಿ ಜಯ್ ಶಾ ಈ ಕುರಿತು ಟ್ವೀಟ್​ ಮಾಡಿದ್ದು, 'ಕ್ರಿಕೆಟ್‌ನಲ್ಲಿನ ತಾರತಮ್ಯವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಬಿಸಿಸಿಐ ಮೊದಲ ಹೆಜ್ಜೆ ಇಡುತ್ತಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ನಾವು ಗುತ್ತಿಗೆ ಆಟಗಾರರಿಗೆ ಒಂದೇ ರೀತಿಯ ಸಂಭಾವನೆ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ಇನ್ನು ಮುಂದೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯ ಶುಲ್ಕ ಒಂದೇ ಆಗಿರುತ್ತದೆ. ಹೊಸ ಯುಗಕ್ಕೆ ಕಾಲಿಡುತ್ತಿದ್ದೇವೆ’ ಎಂದು ಹೇಳಿದ್ದಾರೆ.



ಎಷ್ಟು ಸಂಭಾವನೆ ನೀಡಲಾಗುತ್ತದೆ?:


ಟೆಸ್ಟ್ - 15 ಲಕ್ಷ


ಒಂದು ದಿನ - 6 ಲಕ್ಷ


ಟಿ20 - 3 ಲಕ್ಷ


ಮಾಜಿ ಮಹಿಳಾ ಕ್ರಿಕೆಟಿಗರಿಂದ ಸ್ವಾಗತ:


ಇದೊಂದು ದೊಡ್ಡ ಸುದ್ದಿ ಎಂದು ಭಾರತದ ಮಾಜಿ ಕ್ರಿಕೆಟಿಗ ಅಂಜುಮ್ ಚೋಪ್ರಾ ಹೇಳಿದ್ದಾರೆ. ಇದಕ್ಕಾಗಿ ಬಿಸಿಸಿಐ ಮತ್ತು ಜೈ ಶಾಗೆ ಅಂಜುಮ್ ಧನ್ಯವಾದ ಹೇಳಿದ್ದಾರೆ. ಇದೊಂದು ಉತ್ತಮ ನಿರ್ಧಾರ ಎಂದು ಹೇಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್​ಗೂ ಹೆಚ್ಚಿನ ಪ್ರಾಮುಖ್ಯತೆ ದೊರಕುವ ಸೂಚನೆ ದೊರಕುತ್ತಿದೆ.


ಇದನ್ನೂ ಓದಿ: T20 WC 2022 IND vs PAK: ಟಿ20 ವಿಶ್ವಕಪ್​ನಲ್ಲಿ ಮತ್ತೆ ಭಾರತ-ಪಾಕ್​ ಪಂದ್ಯ, ಯಾವಾಗ?


ಐಪಿಎಲ್​ ಪಂದ್ಯದಲ್ಲಿ ಬದಲಾವಣೆ:


ಈಗಾಗಲೇ ತಿಳಿಸಿದಂತೆ ಬಿಸಿಸಿಐ ನೂತನ ಅಧ್ಯಕ್ಷರಾಗಿ ಆಯ್ಕೆ ಆದ ಕನ್ನಡಿಗ ರೋಜರ್ ಬಿನ್ನಿ ಇದೀಗ ಆರ್​ಸಿಬಿ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಅಲ್ಲಿ ಮಾತನಾಡಿದ ಅವರು, ಇಷ್ಟು ದಿನಗಳ ಕಾಲ ಕೇವಲ ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿತ್ತು. ಮುಂಬರುವ ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನಲ್ಲಲಿ ಮಾತ್ರವಲ್ಲದೇ ರಾಜ್ಯದ ಮೈಸೂರು, ಹುಬ್ಬಳ್ಳಿ ಮತ್ತು ಬೆಳಗಾವಿ ಮೈದಾನಗಳಲ್ಲಿಯೂ ನಡೆಸಲು ಚಿಂತನೆ ಮಾಡಲಾಗುತ್ತಿದೆ. ಈ ನಗರಗಳಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಬೇಕಾದ ಮೈದಾನಗಳು ಹಾಗೂ ಎಲ್ಲಾ ಮೂಲ ಸೌಕರ್ಯಗಳೂ ಇವೆ. ಹೀಗಾಗಿ ಆರ್​ಸಿಬಿ ಪಂದ್ಯಗಳನ್ನು ಇಲ್ಲಿಯೂ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: RCB ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, ಕರ್ನಾಟಕದ ಈ 4 ನಗರಗಳಲ್ಲಿ ನಡೆಯಲಿದೆ IPL


ಭಾರತ-ಪಾಕ್​ ಸರಣಿ ಕುರಿತು ಹೇಳಿಕೆ:


ಇನ್ನು, ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ, ‘ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ನಾವು ನಿರ್ಧರಿಸಿದ್ದೇವೆ. ನಾವು ಪಾಕಿಸ್ತಾನ ಬಿಟ್ಟು ಬೇರೆ ಸ್ಥಳದಲ್ಲಿ ಆಡುಲು ಇಚ್ಛಿಸುತ್ತೇವೆ. 2022ರ ಏಷ್ಯಾಕಪ್‌ನ ಆತಿಥ್ಯವನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸಲಾಯಿತು. ಆದರೆ, ಅಲ್ಲಿನ ರಾಜಕೀಯ ಪರಿಸ್ಥಿತಿ ಸರಿಯಿಲ್ಲದ ಕಾರಣ ಯುಎಇಯಲ್ಲಿ ಟೂರ್ನಿ ನಡೆಸಲಾಯಿತು. 2023ರಲ್ಲಿ, ಈ ಪಂದ್ಯಾವಳಿಯು ಪಾಕಿಸ್ತಾನದಲ್ಲಿ 50 ಓವರ್ ಮಾದರಿಯಲ್ಲಿ ನಡೆಯಲಿದೆ. ಆದರೆ, ಬಿಸಿಸಿಐನ MGM ಸಭೆಯಲ್ಲಿ ಪಾಕಿಸ್ತಾನಕ್ಕೆ ಹೋಗುವ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ‘ ಎಂದು ತಿಳಿಸದುಬಂದಿದೆ.

Published by:shrikrishna bhat
First published: