• Home
  • »
  • News
  • »
  • sports
  • »
  • Asia Cup 2023 IND vs PAK: ಏಷ್ಯಾ ಕಪ್‌ಗಾಗಿ ಪಾಕಿಸ್ತಾನಕ್ಕೆ ಹೋಗುತ್ತಾ ಟೀಂ ಇಂಡಿಯಾ? ಬಿಗ್ ಅಪ್‌ಡೇಟ್ಸ್ ಕೊಡ್ತು ಬಿಸಿಸಿಐ!

Asia Cup 2023 IND vs PAK: ಏಷ್ಯಾ ಕಪ್‌ಗಾಗಿ ಪಾಕಿಸ್ತಾನಕ್ಕೆ ಹೋಗುತ್ತಾ ಟೀಂ ಇಂಡಿಯಾ? ಬಿಗ್ ಅಪ್‌ಡೇಟ್ಸ್ ಕೊಡ್ತು ಬಿಸಿಸಿಐ!

IND vs PAK

IND vs PAK

Asia Cup 2023 IND vs PAK: ಮುಂದಿನ ವರ್ಷ ಪಾಕಿಸ್ತಾನದಲ್ಲಿ ಏಷ್ಯಾಕಪ್ ನಡೆಯಲಿದ್ದು, ಭಾರತ ತಂಡ ಅಲ್ಲಿಗೆ ಹೋಗುತ್ತದೋ ಇಲ್ಲವೋ? ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ದೊಡ್ಡ ಮಾಹಿತಿ ನೀಡಿದ್ದಾರೆ.

  • Share this:

ಏಷ್ಯಾ ಕಪ್ 2023 (Asia Cup 2023) ಪಾಕಿಸ್ತಾನದಲ್ಲಿ ನಡೆಯುತ್ತದೆ. ಆದರೆ ಈ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ಮಾಡಬೇಕು ಎಂದು ಬಿಸಿಸಿಐ ಕೇಳಿಕೊಂಡಿದೆ. ಮುಂಬೈನಲ್ಲಿ ನಡೆದ ಬಿಸಿಸಿಐ MGM ಸಭೆಯ ನಂತರ ಕಾರ್ಯದರ್ಶಿ ಜಯ್ ಶಾ (Jay Shah) ಇದನ್ನು ಖಚಿತಪಡಿಸಿದ್ದಾರೆ. ಮುಂದಿನ ವರ್ಷ ಏಷ್ಯಾಕಪ್ ತಟಸ್ಥ ಸ್ಥಳದಲ್ಲಿ ನಡೆಸಬೇಕು ಎಂದು ಜಯ್ ಶಾ ಹೇಳಿದ್ದಾರೆ. ಪಾಕಿಸ್ತಾನಕ್ಕೆ ತೆರಳಲು ಭಾರತ ತಂಡದ ಅನುಮತಿಯನ್ನು ಸರ್ಕಾರವೇ ನಿರ್ಧರಿಸುತ್ತದೆ, ಆದ್ದರಿಂದ ನಾವು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ, 2023ರ ಏಷ್ಯಾಕಪ್‌ಗಾಗಿ ಈ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ನಡೆಸಲು ನಿರ್ಧರಿಸಬೇಕು. ಇಲ್ಲವಾದಲ್ಲಿ ಭಾರತ ತಂಡ (Team India) ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.


ಭಾರತ-ಪಾಕ್ ಪಂದ್ಯದ ಕುರಿತು ಸ್ಪಷ್ಟಪಡಿಸಿದ ಬಿಸಿಸಿಐ:


ವರದಿ ಪ್ರಕಾರ, ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ, "ತಟಸ್ಥ ಸ್ಥಳವು ಏಷ್ಯಾ ಕಪ್‌ಗೆ ಸಂಬಂಧಿಸಿದ ವಿಷಯವಲ್ಲ. ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ನಿರ್ಧರಿಸಿದ್ದೇವೆ. ನಾವು ತಟಸ್ಥ ಸ್ಥಳದಲ್ಲಿ ಆಡುಲು ಇಚ್ಛಿಸುತ್ತೇವೆ. 2022ರ ಏಷ್ಯಾಕಪ್‌ನ ಆತಿಥ್ಯವನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸಲಾಯಿತು. ಆದರೆ, ಅಲ್ಲಿನ ರಾಜಕೀಯ ಪರಿಸ್ಥಿತಿ ಸರಿಯಿಲ್ಲದ ಕಾರಣ ಯುಎಇಯಲ್ಲಿ ಟೂರ್ನಿ ನಡೆಸಲಾಯಿತು. 2023 ರಲ್ಲಿ, ಈ ಪಂದ್ಯಾವಳಿಯು ಪಾಕಿಸ್ತಾನದಲ್ಲಿ 50 ಓವರ್ ಮಾದರಿಯ ಅಡಿಯಲ್ಲಿ ನಡೆಯಲಿದೆ. ಇದಾದ ಬಳಿಕ ಭಾರತದಲ್ಲಿ ಏಕದಿನ ವಿಶ್ವಕಪ್‌ ನಡೆಯಲಿದೆ. ಆರಂಭದಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಿ ಏಷ್ಯಾಕಪ್‌ನಲ್ಲಿ ಭಾಗವಹಿಸುವ ಆಯ್ಕೆಯನ್ನು ಬಿಸಿಸಿಐ ಮುಕ್ತವಾಗಿ ಇರಿಸಿದೆ ಎಂಬ ವರದಿಗಳು ಬಂದಿದ್ದವು. ಆದರೆ, ಬಿಸಿಸಿಐನ MGM ಸಭೆಯಲ್ಲಿ ಪಾಕಿಸ್ತಾನಕ್ಕೆ ಹೋಗುವ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಮುಂದಿನ ವರ್ಷ ಪಾಕ್​ನಲ್ಲಿ ಏಷ್ಯಾಕಪ್​:


ICC ಯಿಂದ ಇತ್ತೀಚೆಗೆ ಬಿಡುಗಡೆಯಾದ ಫ್ಯೂಚರ್ ಟೂರ್ ಪ್ರೋಗ್ರಾಂ ಅಂದರೆ FTP ಅಲ್ಲಿ, ಪಾಕಿಸ್ತಾನವು ಮುಂದಿನ 3 ವರ್ಷಗಳಲ್ಲಿ ಎರಡು ಪ್ರಮುಖ ICC ಈವೆಂಟ್‌ಗಳನ್ನು ಆಯೋಜಿಸುತ್ತದೆ. ಮುಂದಿನ ವರ್ಷ 50 ಓವರ್‌ಗಳ ಮಾದರಿಯಲ್ಲಿ ಏಷ್ಯಾ ಕಪ್ ಮತ್ತು 2025 ರಲ್ಲಿ ಚಾಂಪಿಯನ್ಸ್ ಟ್ರೋಫಿ ಕೂಡ ಪಾಕಿಸ್ತಾನದಲ್ಲಿ ನಡೆಯಲಿದೆ. ಸುಮಾರು ಒಂದು ದಶಕದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಪಾಕಿಸ್ತಾನಕ್ಕೆ ಮರಳಿದೆ. ಅದರ ನಂತರ, ಪಾಕಿಸ್ತಾನವು ಎರಡು ಪ್ರಮುಖ ಐಸಿಸಿ ಟೂರ್ನಿಗಳ ಆತಿಥ್ಯವನ್ನು ಪಡೆದಿರುವುದು ಇದೇ ಮೊದಲು. ಆದರೆ, ತಟಸ್ಥ ಸ್ಥಳದಲ್ಲಿ ಏಷ್ಯಾಕಪ್ ಆಯೋಜನೆ ಮಾಡಬೇಕು ಎಂದು ಬಿಸಿಸಿಐ ಹೇಳಿಕೆ ನೀಡಿದೆ. ಆದರೆ ಇದರ ಬಳಿಕ ಈ ವಿಚಾರದಲ್ಲಿ ಪಾಕಿಸ್ತಾನದ ನಿಲುವೇನು ಎಂಬುದನ್ನು ಕಾದು ನೋಡಬೇಕಿದೆ.


ಇದನ್ನೂ ಓದಿ: T20 WC 2022: ಅಭಿಮಾನಿಗಳಿಗೆ ಶಾಕ್ ನೀಡ್ತಾರಾ ಕೊಹ್ಲಿ, ರೋಹಿತ್? ಏಕದಿನ ವಿಶ್ವಕಪ್​ಗಾಗಿ ಈ ನಿರ್ಧಾರ ತೆಗೆದುಕೊಳ್ತಾರಾ ಸ್ಟಾರ್​ ಪ್ಲೇಯರ್ಸ್?


2005 ಕೊನೆಯ ಪ್ರವಾಸ:


2005-06ರಲ್ಲಿ ಕೊನೆಯ ಬಾರಿಗೆ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸಕ್ಕೆ ತೆರಳಿತ್ತು.  ನಂತರ ಭಾರತ ಏಕದಿನ ಸರಣಿಯಲ್ಲಿ ಪಾಕಿಸ್ತಾನವನ್ನು 4-1 ಅಂತರದಿಂದ ಸೋಲಿಸಿತು. ಅಂದಿನಿಂದ ಇದುವರೆಗೂ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗಿಲ್ಲ. ಅದೇ ಸಮಯದಲ್ಲಿ, ಪಾಕಿಸ್ತಾನ ತಂಡವು 2012 ರಲ್ಲಿ ಕೊನೆಯ ಬಾರಿಗೆ ಭಾರತಕ್ಕೆ ಬಂದಿತ್ತು. ನಂತರ ಉಭಯ ದೇಶಗಳ ನಡುವೆ ಟಿ20 ಹಾಗೂ ಏಕದಿನ ಸರಣಿ ನಡೆದಿಲ್ಲ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ.


ದ್ವಿಪಕ್ಷೀಯ ಸರಣಿ ಸಹ ನಡೆಯುವುದು ಡೌಟ್​: 


ಬಹುರಾಷ್ಟ್ರಗಳ ಪಂದ್ಯಾವಳಿಯ ಹೊರತಾಗಿಯೂ. ಭಾರತೀಯ ಪುರುಷರ ಕ್ರಿಕೆಟ್ ತಂಡವು 2023-2027ರಿಂದ 38 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದರಲ್ಲಿ 20 ಸ್ವದೇಶದಲ್ಲಿ ಮತ್ತು 18 ವಿದೇಶಿ ನೆಲದಲ್ಲಿ ಸೇರಿವೆ. ಟೀಂ ಇಂಡಿಯಾ ತವರಿನಲ್ಲಿ 21 ಪಂದ್ಯಗಳನ್ನು ಆಡಲಿದ್ದು. ವಿದೇಶದಲ್ಲೂ ಅಷ್ಟೇ ಸಂಖ್ಯೆಯ ಏಕದಿನ ಪಂದ್ಯಗಳನ್ನು ಆಡಲಿದೆ. ಈ ಅವಧಿಯಲ್ಲಿ ಭಾರತ ತವರಿನಲ್ಲಿ 31 ಮತ್ತು ವಿದೇಶದಲ್ಲಿ 30 ಟಿ20 ಪಂದ್ಯಗಳನ್ನು ಆಡಬೇಕಿದೆ. ಹೀಗಾಗಿ ಟೀಂ ಇಂಡಿಯಾ ಶಡ್ಯೂಲ್ ಸಖತ್ ಬ್ಯುಸಿಯಾಗಿದ್ದು, ಪಾಕ್​ ಜೊತೆಗಿನ ದ್ವಿಪಕ್ಷೀಯ ಸರಣಿ ಬಹುತೇಕ 2027ರವರೆಗೆ ನಡೆಯುವುದು ಡೌಟ್​ ಎನ್ನಲಾಗುತ್ತಿದೆ.


ಇದನ್ನೂ ಓದಿ: T20 World Cup 2022: ಟೀಂ ಇಂಡಿಯಾಗೆ ಮತ್ತೊಂದು ಬಿಗ್ ಶಾಕ್! ಸ್ಟಾರ್ ಆಟಗಾರನಿಗೆ ಗಾಯ


ಟಿ20 ವಿಶ್ವಕಪ್​ನಲ್ಲಿ ಭಾರತ-ಪಾಕ್ ಮುಖಾಮುಖಿ:


ಇನ್ನು, ಟೀಂ ಇಂಡಿಯಾ ವಿಶ್ವಕಪ್ 2022ರ ಅಭಿಯಾನದ ಮೊದಲ ಪಂದ್ಯದಲ್ಲಿಯೇ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ. ಕಳೆದ ವರ್ಷ, ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಪಾಕಿಸ್ತಾನ ತಂಡ ಸೋಲಿಸಿತ್ತು. ಆದರೆ ಈ ಬಾರಿ ಆ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಭಾರತ ಸಿದ್ಧವಾಗಿದೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಮುಖ್ಯವಾಗಿ, ಸುಮಾರು 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುವ ಎಂಸಿಜಿಯಲ್ಲಿ ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಒಂದು ತಿಂಗಳು ಮುಂಚಿತವಾಗಿ ಮಾರಾಟವಾಗಿವೆ. ಹೀಗಾಗಿ ಈ ಮೆಗಾ ಪಂದ್ಯದ ವೇಳೆ ಎರಡೂ ತಂಡಗಳಿಗೆ ಮೈದಾನದಲ್ಲಿ ಅಭಿಮಾನಿಗಳಿಂದ ಉತ್ತಮ ಬೆಂಬಲ ಸಿಗಲಿದೆ.

Published by:shrikrishna bhat
First published: