• Home
  • »
  • News
  • »
  • sports
  • »
  • BCCI ಸ್ವಚ್ಛತಾ ಅಭಿಯಾನ ಆರಂಭ; ನಾಯಕತ್ವ, ಆಯ್ಕೆ ಸಮಿತಿ ನಂತ್ರ ಯಾರಿಗೆ ಕಾದಿದೆ ಶಾಕ್​?

BCCI ಸ್ವಚ್ಛತಾ ಅಭಿಯಾನ ಆರಂಭ; ನಾಯಕತ್ವ, ಆಯ್ಕೆ ಸಮಿತಿ ನಂತ್ರ ಯಾರಿಗೆ ಕಾದಿದೆ ಶಾಕ್​?

BCCI

BCCI

BCCI: ಬಿಸಿಸಿಐ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದೆ. ಇದೀಗ ಬಿಸಿಸಿಐ ಭವಿಷ್ಯದಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ.

  • Share this:

    ಟಿ20 ವಿಶ್ವಕಪ್ 2022ರ ಹೀನಾಯ ಸೋಲಿನ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟೀಂ ಇಂಡಿಯಾದಲ್ಲಿ (Team India) ಅನೇಕ ಬದಲಾವಣೆಯನ್ನು ಮಾಡುತ್ತಿದೆ. ಬಿಸಿಸಿಐನ ಈ ಸ್ವಚ್ಛತಾ ಅಭಿಯಾನವು ಟೀಂ ಇಂಡಿಯಾದ ಮುಂಬರುವ ODI ಮತ್ತು T20 ವಿಶ್ವಕಪ್ (T20 World Cup) ಮಿಷನ್‌ನ ಆರಂಭದ ಹಂತವಾಗಿದೆ. ಈಗಾಗಲೇ ಬಿಸಿಸಿಐ ಚೇತನ್ ಶರ್ಮಾ (Chetan Sharma) ನೇತೃತ್ವದ ಆಯ್ಕೆ ಸಮಿತಿಯನ್ನು ವಿಸರ್ಜಿಸಿ ಎಲ್ಲರಿಗೂ ಶಾಕ್ ನೀಡಿದೆ. ಇದೀಗ ಬಿಸಿಸಿಐ ಭವಿಷ್ಯದಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.


    ಆಯ್ಕೆ ಸಮಿತಿಯ ವಜಾ:


    ಚೇತನ್ ಶರ್ಮಾ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಮುಖ್ಯ ಆಯ್ಕೆಗಾರರಾಗಿದ್ದರು. ಇದಲ್ಲದೆ, ಹರ್ವಿಂದರ್ ಸಿಂಗ್, ಸುನೀಲ್ ಜೋಶಿ, ದೇಬಶಿಶ್ ಮೊಹಂತಿ ವಿವಿಧ ವಲಯಗಳ ಸದಸ್ಯರಾಗಿದ್ದರು. ಇವರೆಲ್ಲರಿಗೂ ಬಿಸಿಸಿಐ ಮನೆಯ ದಾರಿ ತೋರಿಸಿದೆ. ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲಿನ ನಂತರ, ಭಾರತ ತಂಡದ ನಿರ್ವಹಣೆ ಮತ್ತು ಆಯ್ಕೆ ಸಮಿತಿಯನ್ನು ಟೀಕಿಸಲಾಯಿತು. ಆದರೆ ನಂತರ ಬಿಸಿಸಿಐ ಇದರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಅದು ಆಯ್ಕೆ ಸಮಿತಿಯೊಂದಿಗೆ ಪ್ರಾರಂಭವಾಗಿದೆ ಎಂದು ಹೇಳಬಹುದು.



    ಬಿಸಿಸಿಐನ ಮಹತ್ವದ ನಿರ್ಧಾರಗಳು:


    ಆಯ್ಕೆ ಸಮಿತಿಯನ್ನು ವಿಸರ್ಜಿಸಿದ ಬಿಸಿಸಿಐ ತಕ್ಷಣವೇ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ರಚಿಸಲು ಅರ್ಜಿಗಳನ್ನು ಆಹ್ವಾನಿಸಿದೆ. ಅದಕ್ಕೆ ನವೆಂಬರ್ 28 ಕೊನೆಯ ದಿನವಾಗಿದೆ. ಅರ್ಜಿದಾರರ ಸಂದರ್ಶನದ ನಂತರ ಮುಂದಿನ ಜನವರಿಯೊಳಗೆ ಹೊಸ ಆಯ್ಕೆ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಗೆ ಬಹುದೊಡ್ಡ ಜವಾಬ್ದಾರಿ ಇರಲಿದೆ. ಏಕೆಂದರೆ ಟೀಂ ಇಂಡಿಯಾ ಇನ್ನೆರಡು ವರ್ಷಗಳಲ್ಲಿ ಎರಡು ವಿಶ್ವಕಪ್ ಆಡಲಿದೆ. 2023ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಆಯೋಜಿಸಲಾಗಿದೆ. ಟಿ20 ವಿಶ್ವಕಪ್ 2024ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿದೆ.




    ಹಾರ್ದಿಕ್ ಪಾಂಡ್ಯ ನಿಯಮಿತ ನಾಯಕ:


    ಸಿಕ್ಕಿರುವ ಮಾಹಿತಿಯ ಪ್ರಕಾರ 2024ರ ಟಿ20 ವಿಶ್ವಕಪ್‌ಗೆ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ತಂಡವನ್ನು ಅಣಿಗೊಳಿಸಬಹುದು. ಅದಕ್ಕಾಗಿ ಪಾಂಡ್ಯ ಅವರಿಗೆ ಟಿ20 ಮಾದರಿಯ ನಿಯಮಿತ ನಾಯಕತ್ವ ನೀಡುವ ಸಾಧ್ಯತೆ ಇದೆ. ರೋಹಿತ್ ಶರ್ಮಾ ಏಕದಿನ ಮತ್ತು ಟೆಸ್ಟ್ ನಾಯಕರಾಗಿ ಉಳಿಯಲಿದ್ದಾರೆ. ಒಟ್ಟಿನಲ್ಲಿ ಬಿಸಿಸಿಐನಲ್ಲಿ ಆಗಿರುವ ಈ ಬದಲಾವಣೆಗಳನ್ನು ನೋಡಿದರೆ ಮುಂದಿನ ವರ್ಷಗಳಲ್ಲಿ ಭಾರತ ತಂಡದಲ್ಲಿ ಭಾರೀ ಸಂಚಲನ ಮೂಡುವ ಸಾಧ್ಯತೆ ಇದೆ.


    ಇದನ್ನೂ ಓದಿ: ICC ODI Rankings: ನೂತನ ಐಸಿಸಿ ಏಕದಿನ ರ್‍ಯಾಂಕಿಂಗ್‌ ಪ್ರಕಟ, ಟೀಂ ಇಂಡಿಯಾಗೆ ಯಾವ ಸ್ಥಾನ?


    ಧೋನಿಗೆ ಟಿ20 ಕ್ರಿಕೆಟ್​ ಕೋಚ್​ ಹುದ್ದೆ?:


    ಇನ್ನು, 41 ವರ್ಷದ ಧೋನಿ ಅವರು 2013ರಲ್ಲಿ ಭಾರತವನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನೂ ತಂದುಕೊಟ್ಟಿದ್ದರು. ಈ ಮೂಲಕ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ವಿಶ್ವದ ಏಕೈಕ ನಾಯಕ ಎಂಬ ಖ್ಯಾತಿ ಪಡೆದುಕೊಂಡರು. ಟೆಲಿಗ್ರಾಫ್ ಸುದ್ದಿ ಪ್ರಕಾರ, ಧೋನಿ ಐಪಿಎಲ್ 2023 ರ ನಂತರ ನಿವೃತ್ತರಾಗಬಹುದು ಎನ್ನಲಾಗಿದೆ. ಧೋನಿ ನಿವೃತ್ತಿಯ ನಂತರ ಬಿಸಿಸಿಐ ಅವರಿಗೆ ಮಹತ್ವದ ಹುದ್ದೆ ನೀಡಬಹುದು. ಅದರಲ್ಲಿಯೂ ರಾಹುಲ್ ದ್ರಾವಿಡ್ ಬದಲಿಗೆ ಧೋನಿ ಅವರನ್ನು ಟಿ20 ಕ್ರಿಕೆಟ್​ನ ಕೋಚ್​ ಆಗಿ ನೇಮಿಸುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

    Published by:shrikrishna bhat
    First published: