ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ (Chetan Sharma) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗಷ್ಟೇ ಅವರು ಸ್ಟ್ರಿಂಗ್ ಅಪರೇಷನ್ ಸಮಯದಲ್ಲಿ ನೀಡಿದ ಹೇಳಿಕೆ ಮೂಲಕ ವಿವಾದಕ್ಕೆ ಒಳಗಾಗಿದ್ದರು. ಭಾರತದ ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ, ಭಾರತೀಯ ಆಟಗಾರರು ಗಾಯವನ್ನು ಮರೆಮಾಡಲು ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು (Virat Kohli ) ಸುಳ್ಳುಗಾರ ಎಂದು ಕರೆದಿದ್ದರು. ಅಂದಿನಿಂದ ಅವರ ಮೇಲೆ ರಾಜೀನಾಮೆ ನೀಡುವಂತೆ ಒತ್ತಡವಿತ್ತು. ಅವರು ತಮ್ಮ ರಾಜೀನಾಮೆಯನ್ನು ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ ಅವರಿಗೆ ಕಳುಹಿಸಿದ್ದಾರೆ. ಅವರು ಎರಡನೇ ಬಾರಿಗೆ ಮುಖ್ಯ ಆಯ್ಕೆಗಾರರಾಗಿ ಆಯ್ಕೆ ಆಗಿದ್ದರು.
ಚೇತನ್ ಶರ್ಮಾ ರಾಜೀನಾಮೆ:
ಸುದ್ದಿ ಸಂಸ್ಥೆ ANI ಪ್ರಕಾರ, ಚೇತನ್ ಶರ್ಮಾ ಅವರು ತಮ್ಮ ರಾಜೀನಾಮೆಯನ್ನು ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರಿಗೆ ಕಳುಹಿಸಿದ್ದಾರೆ, ಅದನ್ನು ಅಂಗೀಕರಿಸಲಾಗಿದೆ. 2022ರ ಟಿ 20 ವಿಶ್ವಕಪ್‌ನಲ್ಲಿ ಭಾರತ ತಂಡದ ಕಳಪೆ ಪ್ರದರ್ಶನದ ನಂತರ, ಬಿಸಿಸಿಐ ಆಯ್ಕೆ ಸಮಿತಿಯನ್ನು ವಜಾಗೊಳಿಸಿತ್ತು. ಆಗಲೂ ಚೇತನ್ ಶರ್ಮಾ ಮುಖ್ಯ ಆಯ್ಕೆಗಾರರಾಗಿದ್ದರು. ಇದಾದ ಬಳಿಕ ಅವರಿಗೆ ಮತ್ತೆ ಈ ಜವಾಬ್ದಾರಿ ಸಿಕ್ಕಿತ್ತು. ಆದರೆ ಇದಾದ ಬಳಿಕ ವಿವಾದದಿಂದಾಗಿ ಕುರ್ಚಿ ಕಳೆದುಕೊಳ್ಳಬೇಕಾಯಿತು.
BCCI chief selector Chetan Sharma resigns from his post. He sent his resignation to BCCI Secretary Jay Shah who accepted it.
(File Pic) pic.twitter.com/1BhoLiIbPc
— ANI (@ANI) February 17, 2023
ಇದನ್ನೂ ಓದಿ: CSK 2023: ಐಪಿಎಲ್ ಆರಂಭಕ್ಕೂ ಮುನ್ನ ಚೆನ್ನೈ ತಂಡಕ್ಕೆ ಆಘಾತ, ಸಂಪೂರ್ಣ ಟೂರ್ನಿಯಿಂದಲೇ ಸ್ಟಾರ್ ಬೌಲರ್ ಔಟ್!
ಚುಚ್ಚುಮದ್ದು ವಿವಾದ:
ಚೇತನ್ ಶರ್ಮಾ, ಟೀಂ ಇಂಡಿಯಾ ಆಟಗಾರರು ಶೇಕಡಾ 80 ರಷ್ಟು ಫಿಟ್ ಆಗಿರುವಾಗ ಚುಚ್ಚುಮದ್ದು ತೆಗೆದುಕೊಳ್ಳುವ ಮೂಲಕ 100 ಪ್ರತಿಶತ ಫಿಟ್ ಎಂದು ಸಾಬೀತುಪಡಿಸುತ್ತಾರೆ ಎಂದು ಹೇಳಿದ್ದರು. ಅದರಲ್ಲಿ ಪೆನ್ ಕಿಲ್ಲರ್ ಇಲ್ಲದಿದ್ದರೂ. ಈ ಕಾರಣದಿಂದಾಗಿ ಅವರು ಡೋಪ್ ನಿಂದ ತಪ್ಪಿಸಿಕೊಳ್ಳುತ್ತಾರೆ ಎಂದು ಹೇಳಿದ್ದರು. ಬಿಸಿಸಿಐ ಹೊರತಾಗಿ, ದೊಡ್ಡ ಕ್ರಿಕೆಟಿಗರು ತಮ್ಮದೇ ಆದ ವೈದ್ಯರನ್ನು ಹೊಂದಿದ್ದಾರೆ ಎಂದು ಅವರು ಹೇಳಿಕೊಂಡಿದ್ದರು. ಹಾಗೆ ಮಾಡಲು ಈ ವೈದ್ಯರು ಅವರಿಗೆ ಸಹಾಯ ಮಾಡುತ್ತಾರೆ ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಯಾಗಿತ್ತು.
ಆಯ್ಕೆಗಾರರ ಸಮಿತಿಗೆ ಧೋನಿ ಆಯ್ಕೆ:
ಇದೀಗ ಚೇತನ್ ಶರ್ಮಾ ಆಯ್ಕೆಗಾರರ ಸಮೀತಿಗೆ ರಾಜೀನಾಮೆ ನೀಡಿದ ಹಿನ್ನಲೆ ಅವರ ಸ್ಥಾನಕ್ಕೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಬಿಸಿಸಿಐ ಆಯ್ಕೆ ಮಾಡಬೇಕು ಎಂಬ ಮಾತುಗಳು ಕೇಳಿಬರುತ್ತಿದೆ. ಅಲ್ಲದೇ ಬಿಸಿಸಿಐ ಮೂಲಗಳ ಪ್ರಕಾರ ಆಯ್ಕೆ ಸಮೀತಿ ಅಧ್ಯಕ್ಷರಾಗಿ ಧೋನಿ ಅವರನ್ನು ಆಯ್ಕೆ ಮಾಡಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ